ಮೆಲ್ಕಾರ್ : ರಾಜಿ ಸಂದಾನಕ್ಕೆ ಬಂದ ಎರಡು ತಂಡಗಳ ನಡುವೆ ಹೊಡಿಬಡಿ – ಸಾಮಾಜಿಕ ಜಾಲತಾಣಗಳಲ್ಲಿ ವಿಡೀಯೋ ವೈರಲ್ : ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡ ಬಂಟ್ವಾಳ ಪೊಲೀಸರು- ಕಹಳೆ ನ್ಯೂಸ್
ಬಂಟ್ವಾಳ: ಕಳೆದ ಕೆಲ ದಿನಗಳ ಹಿಂದೆ ಬಂಟ್ವಾಳದಲ್ಲಿ ನಡೆದ ಮೆಹಂದಿ ಕಾರ್ಯಕ್ರಮವೊಂದರಲ್ಲಿ ಸಂತೋಷ್ ಎಂಬವರಿಗೆ ಅವಿನಾಶ್ ಎಂಬವರು ಹಲ್ಲೆ ನಡೆಸಿದ್ದು, ಇದರ ರಾಜಿ ಪಂಚಾಯತಿಗಾಗಿ ಮೆಲ್ಕಾರ್ ನಲ್ಲಿ ಎರಡು ತಂಡಗಳು ಸೇರಿದ್ದವು.
ಇದೇ ವಿಚಾರವಾಗಿ ಎರಡು ತಂಡಗಳ ನಡುವೆ ಮಾತಿಗೆ ಮಾತು ಬೆಳೆದು ಪರಸ್ಪರ ಮರದ ಸೊಂಟೆ ಹಾಗೂ ಸೋಡದ ಬಾಟಲಿಗಳಿಂದ ಹೊಡೆದಾಟ ನಡೆದಿದ್ದು, ಹೊಡೆದಾಡಿದ ಪ್ರಕರಣ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಘಟನೆ ಬಗ್ಗೆ ಮಾಹಿತಿ ಪಡೆದ, ಬಂಟ್ವಾಳ ಪೊಲೀಸರು ಸ್ಥಳಕ್ಕಾಗಮಿಸುತ್ತಿದ್ದಂತೆ ಒಂದು ತಂಡವು ಒಮ್ನಿಯಲ್ಲಿ ಪರಾರಿಯಾಗಿದ್ದು, ಮತ್ತೊಂದು ತಂಡವೂ ಅಲ್ಲಿಂದ ಕಾಲ್ಕಿತ್ತಿದೆ.
ಸಾರ್ವಜನಿಕ ಸ್ಥಳದಲ್ಲಿ ಗಲಾಟೆ ಮಾಡಿದ್ದಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ಘಟನೆ ವೈರಲ್ ಆಗಿರುವುದರಿಂದ, ಈ ಬಗ್ಗೆ ಯಾವುದೇ ದೂರು ಪೊಲೀಸ್ ಠಾಣೆಗೆ ನೀಡದ ಹಿನ್ನಲೆ ಬಂಟ್ವಾಳ ಪೊಲೀಸರು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.