Wednesday, January 22, 2025
ಬಂಟ್ವಾಳ

ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನ ಮಂದಿರದಲ್ಲಿ ಆಗತ ಸ್ವಾಗತ ಕಾರ್ಯಕ್ರಮ- ಕಹಳೆ ನ್ಯೂಸ್

ಕಲ್ಲಡ್ಕ : ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನ ಮಂದಿರದಲ್ಲಿ ಪ್ರವೇಶೋತ್ಸವ ಹಾಗೂ ನೂತನ ವಿಜ್ಞಾನ ಪ್ರಯೋಗಾಲಯ ಮತ್ತು ಕಂಪ್ಯೂಟರ್ ಕೊಠಡಿ ಮತ್ತು ಸ್ಟಾರ್ಟ್ ಕ್ಲಾಸ್ ರೂಮ್‍ನ ಉದ್ಘಾಟನೆ ಕಾರ್ಯಕ್ರಮ ನೆರವೇರಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ವಿಜ್ಞಾನ ಪ್ರಯೋಗಾಲಯ, ಕಂಪ್ಯೂಟರ್ ಕೊಠಡಿ ಮತ್ತು ಸ್ಮಾಟ್ ಕ್ಲಾಸ್ ನ್ನು ಉದ್ಘಾಟಿಸಿ, ಬಳಿಕ ಮಾತನಾಡಿದ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ| ಪ್ರಭಾಕರ್ ಭಟ್ ಕಲ್ಲಡ್ಕ ಜಗತ್ತಿನಲ್ಲಿ ಅತ್ಯಂತ ಶ್ರೀಮಂತ ದೇಶ ಭಾರತವಾಗಿತ್ತು. ಅನೇಕ ಮಂದಿ ಆಕ್ರಮಣಕಾರರ ಆಕ್ರಮಣಕ್ಕೆ ಒಳಗಾಗಿದ್ದರೂ ಕೂಡ ಮತ್ತೆ ಎದ್ದು ನಿಲ್ಲುವಂತಹ ಶಕ್ತಿ ಇರುವಂತಹ ಏಕೈಕ ದೇಶ ನಮ್ಮದು. ಶಿಕ್ಷಣವೇ ಭಾರತದ ಅತ್ಯುನ್ನತ ಆಧಾರ ಸ್ತಂಭ. ಜಗತ್ತಿನ ಎಲ್ಲಾ ದೇಶಗಳು ಬೋಧಿಸುವುದು ರಾಷ್ಟ್ರೀಯತೆಯ ಶಿಕ್ಷಣವನ್ನೇ ಆದರೆ ಹಿಂದೆ ಗುರುಕುಲಗಳಲ್ಲಿ ಇಂತಹ ಶಿಕ್ಷಣವನ್ನು ಉಚಿತವಾಗಿ ನೀಡುತ್ತಿದ್ದರು. ಅಲ್ಲಿ ಜಾತಿ ಇರಲಿಲ್ಲ, ನೀತಿ ಇತ್ತು. ವಿದೇಶಿಯರ ಆಕ್ರಮಣದಿಂದ ಶಿಕ್ಷಣದ ವ್ಯವಸ್ಥೆ ಬುಡಮೇಲಾಯಿತು. ಅದನ್ನು ಮತ್ತೆ ಸರಿ ಮಾಡುವ ಕೆಲಸ ನಮ್ಮಿಂದ ನಿರಂತರವಾಗಿ ಆಗಬೇಕು. ದೇಶ ಧರ್ಮದ ಬಗ್ಗೆ ಗೌರವ ಮೂಡಿಸುವ ಶಿಕ್ಷಣ ವ್ಯವಸ್ಥೆ ಇಂದಿನ ಅನಿವಾರ್ಯತೆಯಲ್ಲೊಂದು. ಈ ಶಿಕ್ಷಣವನ್ನು ಶ್ರೀರಾಮ ವಿದ್ಯಾಸಂಸ್ಥೆ ಕಳೆದ 40 ವರ್ಷದಿಂದ ನೀಡುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಶ್ರೀರಾಮ ಪ್ರಾಥಮಿಕ ಶಾಲೆಯು ರಾಜ್ಯದಲ್ಲಿಯೇ ಅತೀ ಹೆಚ್ಚು ಅಂದರೆ 1231 ವಿದ್ಯಾರ್ಥಿಗಳನ್ನು ಹೊಂದಿರುವ ಏಕೈಕ ಕನ್ನಡ ಮಾಧ್ಯಮ ಶಾಲೆಯಾಗಿರುವುದು ನಮ್ಮ ಹೆಮ್ಮೆಯಾಗಿದೆ. ಇಂತಹ ಶಾಲೆಯಲ್ಲಿ ತಂತ್ರಜ್ಞಾನ ದೊಂದಿಗೆ ವಿದ್ಯಾರ್ಥಿಗಳ ವೈಜ್ಞಾನಿಕ ಮನೋಭಾವ ಹೆಚ್ಚಿಸಿಕೊಳ್ಳಲು ನಿರ್ಮಿಸಲಾದ ವಿಶಾಲವಾದ ನೂತನ ವಿಜ್ಞಾನ ಪ್ರಯೋಗಾಲಯ, ಕಂಪ್ಯೂಟರ್ ಕೊಠಡಿ ಮತ್ತು ಸ್ಮಾಟ್ ಕ್ಲಾಸ್ ನ್ನು ನಿರ್ಮಿಸಲಾಗಿದೆ ಎಂದು ಹೇಳಿದರು.

ದಿನನಿತ್ಯದ ಸ್ವರಸ್ವತಿ ವಂದನೆ ನಂತರ ಪೂರ್ಣಕುಂಭ ಸ್ವಾಗತದೊಂದಿಗೆ ಒಂದನೇ ತರಗತಿಯ ಮಕ್ಕಳನ್ನು ಕರೆತರಲಾಯಿತು. ಅಧ್ಯಾಪಕ ವೃಂದದವರು ವಿದ್ಯಾರ್ಥಿಗಳಿಗೆ ಆರತಿ, ಅಕ್ಷತೆ, ತಿಲಕ ಧಾರಣೆ ಮಾಡಿ ಸಿಹಿ ನೀಡಿದರು.

ನಂತರ ನೂತನವಾಗಿ ಸೇರಿದ ವಿದ್ಯಾರ್ಥಿಗಳು ಅಗ್ನಿಕುಂಡಕ್ಕೆ ಘೃತಾಹುತಿ ಮಾಡಿ ಹಿರಿಯರಿಂದ ಆಶೀರ್ವಾದ ಪಡೆದುಕೊಂಡರು.

ವೇದಿಕೆಯಲ್ಲಿ ತುಮಕೂರು, ಇನ್ ಕ್ಯಾಪ್ ಕಾಂಟ್ರೆಕ್ಟ್ ಮ್ಯನುಫ್ಯಾಕ್ಟರಿಂಗ್ ಸರ್ವಿಸಸ್ ಪ್ರೈ.ಲಿ. ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಮೂರ್ತಿ ಮುನಿಪಲ್ಲಿ ಹಾಗೂ ಪ್ರಧಾನ ವ್ಯವಸ್ಥಾಪಕರಾದ ಶ್ರೀ ವೆಂಕಟೇಶ್ ಟಿ.ಕೆ., ಕಾಪುವಿನ ಉದ್ಯಮಿ ಹಾಗೂ ಸಮಾಜ ಸೇವಕರಾದ ಸುರೇಶ್ ಶೆಟ್ಟಿ ಗುರ್ಮೆ, ಮುಂಬಾಯಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಕಾರ್ಯಕರ್ತರಾದ ಬಾಲಕೃಷ್ಣ ಭಂಡಾರಿ , ಯಾದಗಿರಿ ವಿದ್ಯಾಸಂಸ್ಥೆಯ ವೀರರೆಡ್ಡಿ , ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕರಾದ ವಸಂತ ಮಾಧವ, ಸಹ ಸಂಚಾಲಕರಾದ ರಮೇಶ್ ಎನ್, ರಾಷ್ಟ್ರ ಸೇವಿಕಾ ಸಮಿತಿಯ ಕಾರ್ಯಕಾರಿಣಿ ಸದಸ್ಯರಾದ ಡಾ| ಕಮಲಾ ಪ್ರಭಾಕರ್ ಭಟ್ ಹಾಗೂ ಮುಖ್ಯೋಪಾಧ್ಯಾಯರಾದ ರವಿರಾಜ್ ಕಣಂತೂರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಮನ್ವಿತಾ ನಿರೂಪಿಸಿ, ಅಂಕಿತಾ ಸ್ವಾಗತಿಸಿ, ಅನುಷಾ ವಂದಿಸಿದರು.