
ಬಂಟ್ವಾಳ :ವಕೀಲರ ಕಚೇರಿಗೆ ನುಗ್ಗಿ ಕಳವು ಮಾಡಿದ ಘಟನೆ ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಿಸಿರೋಡು ಸಿ.ಟಿ.ಯಲ್ಲಿ ನಡೆದಿದೆ. ಬಿಸಿರೋಡ್ ನ ಶ್ರೀನಿವಾಸ ಕಾಂಪ್ಲೆಕ್ಸ್‍ನ 2ನೇ ಮಹಡಿಯಲ್ಲಿ ಎಂ ಸುದರ್ಶನ್ ಕುಮಾರ್ ಎಂಬವರು ಕಚೇರಿಯನ್ನ ಹೊಂದಿದ್ದು, ಈ ಕಛೇರಿಗೆ ತಡ ರಾತ್ರಿ ಕಳ್ಳರು ನುಗ್ಗಿ ನಗದು ಕಳವು ಮಾಡಿದ್ದಾರೆ ಎಂದು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ವಕೀಲರು 26ರಂದು ಬೆಳಿಗ್ಗೆ 8.45 ಗಂಟೆಗೆ ಕಛೇರಿಗೆ ಬಂದಾಗ ಯಾರೋ ಕಳ್ಳರು ಕಛೇರಿಯ ಒಂದು ಭಾಗದ ಶಟರಿನ ಬೀಗವನ್ನು ತುಂಡರಿಸಿ ನಂತರ ಕಛೇರಿಯಲ್ಲಿ ಇರುವ ಪ್ಯಾಬ್ರಿಕೇಷನ್ ನನ್ನು ತುಂಡರಿಸಿ ಕಛೇರಿಯ ಒಳಗೆ ನುಗ್ಗಿ ಡ್ರವರ್‍ನಲ್ಲಿ ಇದ್ದ ಅಂದಾಜು ರೂ.3000/- ಹಣವನ್ನು ಕದ್ದುಕೊಂಡು ಹೋಗಿರುವುದು ಕಂಡು ಬಂದಿದೆ. ಬಂಟ್ವಾಳ ನಗರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.