Sunday, November 24, 2024
ಪುತ್ತೂರು

ಇಂಟರ್ ನ್ಯಾಷನಲ್ ಆನ್‍ಲೈನ್ ಅಬಾಕಸ್ ಸ್ಪರ್ಧೆಯಲ್ಲಿ ಜಿಲ್ಲೆಗೆ ಕೀರ್ತಿ ತಂದ IRCMD ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು- ಕಹಳೆ ನ್ಯೂಸ್

ಪುತ್ತೂರು: ಪುತ್ತೂರಿನಲ್ಲಿ ಕಾರ್ಯಚರಿಸುತ್ತಿರುವ IRCMD ಶಿಕ್ಷಣ ಸಂಸ್ಥೆಯ ಮೂವರು ವಿದ್ಯಾರ್ಥಿಗಳು ನವಂಬರ್ 14 ರಂದು ನಡೆದ ಇಂಟರ್ ನ್ಯಾಷನಲ್ ಆನ್‍ಲೈನ್ ಅಬಾಕಸ್ ಸ್ಪರ್ಧೆಯಲ್ಲಿ ಚಾಂಪಿಯನ್ ಆಫ್ ಚಾಂಪಿಯನ್ ಆಗಿ ಹೊರ ಹೊಮ್ಮುವ ಮೂಲಕ ಜಿಲ್ಲೆಗೆ ಕೀರ್ತಿಯನ್ನು ತಂದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬೆದ್ರಾಳದ ಶೈಲೇಶ್ ಶೆಟ್ಟಿ ಮತ್ತು ಶೃತಿ ಇವರ ಪುತ್ರನಾದ 6 ವರ್ಷದ ಆರ್ಯ ಎಸ್ ಶೆಟ್ಟಿ, ಕಲ್ಲಡ್ಕದ ರಾಜೀವ ಮತ್ತು ವಾಣಿ ಇವರ ಪುತ್ರನಾದ 10 ವರ್ಷದ ಶ್ರೇಯಾಂಕ್ ಆರ್.ವಿ ಮತ್ತು ಸವಣೂರಿನ ಪ್ರದೀಪ್ ಜೈನ್ ಮತ್ತು ಪ್ರೇಕ್ಷಾ ಇವರ ಪುತ್ರಿಯಾದ 10 ವರ್ಷದ ಇಚ್ಛಿಕಾ ಜೈನ್ ಇವರು IRCMD ಶಿಕ್ಷಣ ಸಂಸ್ಥೆಯಲ್ಲಿ ಕಳೆದ 6 ತಿಂಗಳಿನಿಂದ ಅಬಾಕಸ್ ತರಬೇತಿಯನ್ನು ಪಡೆದು ಅಂತರಾಷ್ಟ್ರೀಯ ಮಟ್ಟದಲ್ಲಿ ಚಾಂಪಿಯನ್ ಆಫ್ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

IRCMD ಶಿಕ್ಷಣ ಸಂಸ್ಥೆಯು ಅಬಾಕಸ್‍ನ ಜೊತೆಗೆ ಹೈಸ್ಕೂಲ್ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ವೇದಿಕ್ ಮ್ಯಾಥ್ಸ್, ಕಂಪ್ಯೂಟರ್ ಶಿಕ್ಷಣ, ಬ್ಯಾಂಕಿಂಗ್ ಹಾಗೂ ಇತರೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನುರಿತ ತರಬೇತುದಾರರಿಂದ ತರಬೇತಿಯನ್ನು ನೀಡುತ್ತಿದೆ. ಇದೀಗ 12ನೇ ವರ್ಷದ ಸಂಭ್ರಮಾಚರಣೆಯಲ್ಲಿರುವ ಈ ಸಂಸ್ಥೆಯಲ್ಲಿ ದಾಖಲಾತಿ ಬಯಸುವವರು 9632320477ಗೆ ಸಂಪರ್ಕಿಸಬಹುದು.