Tuesday, January 21, 2025
ಸುದ್ದಿ

ಶ್ರೀ ಮಹಮ್ಮಾಯೀ ದೇವಸ್ಥಾನ ಮೂರುಕಾವೇರಿ ಕಿನ್ನಿಗೋಳಿ ಇದರ ವಾರ್ಷಿಕ ಮಾರಿಪೂಜೆಯ ಪ್ರಯುಕ್ತ ಶ್ರೀ ವನದುರ್ಗಾ ಪ್ರಸಾದಿಯ ದಶಾವತಾರ ಯಕ್ಷಗಾನ ಮಂಡಳಿ ದೇಂತಡ್ಕ ಇವರಿಂದ ಯಕ್ಷಗಾನ ಬಯಲಾಟ- ಕಹಳೆ ನ್ಯೂಸ್

ಕಿನ್ನಿಗೋಳಿ: ಶ್ರೀ ಮಹಮ್ಮಾಯೀ ದೇವಸ್ಥಾನ ಮೂರುಕಾವೇರಿ ಕಿನ್ನಿಗೋಳಿ ಇದರ ವಾರ್ಷಿಕ ಮಾರಿಪೂಜೆಯ ಪ್ರಯುಕ್ತ ಕಿನ್ನಿಗೋಳಿಯ ಶ್ರೀ ಮಹಮ್ಮಾಯೀ ಕಟ್ಟೆಯ ಬಳಿ ಶ್ರೀ ವನದುರ್ಗಾ ಪ್ರಸಾದಿಯ ದಶಾವತಾರ ಯಕ್ಷಗಾನ ಮಂಡಳಿ ದೇಂತಡ್ಕ ಇವರಿಂದ ರುದ್ರ ತಾಂಡವ ಎಂಬ ಯಕ್ಷಗಾನ ಬಯಲಾಟ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಕಲಾವಿದರಾದ ಶ್ರೀ ಮಂಜುನಾಥ ಭಟ್ ಬೆಳ್ಳಾರೆ, ಶ್ರೀ ರಾಘವೇಂದ್ರ ಮಯ್ಯ ಇವರನ್ನು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಮೇಳದ ಯಜಮಾನರಾದ ಶ್ರೀ ಶ್ಯಾಮ್ ಭಟ್,ಕಹಳೆ ಸುದ್ದಿ ಮಾಧ್ಯಮದ ಶ್ರೀ ಶ್ಯಾಮ್ ಸುದರ್ಶನ್, ಶ್ರೀ ಭುವನಾಭಿರಾಮ ಉಡುಪ, ರೋಟರಿ ಕ್ಲಬ್ ನ ಶ್ರೀ ಸ್ವರಾಜ್ ಶೆಟ್ಟಿ, ಸುಮಿತ್ ಕುಮಾರ್, ಗಣೇಶ್ ಕಾಮತ್,ಕೆ.ಬಿ ಸುರೇಶ್,ಶಂಕರ್ ಕೋಟ್ಯಾನ್, ಸುರೇಶ್ ಪದ್ಮನೂರು,ಶರತ್ ಶೆಟ್ಟಿ, ರಘುನಾಥ ಕಾಮತ್ ಕೆಂಚನಕೆರೆ, ಉಪಸ್ಥಿತರಿದ್ದರು. ರಘುನಾಥ ಕಾಮತ್ ಸನ್ಮಾನಿತರ ಸನ್ಮಾನ ಪತ್ರ ವಾಚಿಸಿದರು, ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ ವಂದಿಸಿದರು.