Wednesday, January 22, 2025
ಪುತ್ತೂರು

ಉಪ್ಪಿನಂಗಡಿ: ಕಾಲೇಜು ಅವರಣದಲ್ಲಿ ವಿದ್ಯಾರ್ಥಿಗಳ ತಂಡಗಳ ಮಧ್ಯೆ ಫೈಟಿಂಗ್: ಐವರು ಆಸ್ಪತ್ರೆಗೆ ದಾಖಲು- ಕಹಳೆ ನ್ಯೂಸ್

ಉಪ್ಪಿನಂಗಡಿ : ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳ 2 ತಂಡಗಳ ಮಧ್ಯೆ ಹೊಡೆದಾಟ ನಡೆದಿದ್ದು, ಘಟನೆಯಲ್ಲಿ 5 ಮಂದಿ ವಿದ್ಯಾರ್ಥಿಗಳು ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

 

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ವಿದ್ಯಾರ್ಥಿನಿಯೋರ್ವಳ ಮೊಬೈಲ್ ಸಂಖ್ಯೆಯನ್ನು ಭಿನ್ನ ಕೋಮಿನ ಸಹಪಾಠಿ ವಿದ್ಯಾರ್ಥಿಯೋರ್ವ ಕೇಳಿದ್ದು ಇದನ್ನು ಆಕ್ಷೇಪಿಸಿ ವಿದ್ಯಾರ್ಥಿನಿ ಪರ ತಂಡದ ಮೂವರು ವಿದ್ಯಾರ್ಥಿಗಳು ವಿಚಾರಿಸಲು ಹೋಗಿದ್ದಾಗ ಇವರ ಮೇಲೆ ಮೂವತ್ತಕ್ಕೂ ಹೆಚ್ಚಿನ ವಿದ್ಯಾರ್ಥಿಗಳ ಗುಂಪು ಮುಗಿಬಿದ್ದು, ಪರಸ್ಪರ ಹೊಡೆದಾಡಿಕೊಂಡಿದ್ದಾರೆ.

ಘಟನೆಯಲ್ಲಿ ಒಂದು ತಂಡದ ಮೂವರು ವಿದ್ಯಾರ್ಥಿಗಳು ಮತ್ತು ಇನ್ನೊಂದು ತಂಡದ ಇಬ್ಬರು ವಿದ್ಯಾರ್ಥಿಗಳು ಪುತ್ತೂರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿದೆ.