ಪುತ್ತೂರು: ಧರ್ಮಸ್ಥಳ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್ ನಲ್ಲಿ ABSOLUTE LEARNING ACADEMY ಇದರ ಸಹಯೋಗದೊಂದಿಗೆ ನೀಟ್, ಜೆಇಇ, ಕೆಸಿಇಟಿ ಇದರ ಕಾರ್ಯಗಾರವನ್ನು ನಡೆಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷರಾದ ಗೋಕುಲನಾಥ್ ಮಾತನಾಡುತ್ತಾ ಪ್ರಗತಿ ಸ್ಟಡಿ ಸೆಂಟರ್ ಬೆಳೆದುಬಂದ ರೀತಿಯ ಕುರಿತು ಮಾಹಿತಿಯನ್ನು ನೀಡಿದರು.
ಶ್ರೀ ಸತ್ಯಸಾಯಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾದ ಪ್ರಮೋದ್ ಹೆಚ್ ಅವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಕ್ಕಳಿಗೆ ಪ್ರೌಢ ಹಂತದಲ್ಲೇ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಒಲವು ಮೂಡುವಂತೆ ಮಾಡಬೇಕು ಜೊತೆಗೆ ಕೆಸಿಇಟಿ ಪರೀಕ್ಷೆ ಫಲಿತಾಂಶವು ಯಾವ ಆಧಾರದಲ್ಲಿ ಇರುತ್ತದೆ ಹಾಗೂ ಅದರ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ವಿಘ್ನೇಶ್ ಹೆಚ್ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಕ ಮಾತುಗಳನ್ನಾಡಿ ಹುರಿದುಂಬಿಸಿದರು.
ಉಪನ್ಯಾಸಕಿ ಶ್ರೀಮತಿ ಶ್ರುತಿರಾಜ್ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ವೇದಿಕೆಯಲ್ಲಿ ಸಂಸ್ಥೆಯ ಪ್ರಾಂಶುಪಾಲರಾದ ಶ್ರೀಮತಿ ಹೇಮಲತಾ ಗೋಕುಲನಾಥ್ ಉಪಸ್ಥಿತರಿದ್ದರು.
ಕೊರೋನ ಸಂಕಷ್ಟ ಪರಿಸ್ಥಿತಿಯಲ್ಲಿ ದೊಡ್ಡಮಟ್ಟದ ಕೋಚಿಂಗ್ ತರಗತಿಗಳಿಗೆ ಹೋಗಲು ಸಾಧ್ಯವಾಗದ ಕಾರಣ ಗುಣಮಟ್ಟದ ತರಗತಿಗಳನ್ನು ನಡೆಸಲು ಪ್ರಗತಿ ಸ್ಟಡಿ ಸೆಂಟರ್ ನಲ್ಲಿ ಈ ಪರೀಕ್ಷಾ ತಯಾರಿ ತರಗತಿಗಳನ್ನು ಪ್ರಾರಂಭಿಸಲಾಗಿದೆ. ನುರಿತ ಉಪನ್ಯಾಸಕರಾದ ಬಾಲಸುಬ್ರಹ್ಮಣ್ಯ, ಕೇಶವ್ ಪೈ, ಪ್ರಮೋದ್ ಹೆಚ್, ಪ್ರತಾಪ್ ಲಕ್ಷ್ಮಣ್ (Biology), ಶ್ರೀನಿವಾಸ್ ಎಮ್ (Mathematics), ರಾಹುಲ್, ಗಣೇಶ್ ಮೂರ್ತಿ (Mathematics) ಇವರು ತರಗತಿಗಳನ್ನು ನಡೆಸುತ್ತಿದ್ದಾರೆ. ಈ ವಿದ್ಯಾಸಂಸ್ಥೆಯು ಕಳೆದ 13 ವರ್ಷದಲ್ಲಿ ಪ್ರಮಾಣಕ್ಕಿಂತಲೂ ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಟ್ಟ ಕಾರಣ ಈ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದು ಪರೀಕ್ಷಾ ತಯಾರಿ ಕಾರ್ಯಗಾರ ತರಗತಿಗಳನ್ನು ಪ್ರಾರಂಭಿಸಿದೆ. ಕಾರ್ಯಕ್ರಮದಲ್ಲಿ ಉಪನ್ಯಾಸಕವೃಂದ, ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಕುಮಾರಿ ರಕ್ಷಾ ಇವರು ನೆರವೇರಿಸಿದರು. ಕನ್ನಡ ಉಪನ್ಯಾಸಕಿಯಾದ ಶ್ರೀಮತಿ ಪ್ರಮೀಳಾ ಎನ್.ಡಿ ಸ್ವಾಗತಿಸಿದರು. ವ್ಯವಹಾರ ಅಧ್ಯಯನ ಉಪನ್ಯಾಸಕಿ ಶ್ರೀಮತಿ ಸಂಹಿತಾ ಅವರು ವಂದಿಸಿದರು.