Wednesday, January 22, 2025
ಪುತ್ತೂರು

ಪುತ್ತೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಹಿರಿಯ ಕಾಂಗ್ರೆಸ್ ನಾಯಕ ಚಿಲ್ಮೆತ್ತಾರ್ ಸಿ ಎಚ್ ನಾರಾಯಣ ರೈಯವರಿಗೆ ಸನ್ಮಾನ – ಕಹಳೆ ನ್ಯೂಸ್

ಪುತ್ತೂರು: ಹಿರಿಯ ಕಾಂಗ್ರೆಸ್ ನೇತಾರ ಪುತ್ತೂರು ತಾಲ್ಲೂಕಿನ ಒಳಮೊಗರು ಗ್ರಾಮದ ಚಿಲ್ಮೆತ್ತಾರ್ ನಿವಾಸಿಯಾಗಿರುವ ಸಿ ಎಚ್ ನಾರಾಯಣ ರೈ ಯವರನ್ನು ಪುತ್ತೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಸನ್ಮಾನಿಸಿದರು.

ಪುತ್ತೂರು ಬ್ಲಾಕ್ ಕಾಂಗ್ರೆಸ್‍ನ ಅಧ್ಯಕ್ಷ ಎಂ ಬಿ ವಿಶ್ವನಾಥ ರೈ, ಮಾಜಿ ಶಾಸಕಿ ಶ್ರೀಮತಿ ಶಕುಂತಲಾ ಟಿ ಶೆಟ್ಟಿಯವರು ಹಿರಿಯ ನಾಯಕರಾದ ಚಿಲ್ಮೆತ್ತಾರ್ ನಾರಾಯಣ ರೈ ಅವರ ಮನೆಗೆ ತೆರಳಿ ಶಾಲು ಹಾಕಿ, ಫಲಪುಷ್ಪಗಳನ್ನು ನೀಡಿ ಸನ್ಮಾನಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಎರಡು ಬಾರಿ ಒಳಮೊಗರು -ಅರಿಯಡ್ಕ ಗ್ರಾಮ ಪಂಚಾಯತ್ ಸದಸ್ಯರಾಗಿ, ಬಳಿಕ ಒಂದು ಅವಧಿಗೆ ಪಂಚಾಯತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಚಿಲ್ಮೆತ್ತಾರ್ ನಾರಾಯಣ ರೈಯವರು ಕುಂಬ್ರ ಸಹಕಾರಿ ಸಂಘದ ನಿರ್ದೇಶಕರಾಗಿ, ಕುಂಬ್ರ ಮಂಡಲ ಪಂಚಾಯತ್ ನ ಸದಸ್ಯರಾಗಿ ಚುನಾಯಿತರಾಗಿ ಜನಸೇವೆಯಲ್ಲಿ ತೊಡಗಿಸಿಕೊಂಡ ಓರ್ವ ಕ್ರಿಯಾಶೀಲ ನಾಯಕರಾಗಿದ್ದರು.

ಈ ಸಂದರ್ಭದಲ್ಲಿ ನಾರಾಯಣ ರೈಯವರ ಆತ್ಮೀಯ ಹಾಗೂ ಒಂದು ಕಾಲದ ಒಡನಾಡಿಯಾಗಿದ್ದ ನಗರ ಕಾಂಗ್ರೆಸ್ ಅಧ್ಯಕ್ಷ ಎಚ್ ಮಹಮ್ಮದ್ ಅಲಿ, ಆರ್ಯಾಪು ವಲಯ ಕಾಂಗ್ರೆಸ್ ಅಧ್ಯಕ್ಷ ಪ್ರಜ್ವಲ್ ರೈ ತೊಟ್ಲ, ಒಳಮೊಗರು ವಲಯ ಕಾಂಗ್ರೆಸ್ ಅಧ್ಯಕ್ಷ ಅಶೋಕ ಪೂಜಾರಿ,ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರುಗಳಾದ ಶಶಿಕಿರಣ್ ರೈ, ಮಹಾಬಲ ರೈ ಒಳತಡ್ಕ, ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಶಾರದಾ ಅರಸ್, ಪಂಚಾಯತ್ ರಾಜ್ ಸಂಘಟನೆಯ ಅಧ್ಯಕ್ಷ ಸಂತೋμï ಭಂಡಾರಿ ಚಿಲ್ಮೆತ್ತಾರ್ ಹಾಗೂ ನಾರಾಯಣ ರೈಯವರ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು
ಅಲ್ಲದೆ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಪುತ್ತೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾಗಿರುವ ಸಂತೋಷ ಭಂಡಾರಿಯವರ ಸೋದರ ಮಾವನಾಗಿರುವ ಸಿ ಎಚ್ ನಾರಾಯಣ ರೈಯವರು ಕಟ್ಟಾ ಕಾಂಗ್ರೆಸ್ಸಿಗರಾಗಿದ್ದಾರೆ.