Monday, April 21, 2025
ಸುದ್ದಿ

ಗೂಡ್ಸ್ ರೈಲಿನ ಮೇಲೆ ಸೆಲ್ಫಿ ತೆಗೆಯಲು ಹತ್ತಿದ ಯುವಕನಿಗೆ ಕರೆಂಟ್ ಶಾಕ್ – ಕಹಳೆ ನ್ಯೂಸ್

ಸುರತ್ಕಲ್ : ಗೂಡ್ಸ್ ರೈಲಿನ ಮೇಲೆ ಹತ್ತಿ ಸೆಲ್ಫಿ ತೆಗೆಯಲು ಹೋದ ಯುವಕನಿಗೆ ಕರೆಂಟ್ ಶಾಕ್ ಹೊಡೆದ, ಘಟನೆ ಸುರತ್ಕಲ್ ರೈಲ್ವೆ ಸ್ಟೇಷನ್ ಸಮೀಪದ ಅಗರಮೇಲು ಎಂಬಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಂಗಳೂರಿನ ಸಲ್ಮಾನ್ ಪಾರಸ್ (21) ವಿದ್ಯುತ್ ಅವಘಡಕ್ಕೆ ಒಳಗಾದ ಯುವಕನಾಗಿದ್ದು, ನಿಲುಗಡೆಗೊಂಡಿದ್ದ ಗೂಡ್ಸ್ ರೈಲಿನ ಮೇಲೆ ಹತ್ತಿದ ಸಲ್ಮಾನ್ ಸೆಲ್ಫಿ ತೆಗೆಯಲು ಮುಂದಾಗಿದ್ದಾನೆ. ಆದರೆ ಪಕ್ಕದಲ್ಲೇ ಹಾದು ಹೋಗಿರುವ ಹೈವೋಲ್ಟೇಜ್ ತಂತಿಗಳನ್ನು ಗಮನಿಸದ ಕಾರಣ ವಿದ್ಯುತ್ ಶಾಕ್ ಆಘಾತಕ್ಕೀಡಾಗಿ ಭಾಗಶಃ ಸುಟ್ಟು ಹೋಗಿದ್ದಾನೆ. ಗಾಯಗೊಂಡ ಯುವಕನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ

ಜಾಹೀರಾತು
ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