Tuesday, January 21, 2025
ಪುತ್ತೂರು

ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ವತಿಯಿಂದ ಬೆಳ್ಳಾರೆ ಘಟ ಸಮಿತಿ ಸಭೆ ಮತ್ತು ಸನ್ಮಾನ ಕಾರ್ಯಕ್ರಮ – ಕಹಳೆ ನ್ಯೂಸ್

ಬೆಳ್ಳಾರೆ: ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ವತಿಯಿಂದ ವಿಕಾಸ ವಾಹಿನಿ ಸ್ವಸಹಾಯ ಸಂಘಗಳ ಬೆಳ್ಳಾರೆ ಘಟ ಸಮಿತಿ ಸಭೆಯು ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ನಡೆಯಿತು.

ಪುತ್ತೂರು ಮತ್ತು ಸುಳ್ಯ ತಾಲೂಕಿನ ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಮೇಲ್ವೀಚಾರಕಿಯಾದ ಶ್ರೀಮತಿ ಗೀತಾ ಸಂಕಪ್ಪ ನೆಟ್ಟಾರು ಇವರನ್ನು ಹಿರಿಯರಾದ ಇಂದಿರಾ ಮತ್ತು ಜಯಂತಿಯವರು ಸನ್ಮಾನಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ವೀರನಾಥ್ ಕಲ್ಲೋಣಿ,ಉಪಾಧ್ಯಕ್ಷರಾದ ಶಶಿಕಲಾ.ಸಿ, ಕಾರ್ಯದರ್ಶಿ ಸಾವಿತ್ರಿ ತಡಗಾಜೆ, ಸಂಘಟನಾ ಕಾರ್ಯದರ್ಶಿ ವಿಜೇಶ್.ಚಾವಡಿ ಬಾಗಿಲು, ಸೇವಾಧೀಕ್ಷಿತೆ ಶ್ರೀಮತಿ ಆಶಾ ಮೊಗಪ್ಪೆ, ಪ್ರತೀಕ್ ಕುಲಾಲ್ ಹಾಗೂ ಸಂಘದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಹರಿಣಾಕ್ಷಿ ಸ್ವಾಗತಿಸಿ, ಲೋಲಾಕ್ಷಿ ನೆಟ್ಟಾರು ಧನ್ಯವಾದ ಗೈದರು. ಶಾಂತಿ ಮಂತ್ರದೊಂದಿಗೆ ಸಭೆಯನ್ನು ಮುಕ್ತಾಯಗೊಳ್ಳಿಸಲಾಯಿತು.