
ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ರಾಧಾ ರಮಣ ಧಾರಾವಾಹಿಯ ನಟ ಸ್ಕಂದ ಆಶೋಕ್ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.
ನಟ ಸ್ಕಂದ ಆಶೋಕ್ ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದ ತನ್ನ ಪ್ರೇಯಸಿ ಶಿಖಾ ಪ್ರಸಾದ್ ಜೊತೆ ತಮ್ಮ ಪೂರ್ತಿ ಜೀವನವನ್ನು ಕಳೆಯಲು ಸಿದ್ಧರಾಗಿದ್ದಾರೆ. ಇನ್ನೂ ಇವರ ಮದುವೆ ಆರು ದಿನಗಳ ಕಾಲ ನಡಯಲಿದೆ. ಒಂದೊಂದು ಶಾಸ್ತ್ರದ ಕಾರ್ಯಕ್ರಮಗಳನ್ನು ಒಂದೊಂದು ಸ್ಥಳದಲ್ಲಿ ನಡೆಯಲು ಸಿದ್ಧತೆ ನಡೆದಿದೆ.
ಮೇ 25ರಿಂದ ಮದುವೆ ಕಾರ್ಯಕ್ರಮಗಳು ನಡೆಯಲಿದ್ದು, ಮೇ 20ರಂದು ಬಸವನಗುಡಿಯಲ್ಲಿರುವ ಗಂಜಂ ಕಲ್ಯಾಣ ಮಂಟಪದಲ್ಲಿ ಹಳದಿ ಶಾಸ್ತ್ರ ನಡೆಯಲಿದೆ. ನಂತರ ಮೇ 28ರಂದು ತಾಜ್ ವೆಸ್ಟ್ ಎಂಡ್ ಹೋಟೆಲ್‍ನಲ್ಲಿ ಮೆಹೆಂದಿ ಶಾಸ್ತ್ರ ಆಯೋಜಿಸಲಾಗಿದೆ.
ಮೆಹೆಂದಿ ಕಾರ್ಯಕ್ರಮ ನಡೆದ ನಂತರ ಅದೇ ದಿನ ಸಂಜೆ ಸಂಗೀತಾ ಕಾರ್ಯಕ್ರಮ ಕೂಡ ನಡೆಯಲಿದೆ. ಈ ಸಂಗೀತಾ ಕಾರ್ಯಕ್ರಮಕ್ಕೆ ಹಲವು ಸಿನಿಮಾ ಕಲಾವಿದರು ಹಾಗೂ ಕಿರುತರೆ ನಟ- ನಟಿಯರು ಪಾಲ್ಗೊಳ್ಳಲಿದ್ದಾರೆ.
ಮೇ 29ರಂದು ಬೆಂಗಳೂರಿನ ಶಾಂಗ್ರಿಲಾ ಹೋಟೆಲ್‍ನಲ್ಲಿ ವರಪೂಜೆ ನಡೆಯಲಿದ್ದು, ಅದರ ಜೊತೆ ಬಳೆ ಶಾಸ್ತ್ರ ಜರುಗಲಿದೆ. ಇನ್ನೂ ಈ ವರ ಪೂಜೆ ಸಮಾರಂಭಕ್ಕೆ ಸ್ಕಂದ ಆಶೋಕ್ ಹಾಗೂ ಶಿಖಾ ಪ್ರಸಾದ್ ಮನೆಯ ಹಿರಿಯರು ಭಾಗಿಯಾಗಲಿದ್ದಾರೆ.
ಈ ಎಲ್ಲ ಶಾಸ್ತ್ರ ಮುಗಿದ ನಂತರ ಬೆಂಗಳೂರು ಅರಮನೆ ಮೈದಾನದಲ್ಲಿ ಮೇ 30 ಆರತಕ್ಷತೆ ನಡೆಯಲಿದ್ದು, ನಂತರ ಮೇ 31 ರಂದು ಅಲ್ಲೇ ಅದ್ಧೂರಿಯಾಗಿ ಮದುವೆಯಾಗಲಿದ್ದಾರೆ.