Monday, January 20, 2025
ಬಂಟ್ವಾಳ

ಕಲ್ಲಡ್ಕ ವಲಯದ ಸ್ವಸಾಯ ಸಂಘಗಳ ಗೋಳ್ತಮಜಲು-ಸಿ ಒಕ್ಕೂಟದ ನೂತನ ಅಧ್ಯಕ್ಷರಾಗಿ ಮಮತಾ ಎಸ್ ಶೆಟ್ಟಿ ಆಯ್ಕೆ- ಕಹಳೆ ನ್ಯೂಸ್

ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ವಿಟ್ಲ ಇದರ ಕಲ್ಲಡ್ಕ ವಲಯದ ಸ್ವಸಾಯ ಸಂಘಗಳ ಗೋಳ್ತಮಜಲು- ಸಿ ಒಕ್ಕೂಟದ ಮುಂದಿನ ಮೂರು ವರ್ಷದ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆಯು ಕಲ್ಲಡ್ಕ ವಲಯದ ಮಾಜಿ ಅಧ್ಯಕ್ಷರಾದ ಶ್ರೀಯುತ ಶೇಖರ್ ಪೂಜಾರಿ, ಮೇಲ್ವಿಚಾರಕರಾದ ಶ್ರೀಮತಿ ಸುಗುಣಾ ಶೆಟ್ಟಿ , ಮತ್ತು ಸೇವಾ ಪ್ರತಿನಿಧಿ ಶ್ರೀಮತಿ ಗಿರಿಜಾ ಇವರ ಉಪಸ್ಥಿತಿಯಲ್ಲಿ ರಾಜೀವ್ ಯುವಕ ಮಂಡಲ ಬಾಯಿಲ ವೀರಕಂಬದಲ್ಲಿ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಗೋಳ್ತಮಜಲು-ಸಿ ಒಕ್ಕೂಟದ ನೂತನ ಅಧ್ಯಕ್ಷರಾಗಿ ಶ್ರೀಮತಿ ಮಮತಾ ಎಸ್ ಶೆಟ್ಟಿ ಶಂಭುಗ ,ಉಪಾಧ್ಯಕ್ಷರಾಗಿ ನಾಗಪ್ಪ ಪೂಜಾರಿ ಬದನ ಗದ್ದೆ, ಕಾರ್ಯದರ್ಶಿಯಾಗಿ ಮೋಹಿನಿ ಪಲ್ಲತಿಲ, ಜೊತೆ ಕಾರ್ಯದರ್ಶಿಯಾಗಿ ಗಣೇಶ್ ನಾಯ್ಕ ನಲ್ಲಿ ,ಕೋಶಾಧಿಕಾರಿಯಾಗಿ ಸುಧಾಕರ ಶೆಟ್ಟಿ ಶಂಭುಗ ಉಪಸಮಿತಿಯ ಸದಸ್ಯರಾಗಿ ಸುಮಿತ್ರ, ಜಯಂತಿ, ಚಂದ್ರಾವತಿ, ಸುಮಿತ್ರ ಸಿ ,ಜಯಂತ, ಹಾಗೂ ದಾಖಲಾತಿ ಸಮಿತಿಯ ಸದಸ್ಯರಾಗಿ ವೀಣಾ, ಲಕ್ಷ್ಮಿ ಕೆ ,ಲೋಕೇಶ್, ಅಭಿಷೇಕ್, ವೀಣಾ ಶಂಭುಗ ಆಯ್ಕೆಯಾದರು. ಈ ಸಂದರ್ಭದಲ್ಲಿ ಗೋಳ್ತಮಜಲು-ಸಿ ಒಕ್ಕೂಟದ 32 ಸ್ವಸಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು