Tuesday, January 21, 2025
ಬೆಳ್ತಂಗಡಿ

ಹರಿಯಾಣದಲ್ಲಿ ನಡೆದ ರಾಷ್ಟ್ರಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ ಉತ್ತಮ ಪ್ರದರ್ಶನ ನೀಡಿದ ಕ್ರೀಡಾಪಟುಗಳನ್ನು ಅಭಿನಂಧಿಸಿದ ಶಾಸಕ ಹರೀಶ್ ಪೂಂಜಾ- ಕಹಳೆ ನ್ಯೂಸ್

ಬಂದಾರು: ಹರಿಯಾಣದಲ್ಲಿ ನಡೆದ ರಾಷ್ಟ್ರಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ ಉತ್ತಮ ಪ್ರದರ್ಶನ ನೀಡಿದ ಬಂದಾರು ಹಾಗೂ ಮೊಗ್ರು ಗ್ರಾಮದ ಕ್ರೀಡಾಪಟುಗಳಿಗೆ ಅಭಿನಂದನಾ ಕಾರ್ಯಕ್ರಮವು ಬೆಳ್ತಂಗಡಿ ಶ್ರಮಿಕ ಕಛೇರಿಯಲ್ಲಿ ನಡೆಯಿತು.

ರಾಷ್ಟ್ರಮಟ್ಟದ ತ್ರೋಬಾಲ್ ಪಂದ್ಯಾಟದ ಸೀನಿಯರ್ ವಿಭಾಗದಲ್ಲಿ ಪ್ರಶಸ್ತಿ ಪಡೆದ ಭರತೇಶ್ ಗೌಡ ಮರೋಳ, ದ್ವೀತಿಯ ಸ್ಥಾನ ಪಡೆದ ಮೊಗ್ರು ಗ್ರಾಮದ ಆಶಿಕಾ ಮುಗೇರಡ್ಕ ಹಾಗೂ ಸಬ್ ಜ್ಯೂನಿಯರ್ ವಿಭಾಗದಲ್ಲಿ ದ್ವೀತಿಯ ಸ್ಥಾನ ಪಡೆದ ಅಭಿಶ್ರುತ್ ಮುರ, ಬಂದಾರು ಶ್ರೀರಾಮ ನಗರದ ಸುಜಿತ್ ಇವರುಗಳನ್ನು ಶಾಸಕ ಹರೀಶ್ ಪೂಂಜಾ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿ, ಶುಭ ಹಾರೈಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಯಶವಂತ ಗೌಡ, ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷ ಪರಮೇಶ್ವರಿ ಗೌಡ, ಗ್ರಾಮ ಪಂಚಾಯತ್ ಸದಸ್ಯರಾದ ಬಾಲಕೃಷ್ಣ ಗೌಡ, ದಿನೇಶ್ ಗೌಡ ಖಂಡಿಗ, ಚೇತನ್ ಗೌಡ, ಪದ್ಮುಂಜ ಸಿ.ಎ ಬ್ಯಾಂಕ್ ಅಧ್ಯಕ್ಷ ರಕ್ಷಿತ್ ಪಣಿಕ್ಕರ, ಗಿರೀಶ್, ಪ್ರಶಾಂತ್ ಗೌಡ ಮೈರೋಳ್ತಡ್ಕ, ಗಿರೀಶ್ ಗೌಡ,ಬಿ.ಕೆ ಮತ್ತಿತ್ತರರು ಉಪಸ್ಥಿತರಿದ್ದರು.