ಕಲ್ಲಡ್ಕ: ಶ್ರೀರಾಮ ಪ್ರೌಢಶಾಲೆ ಇಲ್ಲಿ ‘ಕಣಾದ, ಎಂಬ ಹೆಸರಿನ 60 ಕಂಪ್ಯೂಟರ್‍ಗಳನ್ನು ಇಡುವುದಕ್ಕೆ ವ್ಯವಸ್ಥೆ ಇರುವ ನೂತನ ಗಣಕ ವಿಜ್ಞಾನ ಕೊಠಡಿಯನ್ನು ವಿಶ್ವದ ಪ್ರಪ್ರಥಮ ಅಣುವಿಜ್ಞಾನಿ ಕಣಾದ ಇವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ದೀಪ ಬೆಳಗಿಸುವ ಮೂಲಕ ಮಂಗಳೂರಿನ ಇನ್ಫೋಸಿಸ್ ಅಭಿವೃದ್ಧಿ ಕೇಂದ್ರದ ಮುಖ್ಯಸ್ಥರಾದ ವಾಸುದೇವ ಕಾಮತ್ ಉದ್ಘಾಟನೆ ಮಾಡಿದರು.
ಈ ಸಂದರ್ಭದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಅಧ್ಯಕ್ಷರಾದ ಡಾ| ಪ್ರಭಾಕರ ಭಟ್ ಕಲ್ಲಡ್ಕ, ವಿಶ್ವದ ಪ್ರಪ್ರಥಮ ವಿಜ್ಞಾನಿ “ಕಣಾದ” ಇವರ ಬಗ್ಗೆ ಮಾಹಿತಿಯನ್ನು ನೀಡಿದರು.
ಶಾಲಾ ಪರಿಚಯದ ವೀಡಿಯೋವನ್ನು ವೀಕ್ಷಿಸಿದ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಮಂಗಳೂರು ಇನ್ಫೋಸಿಸ್‍ನ ಹಿರಿಯ ಪ್ರಾದೇಶಿಕ ಮುಖ್ಯಸ್ಥರಾದ ಹರೀಶ್, ವಿಶ್ವಶ್ರೀ ಕ್ಷೇತ್ರ ಮಹಾಸಂಸ್ಥಾನ ಬೆಂಗಳೂರಿನ ಸಂಸ್ಥಾಪಕ ಧರ್ಮಾಧಿಕಾರಿಗಳಾದ ಉಮೇಶ್ ಶರ್ಮ, ವಿದ್ಯಾಕೇಂದ್ರದ ಅಧ್ಯಕ್ಷರಾದ ನಾರಾಯಣ ಸೋಮಯಾಜಿ, ಸಂಚಾಲಕರಾದ ವಸಂತ ಮಾಧವ, ಸಹ ಸಂಚಾಲಕರಾದ ರಮೇಶ್ ಎನ್, ರಾಷ್ಟ್ರಸೇವಿಕಾ ಸಮಿತಿಯ ಪ್ರಾಂತ ಕಾರ್ಯಕಾರಿಣಿ ಸದಸ್ಯರಾದ ಕಮಲ ಪ್ರಭಾಕರ ಭಟ್, ಪದವಿ ವಿಭಾಗದ ಪ್ರಾಂಶುಪಾಲರಾದ ಕೃಷ್ಣಪ್ರಸಾದ್, ಪದವಿ ಪೂರ್ವ ವಿಭಾಗದ ಪ್ರಾಂಶುಪಾಲರಾದ ವಸಂತ ಬಲ್ಲಾಳ್, ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯರಾದ ರವಿರಾಜ್ ಕಣಂತೂರು, ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಶಾಂಭವಿ ಮಾತಾಜಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಕುಶಾಲಪ್ಪ ಶ್ರೀಮಾನ್ ಅಮ್ಟೂರು, ಶರಣ್ಯ ಮಾತಾಜಿ, ಅಕ್ಷತಾ ಮಾತಾಜಿ, ಕವಿತಾ ಮಾತಾಜಿ ಸಂಯೋಜಿಸಿದರು.