Sunday, November 24, 2024
ಪುತ್ತೂರುಸುದ್ದಿ

ಪುತ್ತೂರಿನ ಸರಕಾರಿ ಕಾಲೇಜಿನಲ್ಲಿ ಮಾತಿನ ಚಕಮಕಿ – ಕಾಲೇಜಿಗೆ ನುಗ್ಗಿದ ಮುಸ್ಲಿಂ ಸಂಘಟನೆಯ ಯುವಕರು – ಕಹಳೆ ನ್ಯೂಸ್

ಪುತ್ತೂರು : ಕಾಲೇಜು ವಿದ್ಯಾರ್ಥಿಗಳ ನಡುವೆ ಮಾತಿನ ಚಕಮಕಿ ನಡೆದ ಘಟನೆ ಪುತ್ತೂರಿನ ಸರಕಾರಿ ಕಾಲೇಜಿನಲ್ಲಿ ನಡೆದಿದೆ. ಹಿಂದೂ ಹಾಗೂ ಮುಸ್ಲಿಂ ಯುವಕರ ನಡುವೆ ವೈಯಕ್ತಿಕ ವಿಚಾರಕ್ಕೆ ಮಾತಿಗೆ ಮಾತು ಬೆಳೆದಿತ್ತು. ಕಾಲೇಜಿನ ಹೊರಗಡೆ ನಡೆದಿದ್ದ ಜಗಳ ಇದೀಗ ಕಾಲೇಜ್ ಕ್ಯಾಂಪಸ್‍ವರೆಗೆ ಬಂದಿದ್ದು, ಇಂದು ಮುಸ್ಲಿಂ ಯುವಕರ ಪರವಾಗಿ ಮುಸ್ಲಿಂ ಸಂಘಟನೆಯ ಯುವಕರು ಕಾಲೇಜು ಕ್ಯಾಂಪಸ್ ಬಳಗೆ ನುಗ್ಗಿ ಹಿಂದೂ ಯುವಕರನ್ನ ಪ್ರಶ್ನಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವಿದ್ಯಾರ್ಜನೆಗಾಗಿ ಬರುವ ವಿದ್ಯಾರ್ಥಿಗಳು ಈ ರೀತಿ ಪರಸ್ಪರ ಜಗಳವಾಡಿಕೊಂಡು, ಇದೀಗ ಅನ್ಯ ಸಂಘಟನೆಗಳು ಕ್ಯಾಂಪಸ್‍ಗೆ ಬಂದು ರೌಡಿಗಳಂತೆ ವರ್ತಿಸ್ತಾ ಇರೋದು ಎಷ್ಟು ಸರಿ….? ಅನ್ನೋದು ಕಾಲೇಜಿನ ವಿದ್ಯಾರ್ಥಿಗಳ ಪ್ರಶ್ನೆಯಾಗಿದೆ. ಅಲ್ಲದೆ ಮುಸ್ಲಿಂ ಯುವಕರು ಕಾಲೇಜು ಕ್ಯಾಂಪಸ್‍ಗೆ ನುಗ್ಗಿ ರೌಡಿಗಳಂತೆ ವರ್ತಿಸಿರೋದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು


ಇನ್ನು ಇಂದು ನಡೆದ ಗಲಾಟೆಯ ಬಗ್ಗೆ ಕಹಳೆ ನ್ಯೂಸ್ ಗೆ ಮಾಹಿತಿ ನೀಡಿದ ಹಲ್ಲೆಗೊಳಗಾದ ವಿದ್ಯಾರ್ಥಿಗಳು ಮಹಮ್ಮದ್ ಆದಿಲ್ ಹಿಂದೂ ಯುವತಿಯೊಂದಿಗೆ ಮಾತನಾಡುತ್ತಾ, ಅಸಭ್ಯವಾಗಿ ವರ್ತಿಸುತ್ತಿದ್ದು, ಇದು ಸರಿಯಲ್ಲ ಎಂದು ಹೇಳಿದ್ದ ಹಿಂದೂ ಯುವಕರಿಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಹಾಗೂ ಹಲ್ಲೆಗೊಳಗಾದ ವಿದ್ಯಾರ್ಥಿಗಳು ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

 

ಇನ್ನು ಹಲ್ಲೆ ನಡೆಸಿದ ಆದಿಲ್ ಮತ್ತು ತಂಡ ಹಾಗೂ ಎಸ್.ಡಿ.ಪಿ. ಐ. ಕಾರ್ಯಕರ್ತರು ಪರಾರಿಯಾಗಿದ್ದು, ನಂತರ ಆದಿಲ್ನ ನ್ನು ಆಸ್ಪತ್ರೆಯಗೆ ದಾಖಲಿಸುವ ಪ್ರಯತ್ನ ಮಾಡಿದ್ದಾರೆ.