Thursday, January 23, 2025
ಬಂಟ್ವಾಳ

ಅಂಗಡಿಗೆ ಹೋಗುವುದಾಗಿ ಹೇಳಿ ತೆರಳಿದ್ದ ಯುವತಿ ನಿಗೂಢ ನಾಪತ್ತೆ- ಕಹಳೆ ನ್ಯೂಸ್

ಬಂಟ್ವಾಳ: ಅಂಗಡಿಗೆ ಹೋಗುವುದಾಗಿ ಹೇಳಿ ತೆರಳಿದ್ದ ಯುವತಿ ನಿಗೂಢ ನಾಪತ್ತೆಯಾಗಿರುವ ಘಟನೆ ಬರಿಮಾರು ಗ್ರಾಮದ ಮಧುಗಿರಿಯಲ್ಲಿ ನಡೆದಿದೆ.

ದಿವ್ಯಾ ಅವರ ಹಿರಿಯ ಮಗಳು ಜ್ಯೋತಿ (28) ಮನೆಗೆ ಸಾಮಾಗ್ರಿ ತರಲೆಂದು ತಾಯಿ ಬಳಿ 100ರೂ. ಪಡೆದುಕೊಂಡು ತೆರಳಿದಾಕೆ ಮನೆಗೆ ವಾಪಸ್ಸು ಬಾರದೇ ಕಾಣೆಯಾಗಿದ್ದಾಳೆ. ಮೊಬೈಲ್ ಸಂಪರ್ಕಕ್ಕೂ ಸಿಗದೇ ಇದ್ದಾಗ, ಮನೆಯ ಸುತ್ತ ಮುತ್ತ, ಬರಿಮಾರು ಸಮೀಪದಲ್ಲೆಲ್ಲಾ ಹುಡುಕಾಟ ನಡೆಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಆದರೂ ಜ್ಯೋತಿ ಪತ್ತೆಯಾಗದ ಹಿನ್ನಲೆ ತಾಯಿ ದಿವ್ಯಾ ಬಂಟ್ವಾಳ ಗ್ರಾಮಾಂತರ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನನ್ವಯ ಅಪರಾಧ ಕ್ರಮಾಂಕ 148/2021 ರಂತೆ ಪ್ರಕರಣ ದಾಖಲಾಗಿದೆ.