Wednesday, January 22, 2025
ಪುತ್ತೂರು

ಕೊಡಿಪ್ಪಾಡಿಯಲ್ಲಿ ನಡೆದ ಗೋಕಳ್ಳತನದ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ವಿಶ್ವ ಹಿಂದು ಪರಿಷದ್ ಬಜರಂಗದಳ ಪುತ್ತೂರು ಪ್ರಖಂಡದ ವತಿಯಿಂದ ಪುತ್ತೂರು ನಗರ ಠಾಣಾ ಉಪನಿರೀಕ್ಷಕರಿಗೆ ಮನವಿ- ಕಹಳೆ ನ್ಯೂಸ್

ಪುತ್ತೂರು: ಕೊಡಿಪ್ಪಾಡಿ ಶ್ರೀ ಜನಾರ್ಧನ ದೇವಸ್ಥಾನದ ಬಳಿಯ ಗುಡ್ಡದಲ್ಲಿ ಮೇಯಲು ಬಿಟ್ಟಿದ್ದ ಲಕ್ಷ್ಮಣ ಗೌಡ ಎಂಬವರ ಒಂದು ದನ ಮತ್ತು ಎರಡು ಕರುಗಳನ್ನು ದುಷ್ಕರ್ಮಿಗಳು ಕಾರಿನಲ್ಲಿ ಅಪಹರಿಸಿರುವ ದೃಶ್ಯ ಸಿಸಿಟಿವಿಯಲ್ಲಿ ಪತ್ತೆಯಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಕಳ್ಳತನದ ಆರೋಪಿಗಳನ್ನು ಶ್ರೀಘ್ರವಾಗಿ ಬಂಧಿಸಬೇಕೆಂದು ಆಗ್ರಹಿಸಿ, ಹಾಗು ಇನ್ನು ಮುಂದೆ ಈ ರೀತಿಯ ಘಟನೆಗಳು ನಡೆಯದಿರುವ0ತೆ ಮುನ್ನೆಚ್ಚರಿಕೆ ವಹಿಸಲು ಒತ್ತಾಯಿಸಿ, ವಿಶ್ವ ಹಿಂದು ಪರಿಷದ್ ಬಜರಂಗದಳ ಪುತ್ತೂರು ಪ್ರಖಂಡದ ವತಿಯಿಂದ ಪುತ್ತೂರು ನಗರ ಠಾಣಾ ಉಪನಿರೀಕ್ಷಕರಿಗೆ ಮನವಿ ಸಲ್ಲಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭ ವಿಶ್ವ ಹಿಂದು ಪರಿಷದ್ ಪುತ್ತೂರು ಪ್ರಖಂಡ ಸಹ ಕಾರ್ಯದರ್ಶಿ ವಿಶಾಖ್ ಸಸಿಹಿತ್ಲು, ವಿಶ್ವ ಹಿಂದು ಪರಿಷದ್ ಪುತ್ತೂರು ಜಿಲ್ಲಾ ಪ್ರಚಾರ ಪ್ರಸಾರ ಪ್ರಮುಖ್ ಶ್ರೀಧರ್ ತೆಂಕಿಲ, ಬಜರಂಗದಳ ಪುತ್ತೂರು ಪ್ರಖಂಡ ಸಹ ಸಂಚಾಲಕ ಜಯಂತ ಕುಂಜೂರುಪಂಜ, ಸಂಜಯ್ ಉಪಸ್ಥಿತರಿದ್ದರು.