Wednesday, January 22, 2025
ಪುತ್ತೂರು

ವಿವೇಕಾನಂದ ಪದವಿ ಮಹಾವಿದ್ಯಾಲಯದ ನೂತನ ಆಡಳಿತ ಮಂಡಳಿಯ ಪದಗ್ರಹಣ ಸಮಾರಂಭ: ಅಧ್ಯಕ್ಷರಾಗಿ ಡಾ. ಶ್ರೀಪತಿ ಕಲ್ಲೂರಾಯ, ಸಂಚಾಲಕರಾಗಿ ಮುರಳಿಕೃಷ್ಣ ಕೆ ಎನ್ – ಕಹಳೆ ನ್ಯೂಸ್

ಪುತ್ತೂರು: ವಿವೇಕಾನಂದ ಪದವಿ ಮಹಾವಿದ್ಯಾಲಯದ ನೂತನ ಆಡಳಿತ ಮಂಡಳಿಯ ಪದಗ್ರಹಣ ಸಮಾರಂಭ ನಡೆಯಿತು.
ನೂತನ ಅಧ್ಯಕ್ಷರಾಗಿ ಡಾ. ಶ್ರೀಪತಿ ಕಲ್ಲೂರಾಯ, ಸಂಚಾಲಕರಾಗಿ ಪುತ್ತೂರಿನ ಖ್ಯಾತ ಯುವ ನ್ಯಾಯವಾದಿ ಮುರಳಿಕೃಷ್ಣ ಕೆ ಎನ್ ಜವಾಬ್ದಾರಿ ಸ್ವೀಕರಿಸಿದರು.
ಡಾ. ಶ್ರೀಪತಿ ಕಲ್ಲೂರಾಯ ಮಂಗಳೂರು ವಿಶ್ವವಿದ್ಯಾನಿಲಯದ ನಿವೃತ್ತ ಅರ್ಥಶಾಸ್ತ್ರ ಪ್ರೋಪೆಸರ್ ಆಗಿ ,ಗೈಡ್ ಆಗಿ, ವಿಭಾಗ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿರುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವಿವೇಕಾನಂದ ಕಾಲೇಜಿನ ಹಾಗು ಕಾನೂನು ಮಹಾವಿದ್ಯಾಲಯದ ಹಿರಿಯ ವಿದ್ಯಾರ್ಥಿಯಾಗಿರುವ ಮುರಳಿಕೃಷ್ಣ ಕೆ ಎನ್ ಇವರು ಪುತ್ತೂರಿನ ಹೆಸರಾಂತ ವಕೀಲರಾದ ರಾಮ್ ಮೋಹನ್ ರಾವ್ ಅವರೊಂದಿಗೆ ಇದ್ದು ವಕೀಲ ವೃತ್ತಿ ನಡೆಸಿಕೊಂಡು ಬರುತ್ತಿದ್ದಾರೆ. ಬೇರೆ ಬೇರೆ ಸಂಘಟನೆ, ಸಂಘ ಸಂಸ್ಥೆ ಗಳಲ್ಲಿ ಕೆಲಸ ನಿರ್ವಹಿಸಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ವಯಂ ಸೇವಕರಾದ ಇವರು ಭಾಜಪದ ಪ್ರಮುಖ ಹುದ್ದೆಗಳಲ್ಲಿ ಕೂಡ ಇದ್ದರು. ಇದೀಗ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕೋಶಾಧಿಕಾರಿಯಾಗಿ ಶ್ರೀನಿವಾಸ ಸಾಮಂತ ಮತ್ತು ಸದಸ್ಯರಾಗಿ ಅನಂತಕೃಷ್ಣ ಕಾಮತ್,ಜಗನ್ನಾಥ, ಶಂಕರ್ ಜೋಯಿಸ ಯಮುರ್ಂಜ, ಸುಕುಮಾರ ಕೊಡಿಪ್ಪಾಡಿ, ಶೋಭಾ ಕೊಳತ್ತಾಯ, ಶುಭಾ ಅಡಿಗ ಜವಾಬ್ದಾರಿ ಸ್ವೀಕರಿಸಿದರು.

ವಿದ್ಯಾವರ್ಧಕ ಸಂಘದ ನಿರ್ದೇಶಕ ಶಿವಪ್ರಸಾದ್ ಇ ಇವರು ನೂತನ ಸದಸ್ಯರುಗಳನ್ನು ಪರಿಚಯಿಸಿ ದೀಪ ಪ್ರದಾನ ಮಾಡಿ , ಸೇವಾ ದೀಕ್ಷೆಯನ್ನು ನೀಡಿ ಜವಾಬ್ದಾರಿ ನೀಡಿದರು. ಕಾಲೇಜಿನ ಪ್ರಾಚಾರ್ಯ ಪ್ರೋ. ವಿಷ್ಣು ಗಣಪತಿ ಭಟ್ ವಂದಿಸಿದರು.