Recent Posts

Monday, January 20, 2025
ಕ್ರೈಮ್ದಕ್ಷಿಣ ಕನ್ನಡಸುದ್ದಿ

Big News : ಮಂಗಳೂರಿನಲ್ಲಿ ಎಂಟು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ, ಕೊಲೆ ಪ್ರಕರಣ : ಪೂರ್ವ ಯೋಜನೆಯಂತೆ ಆರೋಪಿಗಳಿಂದ ಪೈಶಾಚಿಕ ಕೃತ್ಯ ನಡೆದ ನಾಲ್ವರು ಆರೋಪಿಗಳು ಅರೆಸ್ಟ್..! – ಕಹಳೆ ನ್ಯೂಸ್

ದಕ್ಷಿಣ ಕನ್ನಡ : ಉಳಾಯಿಬೆಟ್ಟು ಪರಾರಿಯ ರಾಜ್‌ ಟೈಲ್ಸ್‌‌‌‌ ಹೆಂಚಿನ ಕಾರ್ಖಾನೆಯಲ್ಲಿ ಕೆಲಸ ಮಾಡುವ ಕಾರ್ಮಿಕ ಕುಟುಂಬಕ್ಕೆ ಸೇರಿದ 8 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆಗೈದು ಚರಂಡಿಗೆಸೆದಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಉತ್ತರ ಪ್ರದೇಶದ ಮೂಲದ ನಾಲ್ವರು ಆರೋಪಿಗಳನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ.

ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಪತ್ರಿಕಾಗೋಷ್ಟಿ ನಡೆಸಿ ಮಾಹಿತಿ ನೀಡಿದ್ದು , ” ಬಾಲಕಿಯ ಮೇಲೆ ಗ್ಯಾಂಗ್ ರೇಪ್ ನಡೆಸಿ ಹತ್ಯೆ ನಡೆಸಿದ ಆರೋಪಿಗಳಾದ ಮಧ್ಯಪ್ರದೇಶದ ಪನ್ನಾ ಜಿಲ್ಲೆಯ ಜಾಯ್ಬನ್ ಸಿಂಗ್ ( 21 ) ಮಧ್ಯಪ್ರದೇಶದ ಪನ್ನಾ ಜಿಲ್ಲೆಯ ಮುಖೇಶ್ ಸಿಂಗ್ (20 ) ಜಾರ್ಖಂಡ್ ನ ರಾಂಚಿಯ ಮನೀಶ್ ತಿರ್ಕಿ (33 ) ಮಧ್ಯಪ್ರದೇಶದ ಪನ್ನಾ ಜಿಲ್ಲೆಯ ಮುನೀಂ ಸಿಂಗ್ ( 20) ಬಂಧಿಸಲಾಗಿದೆ”.

ಜಾಹೀರಾತು
ಜಾಹೀರಾತು
ಜಾಹೀರಾತು

“ಬಾಲಕಿಗೆ ಈ ಹಿಂದೆಯೂ ಆರೋಪಿಗಳು ಸಿಹಿ ತಿಂಡಿ ನೀಡುವ ನೆಪದಲ್ಲಿ ಲೈಂಗಿಕ ಕಿರುಕುಳ ನೀಡಿದ್ದು, ಕೃತ್ಯ ನಡೆದ ನಾಲ್ಕೈದು ದಿನಗಳ ಹಿಂದೆ ಆರೋಪಿಗಳು ಒಂದೆಡೆ ಸೇರಿ ಬಾಲಕಿಯ ಮೇಲೆ ದುಷ್ಕೃತ್ಯ ಎಸಗುವ ಬಗ್ಗೆ ಸಂಚು ರೂಪಿಸಿ ಕೃತ್ಯವೆಸಗಿದ್ದು ತನಿಖೆಯಿಂದ ತಿಳಿದುಬಂದಿದ್ದು ಆರೋಪಿಗಳು ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾರೆ” ಎಂದು   ಮಾಹಿತಿ ನೀಡಿದ್ದಾರೆ .

ಜಾಹೀರಾತು
ಜಾಹೀರಾತು
ಜಾಹೀರಾತು

ಘಟನೆಯ ವಿವರ:
ಉಳಾಯಿಬೆಟ್ಟು ಪರಾರಿಯ ರಾಜ್‌ ಟೈಲ್ಸ್‌‌‌‌ ಹೆಂಚಿನ ಕಾರ್ಖಾನೆಯಲ್ಲಿ ಸುಮಾರು 2 ವರ್ಷಗಳಿಂದ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಜಾರ್ಖಂಡ್ ಮೂಲದ ದಂಪತಿಗಳಿಗೆ ನಾಲ್ವರು ಮಕ್ಕಳಿದ್ದು ಈ ಪೈಕಿ ಹಿರಿಯ ಮಗಳಾದ 8ರ ಹರೆಯದ ಬಾಲಕಿ ನ.21 ರ ಭಾನುವಾರ ಮಧ್ಯಾಹ್ನ ಊಟವಾದ ಬಳಿಕ ಆಟವಾಡಲೆಂದು ತೆರಳಿ ನಾಪತ್ತೆಯಾಗಿರುತ್ತಾಳೆ. ಸ್ಥಳೀಯರು, ಹೆತ್ತವರು ಹುಡುಕಾಡಿದಾಗ ಸಂಜೆ 6 ಗಂಟೆ ವೇಳೆಗೆ ಪ್ಯಾಕ್ಟರಿ ಒಳಗಡೆ ಇರುವ ತೋಡಿನಲ್ಲಿ ಶವವಾಗಿ ಪತ್ತೆಯಾಗಿದ್ದಳು. ಈ ಘಟನೆಯನ್ನು ಸೂಕ್ಷ್ಮ ಪ್ರಕರಣವೆಂದು ಪರಿಗಣಿಸಿದ ಪೊಲೀಸ್ ಇಲಾಖೆ ಆರೋಪಿಗಳ ಪತ್ತೆಗೆ ತನಿಖಾ ತಂಡ ನೇಮಿಸಿತ್ತು.

