Recent Posts

Monday, January 20, 2025
ಸುದ್ದಿ

ಉಳಾಯಿಬೆಟ್ಟುವಿನಲ್ಲಿ 8 ವರ್ಷದ ಬಾಲಕಿ ಅತ್ಯಾಚಾರ ಹಿನ್ನಲೆ : ಪೋಷಕರಿಗೆ ಸಾಂತ್ವನ ಹೇಳಿದ ಶಾಸಕ ವೇದವ್ಯಾಸ್ ಕಾಮತ್- ಕಹಳೆ ನ್ಯೂಸ್

ಮಂಗಳೂರು: ಉಳಾಯಿಬೆಟ್ಟುವಿನಲ್ಲಿ 8 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಹತ್ಯೆ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ವೇದವ್ಯಾಸ್ ಕಾಮತ್ ಅವರ ಮನೆಗೆ ತೆರಳಿ ಪೋಷಕರಿಗೆ ಸಾಂತ್ವನ ಹೇಳಿದರು.


ಈ ವೇಳೆ ಮಾತನಾಡಿದ ಶಾಸಕ ಕಾಮತ್, ಪುಟ್ಟ ಮಗುವಿನ ಮೇಲೆ ಪೈಶಾಚಿಕ ಕೃತ್ಯ ಎಸಗಿರುವವರಿಗೆ ಕಾನೂನಿನಡೆ ಘೋರ ಶಿಕ್ಷೆ ವಿಧಿಸಬೇಕು. ಮುಂದೆ ಎಂದೂ ಇಂತಹ ಘಟನೆ ನಡೆಯದಂತೆ ತಡೆಯಲು ಅಪರಾಧಿಗಳಿಗೆ ದಂಡನೆ ನೀಡಬೇಕು ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಸುದರ್ಶನ್ ಮೂಡಬಿದಿರೆ, ಸ್ಥಳೀಯ ಕಾರ್ಪೋರೇಟರ್ ಹೇಮಲತ ರಘು ಸಾಲ್ಯಾನ್, ಪೂರ್ಣಿಮಾ, ಕಾವ್ಯಾ ನಟರಾಜ್, ಬಿಜೆಪಿ ಮುಖಂಡರಾದ ಜಗದೀಶ್ ಶೇಣವ, ರಘು ಸಾಲ್ಯಾನ್, ನವೀನ್ ಶೆಣೈ, ವಸಂತ್ ಜೆ ಪೂಜಾರಿ, ವಿಜಯ್ ಭಂಡಾರಿ ಮತ್ತು ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು