Friday, November 22, 2024
ರಾಜಕೀಯ

Big Breaking : ಚಾಣಕ್ಯನ ತಂತ್ರಗಾರಿಕೆಗೆ ನಲುಗಿದ ಕಾಂಗ್ರೆಸ್ ; ಹೈದರಾಬಾದ್ ಹೋಟೆಲ್ ನಿಂದ ಕೈ ಶಾಸಕ ನಾಪತ್ತೆ..! – ಕಹಳೆ ನ್ಯೂಸ್

ರಾಜ್ಯ ರಾಜಕಾರಣದಲ್ಲೇ ಇಂತಹ ಒಂದು ಸನ್ನಿವೇಶ ಎದುರಾದ ಉದಾಹರಣೆ ಇರಲಿಕ್ಕಿಲ್ಲ. ಯಾಕೆಂದರೆ ಬಹುಮತ ಸಾಧಿಸಲು ಸಾಧ್ಯವಾಗದೇ ಇದ್ದರೂ ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿ ಸದ್ಯ ತನ್ನ ಮುಖ್ಯಮಂತ್ರಿಯನ್ನು ಗದ್ದುಗೆಗೆ ಏರಿಸಿದ್ದು, ಸರಕಾರ ರಚನೆ ಮಾಡಲು ತಯಾರಿ ನಡೆಸಿದೆ. ಆದರೆ ಇತ್ತ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ತಾವೇ ಸರಕಾರ ರಚಿಸುತ್ತೇವೆ ಎಂದು ಪಟ್ಟುಹಿಡಿದು ಕೂತಿದೆ.‌ ರಾಜ್ಯ ರಾಜಭಾರ ಯಾರ ಕೈಗೆ ಸಿಗುತ್ತದೋ‌ ಗೊತ್ತಿಲ್ಲ, ಆದರೆ ಬಿಜೆಪಿ ಹೂಡಿರುವ ತಂತ್ರಕ್ಕೆ ಅಕ್ಷರಶಃ ಕಾಂಗ್ರೆಸ್ ಮತ್ತು ಜೆಡಿಎಸ್ ಬೆಚ್ಚಿಬಿದ್ದಿದೆ.!

ಹೈದರಾಬಾದ್ ಹೊಟೇಲ್‌ನಿಂದ ಕೈ ಶಾಸಕ ನಾಪತ್ತೆ..!

ಜಾಹೀರಾತು
ಜಾಹೀರಾತು
ಜಾಹೀರಾತು

ರಾಜ್ಯದ ಈಗಲ್‌ಟನ್ ರೆಸಾರ್ಟ್ ನಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ಕೂಡಿಹಾಕಿ ಕಾಪಾಡಿಕೊಂಡಿದ್ದ ಡಿಕೆಶಿ ನೇತೃತ್ವದ ತಂಡ ಏಕಾಏಕಿ ತನ್ನೆಲ್ಲಾ ಶಾಸಕರನ್ನು ಕರೆದುಕೊಂಡು ಹೈದರಾಬಾದ್ ಗೆ ತೆರಳಿದ್ದಾರೆ.‌ ಹೈದರಾಬಾದ್ ನಲ್ಲಿ ಹೊಟೇಲ್ ಒಂದರಲ್ಲಿ ಶಾಸಕರನ್ನು ಇದೀಗ ಇಟ್ಟುಕೊಂಡಿರುವ ಡಿಕೆಶಿಗೆ ಒಂದೆಡೆ ಕೈ ಶಾಸಕರು ಆಕ್ರೋಶ ವ್ಯಕ್ತಪಡಿಸಿದರೆ , ಇತ್ತ ಕಾಂಗ್ರೆಸ್ ನಾಯಕರು ಯಾವುದೇ ಕಾರಣಕ್ಕೂ ಯಾವೊಬ್ಬ ಶಾಸಕನೂ ತಮ್ಮ ಕೈ ತಪ್ಪಿ ಹೋಗಬಾರದು ಎಂಬ ಆದೇಶ ನೀಡಿದ್ದಾರೆ. ಆದರೆ ಬಿಜೆಪಿ ಚಾಣಕ್ಯನ ತಂತ್ರಕ್ಕೆ ಕಾಂಗ್ರೆಸ್ ನಲುಗಿ ಹೋಗಿರುವುದು ಖಂಡಿತ. ಯಾಕೆಂದರೆ ಹೈದರಾಬಾದ್ ನ ಹೊಟೇಲ್ ನಲ್ಲಿ ಸೂಕ್ತ ಭದ್ರತೆಗಳೊಂದಿಗೆ ಶಾಸಕರನ್ನು ನೋಡಿಕೊಳ್ಳುತ್ತಿದೆ ಆದರೂ ಇದೀಗ ಕೈ ಶಾಸಕ ನಾಪತ್ತೆಯಾಗಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಹಿತ ಅನೇಕ ಕಾಂಗ್ರೆಸ್ ಮುಖಂಡರು ಇದೇ ಹೊಟೇಲ್ ನಲ್ಲಿ ವಾಸ್ತವ್ಯ ಹೂಡಿದ್ದರೂ ಕೂಡಾ ತಮ್ಮ ಶಾಸಕರನ್ನು ಕಾಪಾಡಿಕೊಳ್ಳಲಾಗದೆ ಪರದಾಡುತ್ತಿದ್ದಾರೆ.‌ ಯಾಕೆಂದರೆ ಬಿಜೆಪಿ ನಾಳೆ ಸಂಜೆಯೊಳಗೆ ಬಹುಮತ ಸಾಬೀತು ಪಡಿಸಿಯೇ ಸಿದ್ಧ ಎಂದು ಸಲೀಸಾಗಿ ಹೇಳಿದ್ದು, ಇತ್ತ ಕೈ ಶಾಸಕರು ಹೊಟೇಲ್ ನಿಂದ ನಾಪತ್ತೆಯಾಗುತ್ತಿರುವುದು ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ನಿದ್ದೆಗೆಡಿಸಿದೆ..!

ಅಪರಿಚಿತ ವ್ಯಕ್ತಿಯ ಕೈಚಳಕ..!

ರಾಜ್ಯದಲ್ಲಿ ಈಗಲ್‌ಟನ್ ರೆಸಾರ್ಟ್ ನಲ್ಲಿ ಭದ್ರತೆ ಒದಗಿಸಿ ಶಾಸಕರನ್ನು ಕಾಯುತ್ತಿದ್ದ ಕಾಂಗ್ರೆಸ್ ಗೆ ಬಿಜೆಪಿಯ ಆಪರೇಷನ್ ಕಮಲದ ಹೆಸರು ಕೇಳುತ್ತಿದ್ದಂತೆ ನಡುಕ ಹುಟ್ಟಿದೆ. ಅದೇ ಕಾರಣಕ್ಕೆ ಡಿಕೆಶಿ ನೇತ್ರತ್ವದ ತಂಡ ಏಕಾಏಕಿ ತಮ್ಮ ಶಾಸಕರನ್ನು ಹೈದರಾಬಾದ್ ಗೆ ಕರೆದುಕೊಂಡು ಹೋಗಿದ್ದು, ಇದೀಗ ಹೈದರಾಬಾದ್ ಹೊಟೇಲ್ ನಿಂದಲೂ ಕೈ ಶಾಸಕರು ನಾಪತ್ತೆಯಾಗಿದ್ದಾರೆ. ಹೊಟೇಲ್ ಗೆ ಬಂದ ಅಪರಿಚಿತ ವ್ಯಕ್ತಿಯಿಂದಲೇ ಈ ಚಮತ್ಕಾರ ನಡೆದಿದೆ ಎಂದು ಊಹಿಸಲಾಗಿದ್ದು, ಕಾಂಗ್ರೆಸ್ ಶಾಸಕ ಹೊಟೇಲ್ ನ ಹಿಂಬದಿ ಬಾಗಿಲಿನಿಂದ ನಾಪತ್ತೆಯಾಗಿದ್ದಾರೆ. ಇತ್ತ ಕಾದು ಕುಳಿತಿರುವ ಕಾಂಗ್ರೆಸ್ ಮುಖಂಡರ ಕೈಗೆ ಚೆಂಬು ಗ್ಯಾರಂಟಿ ಎಂಬಂತಿದೆ ಸದ್ಯದ ಪರಿಸ್ಥಿತಿ.!

ಒಟ್ಟಾರೆಯಾಗಿ ಬಿಜೆಪಿ ಮಾಡಿರುವ ರಣ ತಂತ್ರಕ್ಕೆ ಬೆಚ್ಚಿಬಿದ್ದಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ತಮ್ಮ ಕೈಯಲ್ಲಿದ್ದ ಶಾಸಕರನ್ನು ಉಳಿಸಿಕೊಳ್ಳಲಾಗದೆ ಪರದಾಡುವಂತಾಗಿದೆ…!

–ಅರ್ಜುನ್