Sunday, January 19, 2025
ಹಾಸನ

‘ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ, ನನ್ನನ್ನು ಕ್ಷಮಿಸಿ’ ಎಂದು ತಾಯಿ ಮೊಬೈಲ್‍ಗೆ ಮೆಸೇಜ್ ಕಳುಹಿಸಿ ಅಪ್ರಾಪ್ತ ಬಾಲಕಿ ಆತ್ಮಹತ್ಯೆ- ಕಹಳೆ ನ್ಯೂಸ್

ಹಾಸನ: ಬಾಲಕಿಯೊಬ್ಬಳು ತನ್ನ ತಾಯಿ ಮೊಬೈಲ್‍ಗೆ ಮೆಸೇಜ್ ಕಳುಹಿಸಿ, ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾಸನ ಹೊರವಲಯದಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹಾಸನದ ಖಾಸಗಿ ಶಾಲೆಯಲ್ಲಿ ಒಂಬತ್ತನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿ ಪೂರ್ವಿಕಾ (15) ಸತ್ಯಮಂಗಲ ಬಡಾವಣೆಯ ಪ್ರಸಾದ್ ಮತ್ತು ಸುಬ್ಬಲಕ್ಷ್ಮಿ ಎಂಬುವವರ ಪುತ್ರಿ ಪೂರ್ವಿಕಾ. ತಾಯಿ ಮೊಬೈಲ್‍ಗೆ ‘ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ, ನನ್ನನ್ನು ಕ್ಷಮಿಸಿ’ ಎಂದು ಮೆಸೇಜ್ ಕಳುಹಿಸಿ, ಬೆಳಗಿನ ಜಾವ ಮನೆಯಿಂದ ಹೊರ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಗ್ನಿಶಾಮಕ ದಳದಿಂದ ಬಾಲಕಿ ಶವಕ್ಕಾಗಿ ಶೋಧಕಾರ್ಯ ನಡೆದಿದ್ದು, ಸ್ಥಳಕ್ಕೆ ಪೆÇಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಹಾಸನ ಬಡಾವಣೆ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.