Monday, January 20, 2025
ಸುದ್ದಿ

ಬೆಟ್ಟಂಪಾಡಿ ಪದವಿ ಕಾಲೇಜಿನಲ್ಲಿ NSS ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ – ಕಹಳೆ ನ್ಯೂಸ್

ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ ಇಲ್ಲಿನ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ವಾರ್ಷಿಕ ಕಾರ್ಯ ಚಟುವಟಿಕೆಗಳಿಗೆ ಚಾಲನೆ ನೀಡಲಾಯಿತು. ಕಾಲೇಜು ಅಭಿವೃದ್ಧಿ ಸಮಿತಿಯ ಹಿರಿಯ ಸದಸ್ಯರಾದ ಶ್ರೀ ರಂಗನಾಥ ರೈ ಗುತ್ತು ಇವರು ಘಟಕ ನಾಯಕರುಗಳಿಗೆ ಸಸಿ ಹಸ್ತಾಂತರಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಗ್ರಾಮೀಣ ಅಭಿವೃದ್ಧಿಯಲ್ಲಿ NSS ನ ಪಾತ್ರ ಬಹಳ ಮಹತ್ತರವಾದದ್ದು, ಸ್ವಯಂ ಸೇವಕರ ಸಕ್ರಿಯ ತೊಡಗಿಸಿಕೊಳ್ಳುವಿಕೆಯು ಯಶಸ್ವಿ ಕಾರ್ಯಕ್ರಮಗಳನ್ನು ಆಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು.

ಮುಖ್ಯ ಅತಿಥಿಗಳ ನೆಲೆಯಲ್ಲಿ ಪುತ್ತೂರಿನ ನ್ಯಾಯವಾದಿಗಳಾದ ಶ್ರೀ ಚಿದಾನಂದ ಬೈಲಾಡಿ ಇವರು ಮಾತನಾಡಿ NSS ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕ ಅವಕಾಶಗಳನ್ನು ಕಲ್ಪಿಸುತ್ತದೆ, ಪ್ರಾಮಾಣಿಕ ಪಾಲ್ಗೊಳ್ಳುವಿಕೆ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿ ಎಂದು ಹೇಳಿದರಲ್ಲದೇ ಎನ್ನೆಸ್ಸೆಸ್‍ನಲ್ಲಿ ತಮ್ಮ ಅನುಭವ ಮತ್ತು ಕಲಿಕೆಯನ್ನು ಹಂಚಿಕೊಂಡರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ವರದರಾಜ ಚಂದ್ರಗಿರಿ ಇವರು ಲಾಕ್‍ಡೌನ್ ಅವಧಿಯಲ್ಲಿ ಸ್ವಯಂಸೇವಕರ ಭಾಗವಹಿಸುವಿಕೆಯನ್ನು ಸ್ಮರಿಸಿದರಲ್ಲದೇ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ NSS ಘಟಕಗಳು ಯಶಸನ್ನು ಗಳಿಸಲಿ ಎಂದು ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ಯೋಜನಾಧಿಕಾರಿಗಳಾದ ಶ್ರೀ ಹರಿಪ್ರಸಾದ್ ಎಸ್ ಮತ್ತು ಶ್ರೀ ಶಶಿಕುಮಾರ ಟಿ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ಶ್ರೀ ದಾಮೋದರ ಕಣಜಾಲು, ಗ್ರಂಥಪಾಲಕರಾದ ಶ್ರೀ ರಾಮ ಕೆ, ನಿರ್ವಹಣಾ ಶಾಸ್ತ್ರ ವಿಭಾಗ ಮುಖ್ಯಸ್ಥರಾದ ಶ್ರೀ ದೀಕ್ಷಿತ್ ಕುಮಾರ್, ಉಪನ್ಯಾಸಕ ವೃಂದದವರು ಮತ್ತು NSS ಸ್ವಯಂ ಸೇವಕರು ಉಪಸ್ಥಿತರಿದ್ದರು.

ಸ್ವಯಂ ಸೇವಕರಾದ ಕೃತಿ ರೈ ಕೆ, ಲಿಖಿತಾ ಕೆ, ಶೈಲಜಾ ಎನ್, ಕವಿತಾ, ಜಯಶ್ರೀ ಪ್ರಾರ್ಥನೆ ಹಾಡಿದರು, ಘಟಕ ನಾಯಕರಾದ ಸಾರ್ಥಕ್ ಟಿ ಸ್ವಾಗತಿಸಿದರು, ಶೋಭಿತ್ ಕುಮಾರ್ ಕೆ ವಂದಿಸಿದರು, ಸ್ವಯಂ ಸೇವಕಿ ಶೃತಿ ಸಿ ಕಾರ್ಯಕ್ರಮವನ್ನು ನಿರೂಪಿಸಿದರು.