Recent Posts

Sunday, January 19, 2025
ಪುತ್ತೂರು

ವಿವೇಕಾನಂದ ಕಾಲೇಜಿನಲ್ಲಿ ಎನ್‍ಸಿಸಿ ಘಟಕದ ವತಿಯಿಂದ ವಿಶೇಷ ಕಾರ್ಯಕ್ರಮ- ಕಹಳೆ ನ್ಯೂಸ್

ಪುತ್ತೂರು : ಜೀವನದಲ್ಲಿ ಯಾವುದೇ ಕೆಲಸ ಮಾಡಬೇಕಾದರೆ ಧೈರ್ಯ ಇರಬೇಕು. ಧೈರ್ಯ ಇದ್ದರೆ ಜೀವನದಲ್ಲಿ ಮುಂದೆ ಹೋಗಲು ಸಾಧ್ಯ. ಭಾರತೀಯ ಸೇನೆಗೆ ಸೇರಲು ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಿರಬೇಕು ಎಂದು ವಿವೇಕಾನಂದ ಮಹಾವಿದ್ಯಾಲಯದ ಎನ್.ಸಿ.ಸಿ ಘಟಕದ ಹಿರಿಯ ವಿದ್ಯಾರ್ಥಿ ರಜತ್ ಹೇಳಿದರು. ಕಾಲೇಜಿನ ಎನ್.ಸಿ.ಸಿ. ಘಟಕ ಆಯೋಜಿಸಿದ ವಿಶೇಷ ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಭಾಗವಹಿಸಿ ಭಾರತೀಯ ಸೇನೆಗೆ ಸೇರಲು ನಡೆಸುವಂತಹ ಸಿದ್ಧತೆಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿ ಯಾವ ರೀತಿ ನಡೆಸಬೇಕು ಎಂದು ಸಂದರ್ಶನ ಸಲಹೆಗಳನ್ನು ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸಮಾಜದಲ್ಲಿ ಸೋತು ಗೆದ್ದಂತಹ ಹಲವಾರು ವ್ಯಕ್ತಿಗಳನ್ನು ನೋಡಬಹುದು. ಜೀವನದಲ್ಲಿ ಸೋಲುಗಳು ಪಾಠ ಕಲಿಸುತ್ತದೆ. ಸೋತಂತಹ ವ್ಯಕ್ತಿಗಳಿಂದ ಹಲವಾರು ವಿಷಯಗಳು ಸಿಗಬಹುದು. ವಿದ್ಯಾರ್ಥಿಗಳಲ್ಲಿ ಸೇನೆ ಯಾಕೆ ಬೇಕು, ಅದರಿಂದ ಏನು ಪ್ರಯೋಜನ ಎಂದು ತಿಳಿಸಿ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿ, ಸಲಹೆಗಳನ್ನು ನೀಡಿದರು. ಈ ಸಂದರ್ಭ ಉಪಸ್ಥಿತರಿದ್ದ ವಿವೇಕಾನಂದ ಮಹಾವಿದ್ಯಾಲಯದ ನಿವೃತ್ತ ಕನ್ನಡ ಉಪನ್ಯಾಸಕ ಕ್ಯಾ. ಡಿ. ಮಹೇಶ್ ರೈ ವಿದ್ಯಾರ್ಥಿಗಳಿಗೆ ಸೇನೆ ಹಾಗೂ ದೇಶ ಸೇವೆಯ ಮಹತ್ವವನ್ನು ತಿಳಿಸಿದರು. ಕಾಲೇಜಿನ ಎನ್.ಸಿ.ಸಿ.ಘಟಕದ ಸಂಯೋಜನಾಧಿಕಾರಿ ಲೆ. ಭಾಮಿ ಅತುಲ್ ಶೆಣೈ ಕಾರ್ಯಕ್ರಮ ನಿರ್ವಹಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು