Wednesday, January 22, 2025
ಪುತ್ತೂರು

ಪುತ್ತೂರು: 16 ವರ್ಷಗಳಿಂದ ತಲೆಮರೆಸಿಕೊಂಡಿದ್ದ, ಅಕ್ರಮ ಶ್ರೀಗಂಧದ ಎಣ್ಣೆ ಸಾಗಾಟ ಪ್ರಕರಣದ ಆರೋಪಿ ಬಂಧನ – ಕಹಳೆ ನ್ಯೂಸ್

ಪುತ್ತೂರು: 16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಅಕ್ರಮ ಶ್ರೀಗಂಧದ ಎಣ್ಣೆ ಸಾಗಾಟ ಪ್ರಕರಣದ ಆರೋಪಿ ಕೇರಳ ಕಾಸರಗೋಡು ನಿವಾಸಿ ಮಹಮ್ಮದ್ ರಫೀಕ್ ನನ್ನು ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ಕೇರಳ ಕಣ್ಣೂರು ಎಂಬಲ್ಲಿ ಬಂಧಿಸಿದ್ದಾರೆ.

ಪುತ್ತೂರಿನಿಂದ ಕೇರಳಕ್ಕೆ ಅಕ್ರಮವಾಗಿ ಸುಮಾರು 2ಲೀ ಶ್ರೀಗಂಧದ ಎಣ್ಣೆಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಪ್ರಕರಣದಲ್ಲಿ ಬಂಧಿತನಾಗಿ ನ್ಯಾಯಾಲಯದಿಂದ ಜಾಮೀನು ಪಡೆದು ಬಿಡುಗಡೆಗೊಂಡ ನಂತರ ನ್ಯಾಯಾಲಯಕ್ಕೆ ಹಾಜರಾಗದೇ ಸುಮಾರು 16 ವರ್ಷಗಳಿಂದ ತಲೆಮರೆಸಿಕೊಂಡಿದ್ದ, ಈತನ ಬಗ್ಗೆ ನ್ಯಾಯಲಯವು ದಸ್ತಗಿರಿ ವಾರೆಂಟ್ ಹೊರಡಿಸಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಈತನ ಪತ್ತೆ ಬಗ್ಗೆ ಡಾ. ಗಾನ ಪಿ ಕುಮಾರ್, ಪೊಲೀಸ್ ಉಪಾಧೀಕ್ಷಕರು ಪುತ್ತೂರು ಉಪ ವಿಭಾಗ ಹಾಗೂ ಪುತ್ತೂರು ಗ್ರಾಮಾಂತರ ಠಾಣೆಯ ವೃತ ನಿರೀಕ್ಷಕರಾದ ಉಮೇಶ್ ಉಪ್ಪಳಿಕೆಯವರ ಮಾರ್ಗದರ್ಶನದಂತೆ ಠಾಣಾ ಉಪನಿರೀಕ್ಷಕರುಗಳಾದ ಉದಯರವಿ.ಎಂ.ವೈ. ಮತ್ತು ಅಮೀನಸಾಬ.ಎಂ ಅತ್ತಾರ ಹಾಗೂ ಸಿಬ್ಬಂದಿಗಳಾದ ಹೆಚ್.ಸಿ.ಅದ್ರಾಮ್ ಮತ್ತು ಪ್ರವೀಣ್ ರೈ ಯವರು ನ.17ರಂದು ಕೇರಳ ಕಣ್ಣೂರು ಎಂಬಲ್ಲಿ ಪತ್ತೆ ಮಾಡಿ ನ್ಯಾಯಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು