Sunday, January 19, 2025
ಸಂತಾಪ

ಗದಗ : ಹಾಲಕೇರಿ ಮಠದ ಪೀಠಾಧಿಪತಿ ಡಾ ಅಭಿನವ ಅನ್ನದಾನೇಶ್ವರ ಮಹಾಸ್ವಾಮಿಜಿ ಲಿಂಗೈಕ್ಯ – ಕಹಳೆ ನ್ಯೂಸ್

ಗದಗ : ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಹಾಲಕೇರಿ ಮಠದ ಪೀಠಾಧಿಪತಿ, ಶ್ರೀ ಡಾ.ಸಂಗನಬಸವ (ಅಭಿನವ ಅನ್ನದಾನೇಶ್ವರ) ಮಹಾ ಸ್ವಾಮಿಜಿ ಲಿಂಗೈಕ್ಯರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಸ್ವಾಮಿಜಿಯನ್ನು ಬೆಂಗಳೂರು ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಗದಗ ಜಿಲ್ಲೆಯ ಹಾಲಕೇರಿ ಶ್ರೀ ಅನ್ನದಾನೇಶ್ವರ ಮಠದ ಅಭಿನವ ಅನ್ನದಾನೇಶ್ವರ ಪರಮಪೂಜ್ಯ ಶ್ರೀ ಡಾ.ಸಂಗನಬಸವ ಸ್ವಾಮೀಜಿಗಳು 128 ಶಾಖಾ ಮಠ, 60ಕ್ಕೂ ಅಧಿಕ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಅವರು ಸಮಾಜಕ್ಕೆ ಅವಿರತ ಸೇವೆ ಸಲ್ಲಿಸಿದ್ದರು. ಇಂದು ಮುಖ್ಯಮಂತ್ರಿಗಳಾದ ಬಸವರಾಜಬೊಮ್ಮಾಯಿ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ರಾಜ್ಯ ಸರ್ಕಾರ ಲೋಕೋಪಯೋಗಿ ಇಲಾಖೆ ಸಚಿವರಾದ ಸಿಸಿಪಾಟೀಲ ಹಿರಿಯ ಸಚಿವರಾದ ಗೋವಿಂದ ಕಾರಜೋಳ ಅವರು ಆಸ್ಪತ್ರೆಗೆ ತೆರಳಿ ಶ್ರೀಗಳ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು..

ಶಿವಯೋಗ ಮಂದಿರ ಅಧ್ಯಕ್ಷರು ಆಗಿದ್ದ ಸ್ವಾಮೀಜಿ, ನವೆಂಬರ್ 8,9,10 ರಂದು ಮಠಕ್ಕೆ ನೂತನ ಚಿರ ಪಟ್ಟಾಧಿಕಾರ ಕಾರ್ಯಕ್ರಮ ನಡೆಸಿದ್ದು, ತಮ್ಮ ಸ್ಥಾನಕ್ಕೆ ನೂತನವಾಗಿ ಮುಪ್ಪಿನ ಬಸವಲಿಂಗ ಸ್ವಾಮಿಜಿ ಪಟ್ಟಾಧಿಕಾರ ಮಾಡಿದ್ದಾರೆ. ಇಂದು ಮಧ್ಯಾಹ್ನ ಗದಗ ಜಿಲ್ಲೆ ಹಾಲಕೇರಿ ಗ್ರಾಮಕ್ಕೆ ಸ್ವಾಮಿಜಿ ಪಾರ್ಥಿವ ಶರೀರ ಬರಲಿದೆ.