Recent Posts

Sunday, January 19, 2025
ಕ್ರೀಡೆಸುದ್ದಿ

ಪಾಂಚಜನ್ಯ ಗೆಳೆಯರ ಬಳಗ ವಿಷ್ಣುನಗರ ಪಂಜಾಳ ಬಂದಾರು ಆಶ್ರಯದಲ್ಲಿ ನವೆಂಬರ್ 28ರಂದು ವಲಯ ಮಟ್ಟದ ವಾಲಿಬಾಲ್ ಪಂದ್ಯಾಟ – ಪಂದ್ಯಾಟದಲ್ಲಿ ಭಾಗವಹಿಸು ತಂಡಗಳಿಗೆ ವಿಶೇಷ ಸೂಚನೆ..?- ಕಹಳೆ ನ್ಯೂಸ್

ಬಂದಾರು: ಪಾಂಚಜನ್ಯ ಗೆಳೆಯರ ಬಳಗ ವಿಷ್ಣುನಗರ ಪಂಜಾಳ ಬಂದಾರು ಇದರ ಆಶ್ರಯದಲ್ಲಿ 5ನೇ ವರ್ಷದ ದೀಪಾವಳಿ ಪ್ರಯುಕ್ತ ವಲಯ ಮಟ್ಟದ ವಾಲಿಬಾಲ್ ಪಂದ್ಯಾಟ ಇದೇ ನವೆಂಬರ್ 28ರಂದು ಬೆಳ್ಳಗ್ಗೆ 9 ಗಂಟೆಗೆ ಕೊಳ್ಳಕೋಡಿ ಮೈದಾನದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನ ಬಂದಾರು ಗ್ರಾಮ ಪಂಚಾಯತ್‍ನ ಅಧ್ಯಕ್ಷರಾದ ಕೆ. ಪರಮೇಶ್ವರಿ ಜನಾರ್ದನ ಗೌಡ ಪುಯಿಲ ಉದ್ಗಾಟಿಸಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು

ವಾಲಿಬಾಲ್ ಪಂದ್ಯಾಟದ ಪ್ರಥಮ ವಿಜೇತರಿಗೆ 3333 ಮತ್ತು ಟ್ರೋಫಿ, ದ್ವಿತೀಯ ವಿಜೇತರಿಗೆ 2222 ಮತ್ತು ಟ್ರೋಫಿ ನೀಡಲಾಗುವುದು. ಅಲ್ಲದೆ ಉತ್ತಮ ಹೊಡೆತಗಾರ ಮತ್ತು ಉತ್ತಮ ಎತ್ತುಗಾರ ಪ್ರಶಸ್ತಿಯನ್ನ ನೀಡಿ ಗೌರವಿಸಲಾಗುವುದು. ಇನ್ನು ವಾಲಿಬಾಲ್ ಪಂದ್ಯಾಟಕ್ಕೆ 350 ರೂ ನಿಗದಿ ಪಡಿಸಲಾಗಿದೆ. 28ರಂದು ಬೆಳ್ಳಗ್ಗೆ 9 ಗಂಟೆಗೆ ಪಂದ್ಯಾಟದಲ್ಲಿ ಭಾಗವಹಿಸುವ ತಂಡವು ಹೆಸರು ನೊಂದಾಯಿಸಬೇಕು. ಜೊತೆಗೆ ಆಧಾರ್ ಕಾರ್ಡ್ ಕಡ್ಡಾಯವಾಗಿ ತರುವಂತೆ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ 9740797589 , 9611389575 ನಂಬರ್‍ನ್ನ ಸಂಪರ್ಕಿಸಬಹುದಾಗಿದೆ.