Sunday, January 19, 2025
ಸುದ್ದಿ

ಮದ್ಯದ ದೊರೆ ವಿಜಯ್ ಮಲ್ಯ ಅಂದರ್!

ಲಂಡನ್‌: ಕಿಂಗ್ ಫಿಷರ್ ಒಡೆಯ ಮತ್ತು ಸಾವಿರಾರು ಕೋಟಿ ರೂಪಾಯಿಯ ಸಾಲಗಾರನಾದ ವಿಜಯ್‌ ಮಲ್ಯನನ್ನು ಲಂಡನ್‌ನಲ್ಲಿ ಇಂದು ಬಂಧಿಸಲಾಗಿದೆ.

ಸಾವಿರಾರು ಕೋಟಿ ರೂಪಾಯಿ ಸಾಲ ಮಾಡಿ ವಿದೇಶಕ್ಕೆ ಹಾರಿದ್ದ ವಿಜಯ್‌ ಮಲ್ಯನನ್ನು ಎರಡನೇ ಬಾರಿ ಇಂದು ಸ್ಕ್ಯಾಟ್‌ಲ್ಯಾಂಡ್‌ ಯಾರ್ಡ್‌ ಪೊಲೀಸರು ಬಂಧಿಸಿದ್ದಾರೆ.
ವಿವಿಧ ಬ್ಯಾಂಕ್‌ಗಳಲ್ಲಿ 9 ಸಾವಿರ ಕೋಟಿ ಸಾಲ ಮಾಡಿ ವಿದೇಶಕ್ಕೆ ಹಾರಿದ್ದ ಮಲ್ಯನನ್ನು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸೆರೆ ಮಾಡಲಾಗಿದೆ.
ಇನ್ನು ಉದ್ಯಮಿ ವಿಜಯ್‌ ಮಲ್ಯ ಬಂಧನದ ಬೆನ್ನಲ್ಲೇ ಲಂಡನ್‌ ವೆಸ್ಟ್‌ ಮಿನ್‌ಸ್ಟರ್‌ ಕೋರ್ಟ್‌ನಿಂದ ಮಲ್ಯನಿಗೆ ಜಾಮೀನು ಮಂಜೂರಾಗಿದೆ. ಜಾಮೀನು ಸಿಕ್ಕ ಬಳಿಕ ಬಿಡುಗಡೆಗೊಳಿಸಲಾಗಿದೆ.
ಇನ್ನು ಉದ್ಯಮಿ ವಿಜಯ್‌ ಮಲ್ಯ ಬಂಧನದ ಬೆನ್ನಲ್ಲೇ ಲಂಡನ್‌ ವೆಸ್ಟ್‌ ಮಿನ್‌ಸ್ಟರ್‌ ಕೋರ್ಟ್‌ನಿಂದ ಮಲ್ಯನಿಗೆ ಜಾಮೀನು ಮಂಜೂರಾಗಿದೆ. ಜಾಮೀನು ಸಿಕ್ಕ ಬಳಿಕ ಬಿಡುಗಡೆಗೊಳಿಸಲಾಗಿದೆ.
4234 ಕೋಟಿ ಮೌಲ್ಯದ ಮಲ್ಯ ಆಸ್ತಿಯನ್ನು ಈ ಹಿಂದೆಯೇ ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿತ್ತು. ಇನ್ನು ಮಲ್ಯನನ್ನು ಬಂಧಿಸಿರುವುದನ್ನು ಸಿಬಿಐ ಅಧಿಕಾರಿಗಳು ಖಚಿತ ಪಡಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

Leave a Response