Friday, November 22, 2024
ಕಾಸರಗೋಡು

ದ.ಕ ಜಿಲ್ಲೆಗೆ ಮತ್ತೊಂದು ವೈರಸ್‍ನ ಆತಂಕ, ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ…!-ಕಹಳೆ ನ್ಯೂಸ್

ಇಡೀ ದೇಶ ಕೊರೊನಾ ವೈರಸ್ ನಿಂದ ತತ್ತರಿಸಿ ಸಾಕಾಷ್ಟು ಸಾವು ನೋವುಗಳನ್ನು ಅನುಭವಿಸಿ, ಇತ್ತೀಚಿಗಷ್ಟೇ ಚೇತರಿಕೆ ಕಾಣುತಿದೆ. ಆದ್ರೆ ಈ ನಡುವೆ ಮತ್ತೊಂದು ವೈರಸ್ ಆತಂಕ ಸೃಷ್ಠಿಸುತ್ತಿದೆ, ಕೇರಳದಲ್ಲಿ ನೊರೊ ವೈರಸ್ ಕಾಣಿಸಿಕೊಂಡಿರುವುದೇ ಈ ಆತಂಕಕ್ಕೆ ಕಾರಣ.

ಕೇರಳ ರಾಜ್ಯದ ವಯನಾಡು ಜಿಲ್ಲೆಯ ಪುಕೊಡೆ ಪಶುವೈದ್ಯಕೀಯ ಕಾಲೇಜಿನ 13 ವಿದ್ಯಾರ್ಥಿಗಳಲ್ಲಿ ನೊರೊ ವೈರಾಣು ದೃಢಪಟ್ಟಿದೆ. ನೊರೊ ವೈರಸ್ ಕಾಣಿಸಿಕೊಂಡಿರುವ ಹಿನ್ನಲೆ, ಗಡಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳಲ್ಲಿ ಮುಂಜಾಗ್ರತೆ ಕ್ರಮಗಳನ್ನು ಅನುಸರಿಸಬೇಕೆಂದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೂಚಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ನೊರೊ ವೈರಸ್ ಸಾಮಾನ್ಯವಾಗಿ ಕಲುಷಿತ ಆಹಾರ ಮತ್ತು ಕಲುಷಿತ ನೀರಿನಿಂದ ಹರಡುತ್ತದೆ. ವಾಂತಿ-ಭೇದಿ, (ಅತಿಸಾರ) ವಾಕರಿಕೆ ಮತ್ತು ಹೊಟ್ಟೆ ನೋವು ಇದರ ಜೊತೆಗೆ ತಲೆ ನೋವು, ಮೈ ಕೈ ನೋವು ಮತ್ತು ಸಾಧಾರಣ ಜ್ವರದಂತಹ ಲಕ್ಷಣಗಳು ಈ ವೈರಸ್ ನಲ್ಲಿ ಕಾಣಿಸುತ್ತದೆ. ಇಂತಹ ಯಾವುದೇ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಳ್ಳುವುದು ಉತ್ತಮ ಇಲ್ಲವಾದರೆ, ಮಾರಣಾಂತಿಕವಾಗಬಹುದು.

1. ಈ ವೈರಸ್‍ಗೆ ಚಿಕಿತ್ಸೆ ‘ನಾನ್ ಸ್ಪೆಸಿಪಿಕ್’ ಆಗಿದ್ದು ರೋಗ ಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆ ನೀಡಬೇಕು.
2. ಜಿಲ್ಲೆಗೆ ಒಬ್ಬ ‘ಫಿಷಿಸಿಯನ್’ ರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಿ ಸೂಕ್ತ ನಿರ್ವಹಣೆ ಮಾಡಲು ತಿಳಿಸುವುದು ಅಲ್ಲದೆ ಸದರಿಯವರ ಹೆಸರು ಮತ್ತು ದೂರವಾಣಿಗಳನ್ನು ಸಹ ನಿರ್ದೇಶಕರ ಗಮನಕ್ಕೆ ತರುವುದು.
3. ಜಿಲ್ಲಾ ಆರೋಗ್ಯ ಮತ್ತು ಕು ಕ ಆಧಿಕಾರಿಗಳು ಈ ಸೋಂಕಿನ ನಿರ್ವಹಣೆಯ ಸಂಪೂರ್ಣ ಜವಾಬ್ದಾರರಾಗಿರುತ್ತಾರೆ. ದೈನಂದಿನ ಮಾಹಿತಿಯನ್ನು ಸಹ ನಿರ್ದೇಶಕರು ಸಾಂಕ್ರಾಮಿಕ ರೋಗಗಳ ವಿಭಾಗಕ್ಕೆ ಸಲ್ಲಿಸುವುದು.
4. ಎಲ್ಲಾ ಕುಡಿಯುವ ನೀರಿನ ಮೂಲಗಳ ಮಾಹಿತಿಯನ್ನು ಕಲೆ ಹಾಕುವುದು ಹಾಗೂ ಎಲ್ಲಾ ಮೂಲಗಳಿಂದ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೊಳಪಡಿಸುವುದು. ಕುಡಿಯಲು ಯೋಗ್ಯವಿಲ್ಲವೆಂದು ದೃಢಪಟ್ಟ ನೀರಿನ ಮೂಲಗಳನ್ನು ತಪ್ಪದೇ ತಕ್ಷಣ ಕ್ಲೋರಿನೇಷನ್ ಮಾಡಿಸುವುದು. ಕ್ಲೋರಿನೇಷನ್ ಮಾಡಿರುವ ನೀರಿನಲ್ಲಿ ನಿರೀಕ್ಷೆಯ ಮಟ್ಟದಲ್ಲಿ (0.2-0.5ಪಿಪಿಎಂ) ಕ್ಲೋರಿನ್ ಅಂಶವಿರುವ ಬಗ್ಗೆ ಕ್ಲೋರೋಸ್ಕೋಪ್ ಬಳಸಿ ಪರೀಕ್ಷಿಸುವುದು.
5. ಕುಡಿಯುವ ನೀರನ್ನು ಕಲುಷಿತಗೊಳಿಸುವ, ಕುಡಿಯುವ ನೀರಿನ ಪೂರೈಕೆಯಲ್ಲಿನ ದೋಷಗಳನ್ನು(ಸೋರುವಿಕೆ ಇತ್ಯಾದಿ) ಗುರುತಿಸಿ, ಸಂಬಂಧ ಪಟ್ಟವರಿಗೆ (ಗ್ರಾಮ ಪಂಚಾಯತ್ ಸ್ಥಳೀಯ ಸಂಸ್ಥೆ ತಿಳಿಸಿ ತಕ್ಷಣ ದುರಸ್ತಿಗೊಳಿಸಲು ಕ್ರಮವಹಿಸುವುದು. ಕುಡಿಯುವ ನೀರಿನ ವೈಮಗಳು ಚರಂಡಿ ಮೂಲಕ ಹಾಯ್ದು ಹೋಗದಂತ ಕ್ರಮವಹಿಸಲು ಸಂಬಂಧಪಟ್ಟ ಸ್ಥಳೀಯ ಸಂಸ್ಥೆ ಹಾಗೂ ಗ್ರಾಮ ಪಂಚಾಯತಿಗೆ ತಿಳಿಸುವುದು.
6. ವೈಯಕ್ತಿಕ ಸ್ವಚ್ಛತೆ, ಶುದ್ಧ ಕುಡಿಯುವ ನೀರಿನ ಹಾಗೂ ಆಹಾರದ ಸಂರಕ್ಷಣೆ, ಪರಿಸರ ನೈರ್ಮಲ್ಯದ ನಿರ್ವಹಣೆ ಬಗ್ಗೆ ತಿಳಿಸುವುದು, ರಸ್ತೆಬೀದಿ ಬದಿಗಳಲ್ಲಿ ಮಾರುವ ಕತ್ತರಿಸಿದ ಹಣ್ಣು ಮತ್ತು ತೆರೆದಿಟ್ಟ ಆಹಾರ ಪದಾರ್ಥಗಳನ್ನು ಸೇವಿಸಬಾರದೆಂದು ಸಾರ್ವಜನಿಕರಿಗೆ ಆರೋಗ್ಯ ಶಿಕ್ಷಣ ನೀಡಲು ಎಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚಿಸುವುದು.
7. ಸೋಂಕಿತ ವ್ಯಕ್ತಿಗಳ ನೇರ ಸಂಪರ್ಕ ಮತ್ತು ಸೋಂಕಿತರು ಬಳಸಿದ ಯಾವುದೇ ವಸ್ತುಗಳನ್ನು ಸಂಸ್ಕರಿಸದೇ ಉಪಯೋಗಿಸದಂತೆ ತಿಳುವಳಿಕೆ ನೀಡುವುದು.
8. ಸಂಶಯಾಸ್ಪದ ಪ್ರದೇಶಗಳ ಹೋಟೆಲ್ ಮತ್ತು ಕ್ಯಾಂಟೀನ್ ಗಳಲ್ಲಿ ಬಿಸಿ ನೀರು ಸರಬರಾಜು ಮಾಡಲು ಹೋಟೆಲ್ ಮಾಲೀಕರಿಗೆ ಕಟ್ಟು ನಿಟ್ಟಿನ ಸೂಚನೆ ನೀಡುವುದು.
9. ತೆರೆದ ಬಾವಿ ಮತ್ತು ಕೆರೆ ಕುಂಟೆಗಳ ನೀರನ್ನು ಗೃಹೋಪಯೋಗಿ ಕಾರ್ಯಗಳಿಗೆ ಉಪಯೋಗಿಸುವಾಗ ಕಡ್ಡಾಯವಾಗಿ ಕ್ಲೋರಿನೇಷನ್ ಮಾಡಿಯೇ ಉಪಯೋಗಿಸಲು ತಿಳುವಳಿಕೆ ನೀಡುವುದು
10. ಜಿಲ್ಲೆಯಲ್ಲಿ ಸಂಶಯಾಸ್ಪದ ಪ್ರಕರಣಗಳು ಕಂಡು ಬಂದಲ್ಲಿ ಸಹ ನಿರ್ದೇಶಕರು ಸಾಂಕ್ರಾಮಿಕ ರೋಗಗಳ ವಿಭಾಗ ಆಕುಕ ಸೇವೆಗಳ ನಿರ್ದೇಶನಾಲಯ ಇವರ ಗಮನಕ್ಕೆ ತರುವುದು.
ಈ ರೀತಿಯಾಗಿ ತೀವ್ರ ನಿಗಾವಣೆ ಮತ್ತು ಮುಂಜಾಗ್ರತಾ ಕ್ರಮಗಳಿಂದ ನೋಡೊ ವೈರಸ್ ರಾಜ್ಯದಲ್ಲಿ ಹರಡಂತೆ ನೋಡಿಕೊಳ್ಳಲು ಸೂಚಿಸಲಾಗಿದೆ.