Wednesday, January 22, 2025
ಸುದ್ದಿ

ಪಚ್ಚನಾಡಿ ರೈಲ್ವೇ ಓವರ್ ಬ್ರಿಡ್ಜ್ ಕಾಮಗಾರಿ ಪೂರ್ಣ ; ಶಾಸಕ ಡಾ. ಭರತ್ ಶೆಟ್ಟಿ ಭೇಟಿ – ಕಹಳೆ ನ್ಯೂಸ್

ಮಂಗಳೂರು: ಪಚ್ಚನಾಡಿ ರೈಲ್ವೇ ಓವರ್ ಬ್ರಿಡ್ಜ್ ಕಾಮಗಾರಿ ಹಾಗೂ ಬೊಂದೇಲ್ – ಮಂಗಳ ಜ್ಯೋತಿ ಸಂಪರ್ಕಿಸುವ ಪಚ್ಚನಾಡಿ ಮುಖ್ಯ ರಸ್ತೆ, ಎರಡೂ ಬದಿ ರಸ್ತೆ ಕಾಂಕ್ರಿಟೀಕರಣ ಕಾಮಗಾರಿ ವೇಗ ಪಡೆದು ಪೂರ್ಣ ಗೊಂಡ ಹಿನ್ನೆಲೆಯಲ್ಲಿ ಲೋಕಾರ್ಪಣೆಗೊಳಿಸುವ ಮುನ್ನ ಸಂಸದರಾದ ನಳಿನ್ ಕುಮಾರ್ ಕಟೀಲ್ ಅವರ ಸೂಚನೆ ಮೇರೆಗೆ ಪರಿಶೀಲನೆ ನಡೆಸಲು ಪಚ್ಚನಾಡಿ ರೈಲ್ವೇ ಬ್ರಿಡ್ಜ್ ಕಾಮಗಾರಿ ಪ್ರದೇಶಕ್ಕೆ ಮಂಗಳೂರು ಉತ್ತರ ಶಾಸಕರಾದ ಡಾ. ಭರತ್ ಶೆಟ್ಟಿ ವೈ ರವರು ಭೇಟಿ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಶಾಸಕರ ಜೊತೆಗೆ ಸ್ಥಳೀಯ ಮಹಾ ನಗರ ಪಾಲಿಕೆ ಸದಸ್ಯೆ ಸಂಗೀತಾ ಆರ್ ನಾಯಕ್, ಮಂಡಲ ಪ್ರಧಾನ ಕಾರ್ಯದರ್ಶಿ ಸಂದೀಪ್ ಪಚ್ಚನಾಡಿ, ಅಧಿಕಾರಿ ವರ್ಗದವರು ಹಾಗೂ ಸ್ಥಳೀಯ ಕಾರ್ಯಕರ್ತರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾಮಗಾರಿ ಸಂದರ್ಭ ಸುಮಾರು 42 ದಿನ ಮುಖ್ಯ ರಸ್ತೆ ಮುಚ್ಚಲ್ಪಟ್ಟಿದ್ದರೂ ಪ್ರಯಾಣಿಕರಿಗೆ ಹಾಗೂ ಸ್ಥಳೀಯ ನಾಗರಿಕರಿಗೆ ತೊಂದರೆ ಆಗದಂತೆ ಕಾರ್ಪೊರೇಟರ್ ಸಹಕಾರದಲ್ಲಿ ಉಚಿತ ವಾಹನ ಸೌಲಭ್ಯ ಕಲ್ಪಿಸಿ ಸೇವಾ ಕಾರ್ಯ ನಡೆಸಿದ ಪರಿಯನ್ನು ಹಾಗೂ ನಿಸ್ವಾರ್ಥ ಸೇವೆ ಗೈದ ಕಾರ್ಯಕರ್ತರನ್ನು ಶಾಸಕರು ಅಭಿನಂದಿಸಿದರು.

ಬಳಿಕ ಮಾತನಾಡಿದ ಶಾಸಕರು ಸೇವೆಯೇ ಸಂಘಟನೆಯ ಮೂಲ, ಇಂತಹ ಅದ್ಭುತ ಕಾರ್ಯವೆಸಗಲು ಆತ್ಮಸ್ಥೈರ್ಯ ಬೇಕಾಗಿದ್ದು ಇದು ಇಲ್ಲಿನ ನಾಯಕರಲ್ಲಿದ್ದು, ಕಾರ್ಪೊರೇಟರ್ ಕೂಡ ಸದಾ ಸೇವಾ ಚಟುವಟಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಳ್ಳುವುದರಿಂದ ಇದು ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ಬಾಕಿ ಇರುವ (ವೇಗ ನಿಯಂತ್ರಕ, ನೀರು ಹರಿಯುವ ಚರಂಡಿ, ದಾರಿ ದೀಪ ಇನ್ನಿತರ) ಕೆಲಸ ಕಾರ್ಯಗಳನ್ನು ಅತೀ ಶೀಘ್ರದಲ್ಲಿ ನೆರವೇರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.