Recent Posts

Tuesday, January 21, 2025
ದಕ್ಷಿಣ ಕನ್ನಡಬೆಂಗಳೂರುರಾಜ್ಯಸಿನಿಮಾಸುದ್ದಿ

ರೂಪೇಶ್ ಶೆಟ್ಟಿ ಅಭಿನಯದ ಗೋವಿಂದ, ಗೋವಿಂದ ತುಳು ಮತ್ತು ಕನ್ನಡ ಸಿನಿಮಾ ನ.26ರಂದು ಬಿಡುಗಡೆ – ಕಹಳೆ ನ್ಯೂಸ್

ಬೆಂಗಳೂರು, ನ.25 : ತುಳು ಮತ್ತು ಕನ್ನಡ ಸಿನಿಮಾದ ನಟ ರೂಪೇಶ್ ಶೆಟ್ಟಿ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಗೋವಿಂದ, ಗೋವಿಂದ ನವೆಂಬರ್ 26ರಂದು ರಾಜ್ಯದಾದ್ಯಂತ ಬಿಡುಗಡೆಗೊಳ್ಳಲಿದೆ.

ನ.26ರಂದು ರಾಜ್ಯದಾದ್ಯಂತ 150ಕ್ಕೂ ಹೆಚ್ಚು ಚಿತ್ರ ಮಂದಿರಗಳಲ್ಲಿ ಗೋವಿಂದ, ಗೋವಿಂದ ಸಿನಿಮಾ ಬಿಡುಗಡೆಯಾಗಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಶೈಲೇಂದ್ರ ಪ್ರೊಡಕ್ಷನ್, ಎಲ್‌.ಜಿ. ಕ್ರಿಯೇಷನ್ಸ್ ಹಾಗೂ ರವಿ ಗರಣಿ ಪ್ರೊಡಕ್ಷನ್ ಮೂಲಕ ಶೈಲೇಂದ್ರಬಾಬು, ಕಿಶೋರ್ ಎಂ.ಕೆ., ಮಧುಗಿರಿ ಹಾಗೂ ರವಿ ಆರ್.ಗರಣಿ ಈ ಚಿತ್ರವನ್ನು ನಿರ್ಮಿಸಿದ್ದು, ಕಾಮಿಡಿ, ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ನಾಯಕಿಯಾಗಿ ಕವಿತಾ ಗೌಡ ಹಾಗೂ ಭಾವನಾ ಮೆನನ್ ನಟಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಈ ಸಿನಿಮಾದ ಮುಖ್ಯ ಭೂಮಿಕೆಯಲ್ಲಿ ವಿಜಯ್‌ ಚೆಂಡೂರು ಹಾಗೂ ಪವನ್‌ಕುಮಾರ್, ರೂಪೇಶ್ ಶೆಟ್ಟಿ ನಟಿಸಿದ್ದು, ದೇವ್‌ ರಂಗಭೂಮಿ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದು, ಕೆ.ಎಸ್. ಚಂದ್ರಶೇಖರ್ ಅವರ ಛಾಯಾಗ್ರಹಣವಿದೆ.

ಈ ಸಿನಿಮಾದಲ್ಲಿ 6 ಹಾಡುಗಳ ಜೊತೆಗೆ ಎರಡು ಬಿಟ್‌ ಸಾಂಗ್‌ಗಳು ಕೂಡ ಇದ್ದು ಸಿನಿಮಾ ಬಿಡಿಗಡೆಗೆ ಅಭಿಮಾನಿಗಳು ಕಾಯುತ್ತಿದ್ದಾರೆ.