Tuesday, January 21, 2025
ಪುತ್ತೂರು

ತುಳುನಾಡ ಗಾನ ಗಂಧರ್ವ ಸಂಗೀತ ಸೇವಾ ಪ್ರತಿಷ್ಠಾನ ರಿ. ಪುತ್ತೂರು ಜಗದೀಶ್ ಅಚಾರ್ಯ ರ ವತಿಯಿಂದ ಚಿಂತನೆಯ ನವದುರ್ಗೆಯೇ ಅಮ್ಮ ಕನ್ನಡ ವಿಡಿಯೋ ಭಕ್ತಿಗೀತೆ ಬಿಡುಗಡೆ- ಕಹಳೆ ನ್ಯೂಸ್

ಮಂಗಳೂರು: ತುಳುನಾಡ ಗಾನ ಗಂಧರ್ವ ಸಂಗೀತ ಸೇವಾ ಪ್ರತಿಷ್ಠಾನ ರಿ. ಪುತ್ತೂರು ಜಗದೀಶ್ ಅಚಾರ್ಯ ರ ವತಿಯಿಂದ ಚಿಂತನೆಯ ನವದುರ್ಗೆಯೇ ಅಮ್ಮ ಅನ್ನೋ ವಿಡಿಯೋ ಭಕ್ತಿಗೀತೆಯು ಮಂಗಳೂರಿನ ಜಪ್ಪಿನ ಮೊಗೆರು ಚಿಂತನೆ ಶ್ರೀ ನವದುರ್ಗಾ ಮಂತ್ರಾ ಮೂರ್ತಿ ಪುಣ್ಯ ಕ್ಷೇತ್ರದಲ್ಲಿ ದೀಪ ಪ್ರಜ್ವಲನೆ ಮಾಡುವುದರ ಮೂಲಕ ಜಗದೀಶ್ ಪುತ್ತೂರು ಯುಟ್ಯೂಬ್ ಚಾನಲ್‍ನಲ್ಲಿ ಬಿಡುಗಡೆಗೊಂಡಿತು.

 

ಜಾಹೀರಾತು
ಜಾಹೀರಾತು
ಜಾಹೀರಾತು

ತುಳು ಸಾಹಿತ್ಯ ಅಕಾಡಮಿ ಅಧ್ಯಕ್ಷರು ತುಳುವ ಬೊಳ್ಳಿ ದಯಾನಂದ್ ಕತ್ತಲ್ ಸಾರ್ ಅವರ ಸಾಹಿತ್ಯ ಹಾಗೂ ತುಳುನಾಡ ಗಾನ ಗಂಧರ್ವ ಪುತ್ತೂರು ಜಗದೀಶ್ ಅಚಾರ್ಯ ಅವರ ಗಾಯನ ಮತ್ತು ರಾಗ ಸಂಯೋಜನೆಯಿಂದ ಮೂಡಿ ಬಂದ ಚಿಂತನೆಯ ನವದುರ್ಗೆಯೇ ಅಮ್ಮ ಅನ್ನೋ ವಿಡಿಯೋ ಭಕ್ತಿಗೀತೆಯಲ್ಲಿ ಸಹ ಗಾಯಕರಾಗಿ ಸಮನ್ವಿ ರೈ, ವಿದ್ಯಾ ಸುವರ್ಣ, ಸಾಹಿತ್ಯ ಅಚಾರ್ಯ ಹಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

   

ಇನ್ನು ಬಿಡುಗಡೆ ಕಾರ್ಯಕ್ರಮದಲ್ಲಿ ಕ್ಷೇತ್ರದ ಪ್ರಧಾನ ತಂತ್ರಿಗಳಾದ ಶ್ರೀ ಯೋಗೀಶ್ ಭಟ್ ಕೆ ಹಾಗೂ ತುಳು ಅಕಾಡಮಿ ಅಧ್ಯಕ್ಷರು ದಯಾನಂದ್ ಕತ್ತಲ್ ಸಾರ್, ಪ್ರಸಾದ್ ಪುರೋಹಿತರು ಹಾಗೂ ಪ್ರದೀಪ್ ಪುರೋಹಿತರು, ಜಯರಾಮ್ ಇನ್ನಿತರ ಗಣ್ಯರು ಉಪಸ್ಥಿತರಿದ್ದರು. ದಾಮೋದರ್ ಶರ್ಮ ಕಾರ್ಯಕ್ರಮ ನಿರ್ವಹಿಸಿದರು.