ಡೆಲ್ಟಾಗಿಂತ ‘ಒಮಿಕ್ರಾನ್’ ಡೇಂಜರಸ್..? WHO ನೀಡಿದ 5 ಲೇಟೆಸ್ಟ್ ಮಾಹಿತಿ ಏನು..? – ಕಹಳೆ ನ್ಯೂಸ್
ನವದೆಹಲಿ: ಕಳೆದ ಒಂದು ವಾರದಿಂದ ಇಡೀ ವಿಶ್ವವನ್ನ ಕೊರೊನಾ ರೂಪಾಂತರಿ B.1.1.529 (ಒಮಿಕ್ರಾನ್) ನಿದ್ದೆಗೆಡಿಸಿದೆ. ಇದುವರೆಗೆ ಒಮಿಕ್ರಾನ್ ವೈರಸ್ ಬಗ್ಗೆ ಸರಿಯಾದ ಅಧ್ಯಯನಗಳು ಆಗಿಲ್ಲ. ಇದೀಗ WHO ಒಮಿಕ್ರಾನ್ಗೆ ಸಂಬಂಧಿಸಿದ ಒಂದಿಷ್ಟು ಲೇಟೆಸ್ಟ್ ಮಾಹಿತಿ ಬಿಡುಗಡೆ ಮಾಡಿದೆ.ಜೊತೆಗೆ ಇದು ಅತ್ಯಂತ ಅಪಾಯಕಾರಿ ತಳಿ, ಹೀಗಾಗಿ ಎಲ್ಲ ದೇಶಗಳೂ ಮುಂಜಾಗೃತ ವಹಿಸಿ ಸಿದ್ಧತೆ ಮಾಡಿಕೊಳ್ಳಬೇಕು ಅನ್ನೋ ಎಚ್ಚರಿಕೆ ಸಂದೇಶ ಕೂಡ ರವಾನಿಸಿದೆ.
ಒಮಿಕ್ರಾನ್ ಪತ್ತೆ ಹಚ್ಚಲು PCR ಟೆಸ್ಟ್ ಮುಂದುವರಿಸುವ ಅಗತ್ಯ ಇದೆ. ಈ ಹಿಂದೆ ಕೊರೊನಾ ಪಾಸಿಟಿವ್ ಆದವರಿಗೆ ಹೆಚ್ಚಿನ ಸಂಕಷ್ಟ ಉಂಟಾಗಲಿದೆ. ಬಹುಬೇಗನೆ ಒಮಿಕ್ರಾನ್ ಎಫೆಕ್ಟ್ ಮಾಡುವ ಸಾಧ್ಯತೆ ಇದೆ ಎಂದು ತಿಳಿಸಿದೆ, ಆದರೆ ಖಚಿತಪಡಿಸಿಲ್ಲ.
ಒಮಿಕ್ರಾನ್ ಪತ್ತೆ ಹಚ್ಚಲು PCR ಟೆಸ್ಟ್ ಮುಂದುವರಿಸುವ ಅಗತ್ಯ ಇದೆ
ಬಹುಬೇಗನೆ ಒಮಿಕ್ರಾನ್ ವೈರಸ್ ಲಕ್ಷಣ ಕಂಡುಬರುವ ಸಾಧ್ಯತೆ ಇದೆ
ಈ ಹಿಂದೆ ಕೊರೊನಾ ಪಾಸಿಟಿವ್ ಆದವರಿಗೆ ಹೆಚ್ಚಿನ ಸಂಕಷ್ಟ ಸಾಧ್ಯತೆ
ಒಮಿಕ್ರಾನ್ ಸಾಂಕ್ರಾಮಿಕವಾಗಿ ಹರಡುವ ಬಗ್ಗೆ ಯಾವುದೇ ಖಚಿತತೆ ಇಲ್ಲ
ಬೇರೆ ವೈರಸ್ಗಳ ತರ ಬೇಗನೆ ಹರಡೋ ಮಾಹಿತಿ ಇನ್ನೂ ದೃಢವಾಗಿಲ್ಲ
ವ್ಯಾಕ್ಸಿನ್ ಬಳಕೆಯಿಂದ ಒಮಿಕ್ರಾನ್ ತಡೆಗಟ್ಟಲು ಸಾಧ್ಯವೇ? ಎಂದು ತಜ್ಞರೊಂದಿಗೆ ಚರ್ಚೆ ಮಾಡಲಾಗಿದೆ. ಆದರೆ ಒಮಿಕ್ರಾನ್ ಎಷ್ಟರಮಟ್ಟಿಗೆ ಅಪಾಯಕಾರಿ ಎಂಬ ಮಾಹಿತಿಯಿಲ್ಲ. ರೋಗ ಲಕ್ಷಣ ಬೇರೆ ವೈರಸ್ ತರ ಇದೆಯೇ ಎನ್ನೋ ಮಾಹಿತಿಯಿಲ್ಲ. ಸದ್ಯ ಹಲವರಲ್ಲಿ ಒಮಿಕ್ರಾನ್ ರೋಗಲಕ್ಷಣಗಳು ಪತ್ತೆಯಾಗಿವೆ. ಒಮಿಕ್ರಾನ್ ತೀವ್ರತೆ ಅರ್ಥ ಮಾಡಿಕೊಳ್ಳಲು ಕೆಲ ವಾರಗಳು ಅಗತ್ಯವಿದ್ದು WHO ಸಂಶೋಧನೆ ಮುಂದುವರಿದಿದೆ ಎಂದು ತಿಳಿಸಿದೆ.
ಅಲ್ಲದೇ ಡೆಲ್ಟಾ ಮತ್ತು ಇತರೆ ರೂಪಾಂತರಿ ವೈರಸ್ಗೆ ಹೋಲಿಸಿದರೆ ಒಮಿಕ್ರಾನ್ ಹೆಚ್ಚು ಡೇಂಜರಾ? ಅನ್ನೋದ್ರ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ. ಆದ್ರೆ ಇದೂ ಕೂಡ ಅಪಾಯಕಾರಿ ಆಗಿದೆ ಅಂತಾ ವಿಶ್ವ ಆರೋಗ್ಯ ಸಂಸ್ಥೆ ಸ್ಪಷ್ಟಪಡಿಸಿದೆ.