ಪೂರ್ವ ಯೋಜನೆಯಂತೆ ಆರೋಪಿಗಳಿಂದ ಪೈಶಾಚಿಕ ಕೃತ್ಯ:

ಆರೋಪಿಗಳಲ್ಲಿ ಮೂವರು ಕಾರ್ಖಾನೆಯ ಕಾರ್ಮಿಕರಾಗಿದ್ದು, ಕೃತ್ಯದಲ್ಲಿ ಭಾಗಿಯಾದ ನಾಲ್ಕನೇ ಆರೋಪಿಯು ಮುನೀಂ ಸಿಂಗ್ ಪುತ್ತೂರಿನಲ್ಲಿ ಕೂಲಿ ಕಾರ್ಮಿಕನಾಗಿದ್ದ. ಆರೋಪಿಗಳ ಪೈಕಿ ಜಾಯ್ಬನ್ ಸಿಂಗ್ ಹಾಗೂ ಮನೀಶ್ ತಿರ್ಕಿ ಈ ಹಿಂದೆಯೂ ಆಟವಾಡಲು ಬರುತ್ತಿದ್ದ ಬಾಲಕಿಗೆ ಚಾಕಲೇಟ್ , ಚಿಕ್ಕಿ ನೀಡಿ ಲೈಂಗಿಕ ಕಿರುಕುಳ ನೀಡುತ್ತಿದ್ದು, ಕೃತ್ಯ ನಡೆದ ನಾಲ್ಕೈದು ದಿನಗಳ ಹಿಂದೆ ಕಾರ್ಖಾನೆಯಲ್ಲಿ ಕಾರ್ಮಿಕರು ಉಳಿದುಕೊಂಡ ಕೋಣೆಯಲ್ಲಿ “ಬಾಲಕಿಯ ಮೇಲೆ ಭಾನುವಾರದಂದು ಲೈಂಗಿಕ ದೌರ್ಜನ್ಯ”ವೆಸಗುವ ಬಗ್ಗೆ ಸಂಚು ರೂಪಿಸಿದ್ದರು. ಶನಿವಾರ ಪುತ್ತೂರಿನಿಂದ ಮುನೀಂ ಸಿಂಗ್ ಕೂಡಾ ಆರೋಪಿಗಳಿದ್ದ ರೂಂಗೆ ಬಂದಿದ್ದು, ಈತನು ಆರೋಪಿಗಳೊಂದಿಗೆ ಅಪರಾಧದಲ್ಲಿ ಕೈ ಜೋಡಿಸಿದ್ದಾನೆ.

ನಾಪತ್ತೆಯಾದ ದಿನ ಬಾಲಕಿ ತನ್ನ ತಂಗಿ -ತಮ್ಮನೊಂದಿಗೆ ಕಾರ್ಖಾನೆಯ ಅವರಣದಲ್ಲಿದ್ದ ನೀರಿನ ಟ್ಯಾಂಕ್ ಬಳಿ ಆಟವಾಡುತ್ತಿದ್ದಾಗ, ಬಾಲಕಿಯನ್ನು ಆರೋಪಿಗಳು ಉಳಿದುಕೊಂಡಿದ್ದ ಕೋಣೆಗೆ ಎಳೆದೊಯ್ದಿದ್ದು ಒಬ್ಬೊಬ್ಬರಾಗಿಯೇ ಅತ್ಯಾಚಾವೆಸಗಿದ್ದಾರೆ, ಈ ವೇಳೆ ಬಾಲಕಿ ನೋವಿನಿಂದ ಕಿರುಚಾಡುತ್ತಿದ್ದಾ ಜಾಯ್ಬನ್ ಸಿಂಗ್ ಕತ್ತು ಹಿಸುಕಿ ಬಾಲಕಿಯ ಕೊಲೆಗೈದಿದ್ದಾನೆ. ದುಷ್ಕೃತ್ಯ ಎಸಗುವ ವೇಳೆ ಕೋಣೆಯತ್ತ ಯಾರು ಸುಳಿಯದಂತೆ ಆರೋಪಿಗಳು ಹೊರಗೆ ಕಾವಲು ಕಾಯುತ್ತಿರುತ್ತಾರೆ. ಬಳಿಕ ಕೊಲೆಗೈದ ಮೃತ ಬಾಲಕಿಯನ್ನು ಬಳಿಕ ಚರಂಡಿಗೆ ಎಸೆದಿದ್ದು, ಸಿಸಿ ಟಿವಿ ಇಲ್ಲದಿರುವುದರಿಂದ ಯಾರಿಗೂ ಅನುಮಾನ ಬಾರದಂತೆ ವರ್ತಿಸೋಣ ಎಂದು ಕೊನೆಗೆ ನಾಪತ್ತೆಯಾದ ಬಾಲಕಿ ಪತ್ತೆಗಾಗಿ ಹುಡುಕಾಡುವ ನಾಟಕವಾಡಿದ್ದಾರೆ.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ತನಿಖಾ ತಂಡ , ಸಿಸಿಟಿವಿ ಪೋಟೇಜ್, ಸಿಡಿಆರ್ ವಿಶ್ಲೇಷಣೆ , ಸಾಕ್ಷಿಗಳ ಹೇಳಿಕೆ ಆಧಾರಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.