ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮುಂದಿನ 5 ದಿನ ಭಾರಿ ಮಳೆ..! ; ಹವಾಮಾನ ಇಲಾಖೆ ಮುನ್ಸೂಚನೆ – ಕಹಳೆ ನ್ಯೂಸ್
ಬೆಂಗಳೂರು, ಡಿಸೆಂಬರ್ 01: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಡಿಸೆಂಬರ್ 5ರವರೆಗೂ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕಲಬುರಗಿ, ವಿಜಯಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಕೋಲಾರ, ಮಂಡ್ಯ, ಮೈಸೂರು, ಶಿವಮೊಗ್ಗ, ತುಮಕೂರು, ರಾಮನಗರದಲ್ಲಿ ಮಳೆಯಾಗಲಿದೆ.
ಚಿಕ್ಕಬಳ್ಳಾಪುರ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಬಳ್ಳಾರಿ, ಕೊಪ್ಪಳ, ರಾಯಚೂರು, ಬೀದರ್‌ನಲ್ಲಿ ಒಣಹವೆ ಮುಂದುವರೆಯಲಿದೆ.
ಗುಜರಾತ್ನಲ್ಲಿ ಇಂದಿನಿಂದ ಮಳೆ ಪ್ರಾರಂಭವಾಗಲಿದೆ. ಗುಜರಾತ್‌ನ ಉತ್ತರ ಮತ್ತು ದಕ್ಷಿಣ ಕರಾವಳಿ ತೀರದಲ್ಲಿ ನವೆಂಬರ್ ಇಂದಿನಿಂದ ಡಿಸೆಂಬರ್ 2ರವರೆಗೂ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ. ಈ ಅಕಾಲಿಕ ಮಳೆಯಿಂದ ರೈತರ ಬೆಳೆಗಳಿಗೆ ತೊಂದರೆಯಾಗಲಿದೆ ಮತ್ತು ಕಟಾವು ಮಾಡಲೂ ಕಷ್ಟವಾಗಲಿದೆ ಎಂದು ಹೇಳಲಾಗಿದೆ.
ಅಮ್ರೇಲಿ, ಜುನಾಗಢ್, ಗಿರ್ ಸೋಮನಾಥ್, ಬೊಟಾಡ್ ಮತ್ತು ಭಾವನಗರ ಸೇರಿದಂತೆ ಸೌರಾಷ್ಟ್ರ ಜಿಲ್ಲೆಗಳ ಆನಂದ್, ಭರೂಚ್, ನವಸಾರಿ, ವಲ್ಸಾದ್ ಸೂರತ್, ಡ್ಯಾಂಗ್ಸ್ ಮತ್ತು ತಾಪಿಯಲ್ಲಿ ಪಂಚಮಹಲ್, ದಾಹೋದ್, ಛೋಟಾ ಉದೇಪುರ್ ಸೇರಿದಂತೆ ಡಿಸೆಂಬರ್ 1ರಂದು ಭಾರೀ ಮಳೆಯಾಗುವ ನಿರೀಕ್ಷೆಯಿದೆ ಎಂದು ಐಎಂಡಿ ತಿಳಿಸಿದೆ.
ಡಿಸೆಂಬರ್ 1 ಮತ್ತು 2ರಂದು ಗುಜರಾತ್‌ನ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. IMD ಗುಜರಾತ್‌ನ ಆನಂದ್, ಭರೂಚ್, ನವಸಾರಿ, ವಲ್ಸಾದ್, ಅಮ್ರೇಲಿ ಮತ್ತು ಭಾವನಗರ ಜಿಲ್ಲೆಗಳಲ್ಲಿ ಡಿಸೆಂಬರ್ 1ಕ್ಕೆ ಆರೆಂಜ್ ಅಲರ್ಟ್ ಮತ್ತು ಡಿಸೆಂಬರ್ 2 ಕ್ಕೆ ಹಳದಿ ಅಲರ್ಟ್ ಘೋಷಿಸಿದೆ.
ಉತ್ತರ ಮತ್ತು ದಕ್ಷಿಣ ಗುಜರಾತ್ ಕರಾವಳಿಯಲ್ಲಿ ಇಂದಿನಿಂದ ಡಿಸೆಂಬರ್ 2 ರವರೆಗೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ. ಅಕಾಲಿಕ ಮಳೆಯಿಂದಾಗಿ ಕಟಾವು ಹಾಗೂ ಬೆಳೆದು ನಿಂತಿರುವ ಬೆಳೆಗಳಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ರೈತರಿಗೆ ಸೂಚಿಸಲಾಗಿದೆ.
ದಕ್ಷಿಣ ಗುಜರಾತ್‌ನ ಎಲ್ಲಾ ಜಿಲ್ಲೆಗಳಲ್ಲಿ ಅಹಮದಾಬಾದ್, ಆನಂದ್, ಖೇಡಾ, ಪಂಚಮಹಲ್, ದಾಹೋದ್, ಸುರೇಂದ್ರನಗರ, ರಾಜ್‌ಕೋಟ್, ಪೋರಬಂದರ್, ಜುನಾಗಢ್, ಅಮ್ರೇಲಿಯಲ್ಲಿ ಗುಡುಗು, ಮಿಂಚು ಹಾಗೂ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ.
ಬಂಗಾಳ ಕೊಲ್ಲಿ ಮತ್ತು ಅರಬ್ಬಿ ಸಮುದ್ರ ಭಾಗದಲ್ಲಿ ವಾಯುಭಾರ ಕುಸಿತಗೊಳ್ಳುವ ಸಾಧ್ಯತೆ ಇರುವುದರಿಂದ ರಾಜ್ಯದಲ್ಲಿ ಡಿ.5ರವರೆಗೆ ಹಿಂಗಾರು ಚುರುಕಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬಂಗಾಳ ಕೊಲ್ಲಿಯಲ್ಲಿ ಎದ್ದಿರುವ ಸ್ಟ್ರಫ್ನಿಂದ ಡಿಸೆಂಬರ್ 1 ರಂದು ವಾಯುಬಾರ ಕುಸಿತವಾಗಲಿದೆ. ಇದು ಒಡಿಶಾ ಮಾರ್ಗವಾಗಿ ಸಾಗಿದರೆ ರಾಜ್ಯಕ್ಕೆ ಮಳೆ ತೊಂದರೆ ಇಲ್ಲ. ಆದರೆ ಆಂಧ್ರ, ತಮಿಳುನಾಡು ಕರಾವಳಿಗೆ ಅಪ್ಪಳಿಸಿದರೆ ರಾಜ್ಯದಲ್ಲಿ ಮತ್ತೆ ಅಧಿಕ ಮಳೆ ನಿರೀಕ್ಷಿಸಬಹುದು.ಮುಂದಿನ ಐದು ದಿನ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳು ಮತ್ತು ಕರಾವಳಿ ಭಾಗದಲ್ಲಿ ಧಾರಾಕಾರವಾಗಿ ಮಳೆ ಬೀಳುವ ಸಾಧ್ಯತೆ ಇದೆ.