ಮಂಗಳೂರು : ನಂತೂರು ಪದವು ಬಳಿ ಬೈಕ್ ಸವಾರನನ್ನು ತಡೆದು ನಿಲ್ಲಿಸಿ ಚಿನ್ನದ ಸರವನ್ನು ಸುಲಿಗೆಗೈದ ಮಂಗಳಮುಖಿಯನ್ನು ಕದ್ರಿ ಠಾಣೆಯ ಪೊಲೀಸರು ಬಂಧಿಸಿದ ಘಟನೆ ಮಂಗಳೂರು ನಗರದಲ್ಲಿ ನಡೆದಿದೆ.
ಪ್ರಸ್ತುತ ಬೆಂಗಳೂರಿನ ನಿವಾಸಿಯಾದ ಮೂಲತಃ ಮೈಸೂರಿನ ಅಗ್ರಹಾರದ ಅಭಿಷೇಕ್ ಯಾನೆ ಗೊಂಬೆ ಯಾನೆ ಅನಾಮಿಕ (27) ಬಂಧಿತ ಆರೋಪಿಯಾಗಿದ್ದಾನೆ.
ಎರಡು ತಿಂಗಳ ಹಿಂದೆ ಗಣೇಶ್ ಶೆಟ್ಟಿ ಎಂಬವರು ತನ್ನ ಬೈಕ್‍ನಲ್ಲಿ ನಂತೂರು ಪದವಿನಿಂದ ಬಿಎಸ್‍ಎನ್‍ಎಲ್ ಎಕ್ಸೇಂಜ್ ಬಳಿಯ ರಸ್ತೆಯಲ್ಲಿ ತೆರಳುತ್ತಿದ್ದಾಗ ಅಡ್ಡ ಬಂದ ಮಂಗಳಮುಖಿ ಗಣೇಶ್ ಶೆಟ್ಟಿಯವರ ಮುಖಕ್ಕೆ ಪೆಪ್ಪರ್ ಸ್ಪ್ರೇ ಮಾಡಿ 24 ಗ್ರಾಂ ತೂಕದ ಚಿನ್ನದ ಸರ ಸುಲಿಗೆ ಮಾಡಿದ್ದ ಕುರಿತು ಮಂಗಳೂರಿನ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂರು ಸರಗಳ್ಳತನ ಪ್ರಕರಣವನ್ನು ಭೇದಿಸಿದ್ದು, ಬಂಧಿಸಲ್ಪಟ್ಟ ಆರೋಪಿಯಿಂದ ಸುಮಾರು 71 ಗ್ರಾಂ ತೂಕದ ಮೂರು ಚಿನ್ನದ ಸರಗಳನ್ನು ವಶಪಡಿಸಿಕೊಂಡಿದ್ದಾರೆ.