ಕಲ್ಲಡ್ಕ: ಶ್ರೀರಾಮ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಸಿಎ ವಿಭಾಗದ ಉದ್ಘಾಟನೆ – ಪ್ರಥಮ ವರ್ಷದ ಪದವಿ ಪ್ರವೇಶಾರ್ಥಿಗಳಿಗೆ ಆಗತ ಸ್ವಾಗತ – ಉಚಿತ ಲ್ಯಾಪ್‍ಟಾಪ್ ವಿತರಣೆ ಕಾರ್ಯಕ್ರಮ – ಕಹಳೆ ನ್ಯೂಸ್
ಕಲ್ಲಡ್ಕ: ಶ್ರೀರಾಮ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಸಿಎ ವಿಭಾಗದ ಉದ್ಘಾಟನೆ ಹಾಗೂ ಪ್ರಥಮ ವರ್ಷದ ಪದವಿ ಪ್ರವೇಶಾರ್ಥಿಗಳಿಗೆ ಆಗತ ಸ್ವಾಗತ ಕಾರ್ಯಕ್ರಮ ಮತ್ತು ಉಚಿತ ಲ್ಯಾಪ್‍ಟಾಪ್ ವಿತರಣೆ ಕಾರ್ಯಕ್ರಮವು ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಅಧ್ಯಕ್ಷರಾದ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಬಳಿಕ ಮಾತನಾಡಿದ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಅವರು ಶಿಕ್ಷಣದಲ್ಲಿ ಕೇವಲ ಮಾಹಿತಿ ಮಾತ್ರ ಪ್ರಾಧಾನ್ಯವಾಗಿರದೆ ಧರ್ಮ ಸಂಸ್ಕøತಿಯ ಜೊತೆಗೆ ರಾಷ್ಟ್ರೀಯ ಭಾವವೂ ಮೇಳೈಸಬೇಕು ಇದರಿಂದ ಮಾತ್ರ ನೈಜ ಶಿಕ್ಷಣ ನೀತಿ ರೂಪುಗೊಳ್ಳಲು ಸಾಧ್ಯ, ಸ್ವಾತಂತ್ರ್ಯದ 75ನೇ ವರ್ಷದ ಸಂದರ್ಭದಲ್ಲಿ ಈ ದೇಶಕ್ಕಾಗಿ ಹೋರಾಟ ಮಾಡಿದ ತಾಯಂದಿರನ್ನು ನೆನಪಿಸಿಕೊಳ್ಳುವ ಹಾಗೂ ಗುಲಾಮಗಿರಿ ಮಾನಸಿಕತೆಯಿಂದ ಹೊರಬರಲು ಈಗ ಕಾಲ ಸನ್ನಿಹಿತವಾಗಿದೆ ಎಂದು ಹೇಳಿದರು.
ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾದ ಪ್ರೊ. ಕರುಣಾಕರ ಎ. ಕೋಟೆಗಾರ್ ಮಾತನಾಡಿ ಪ್ರಸಕ್ತ ಸಾಲಿನ ರಾಷ್ಟ್ರೀಯ ಶಿಕ್ಷಣ ನೀತಿಯ ಎಲ್ಲಾ ಈಗಾಗಲೇ ಶ್ರೀರಾಮ ವಿದ್ಯಾಕೇಂದ್ರದ ಶಿಕ್ಷಣ ವ್ಯವಸ್ಥೆಯಲ್ಲಿ ಅಳವಡಿಕೆಯಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಬೆಂಗಳೂರಿನ ಹಾಸ್ಪಿಟಲ್‍ನ ಆರ್.ಎಂ.ಓ. ಡಾ. ಸುನಿಲ್ ಹೆಗಡೆ ಅವರು ಬಿ.ಸಿ.ಎ ವಿಭಾಗ ಉದ್ಘಾಟಿಸಿದರು.
ಪ್ರಥಮ ದರ್ಜೆ ಪದವಿ ತರಗತಿಗಳಿಗೆ ದಾಖಲಾದ ವಿದ್ಯಾರ್ಥಿಗಳೆಲ್ಲರು ಯಜ್ಞಕುಂಡಕ್ಕೆ ಹವಿಸ್ಸನ್ನು ಅರ್ಪಿಸಿ, ಹಿರಿಯರಿಂದ ತಿಲಕಧಾರಣೆ ಮಾಡಿಸಿಕೊಂಡರು. ಬಳಿಕ ಅವರೆಲ್ಲರಿಗೂ ಆರತಿ ಬೆಳಗಿ ವೈಶಿಷ್ಟ್ಯಪೂರ್ಣ ಸ್ವಾಗತಿಸಲಾಯಿತು.
ಕಾರ್ಯಕ್ರಮದಲ್ಲಿ NMPT ಮಂಗಳೂರು ಇದರ ಹಣಕಾಸು ಸಲಹೆಗಾರರು ಮತ್ತು ಮುಖ್ಯ ಲೆಕ್ಕಾಧಿಕಾರಿ ಶ್ರೀ ವಿನಾಯಕ ರಾವ್ ಬಿ ಎಸ್ , ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರು ಪ್ರೊಫೆಸರ್ ಕರುಣಾಕರ್ ಕೋಟೆಗಾರ್ ,ಆಕಾಶ್ ಹಾಸ್ಪಿಟಲ್ ಬೆಂಗಳೂರಿನ ಆರ್. ಎಂ. ಓ ಡಾಕ್ಟರ್ ಸುನೀಲ್ ಹೆಗಡೆ ಬಿಸಿಎ ವಿಭಾಗದ ಉದ್ಘಾಟನೆಯನ್ನು ಮಾಡಿದರು. ಸಂಸ್ಥೆಯ ಸಂಚಾಲಕರಾದ ಶ್ರೀ ವಸಂತ ಮಾಧವ ,ಸಹ ಸಂಚಾಲಕರಾದ ಶ್ರೀ ರಮೇಶ್ ಎನ್ , ಶ್ರೀ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ,ಡಾ। ಕಮಲಾ ಪ್ರಭಾಕರ್ ಭಟ್ , ಕಾಲೇಜಿನ ಪ್ರಾಚಾರ್ಯರಾದ ಶ್ರೀ ಕೃಷ್ಣ ಪ್ರಸಾದ್ ಕೆ ಎನ್ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಹರ್ಷಿತಾ ಎಸ್, ಸ್ವಾಗತಿಸಿ, ಹರ್ಷಿತಾ ವಂದಿಸಿ, ಹಿತೇಶ್ ಕಾರ್ಯಕ್ರಮವನ್ನು ನಿರೂಪಿಸಿದರು.