Saturday, November 23, 2024
ಸುದ್ದಿ

ವಿದ್ಯಾರ್ಥಿಗಳ ಅಧ್ಯಯನಕ್ಕೆ ಪೂರಕವಾದ ‘ವಿದ್ಯಾಮಾತಾ ಅಕಾಡೆಮಿ’ಯಲ್ಲಿ ಆನ್ಲೈನ್ ಟ್ಯೂಶನ್ ತರಗತಿಗಳು ಆರಂಭ – ಕಹಳೆ ನ್ಯೂಸ್

ಪುತ್ತೂರು: ಕೊರೋನಾ ಕಾರಣದಿಂದ ಕುಸಿದಿರುವ ಶೈಕ್ಷಣಿಕ ಮಟ್ಟವನ್ನು ವಿದ್ಯಾರ್ಥಿಗಳಲ್ಲಿ ಹೆಚ್ಚಿಸಿ ಪರೀಕ್ಷೆಗಳಿಗೆ ತಯಾರಿಯನ್ನು ಮಾಡುವುದು ವಿದ್ಯಾಮಾತಾ ಅಕಾಡೆಮಿಯ ಉದ್ದೇಶವಾಗಿದ್ದು, ಈ ಹಿನ್ನಲೆಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ 8,9,10ನೇ ತರಗತಿಗಳ ವಿದ್ಯಾರ್ಥಿಗಳಿಗೆ ಆನ್ಲೈನ್ ಟ್ಯೂಶನ್ ಕ್ಲಾಸ್ ಗಳನ್ನು ಆರಂಭಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹೈಸ್ಕೂಲ್ ವಿದ್ಯಾರ್ಥಿಗಳ ಅಧ್ಯಯನಕ್ಕೆ ಪೂರಕವಾಗಿ ವಿದ್ಯಾಮಾತಾ ಅಕಾಡೆಮಿಯು ಹೆಚ್ಚುವರಿ ಬೋಧನಾ ತರಗತಿ(ಟ್ಯೂಶನ್) ನ್ನು ಆರಂಭಿಸಿದ್ದು, ತರಗತಿಗಳು ಸಾಯಂಕಾಲ 6ರಿಂದ ರಾತ್ರಿ 8ರ ವರೆಗೆ ಆನ್ಲೈನ್ ಮುಖಾಂತರ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆನ್ಲೈನ್ ತರಗತಿಗಳಲ್ಲಿ ಗರಿಷ್ಠ 25 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ನೀಡುತ್ತಿದ್ದು, ಇದು ಪ್ರತೀ ವಿದ್ಯಾರ್ಥಿಯನ್ನು ವೈಯಕ್ತಿಕವಾಗಿ ಗಮನಿಸಲು ಸಹಕಾರಿಯಾಗಿದೆ. ಸದ್ಯ ಗಣಿತ, ವಿಜ್ಞಾನ, ಸಮಾಜ, ಇಂಗ್ಲಿಷ್  ವಿಷಯಗಳಿಗೆ ಆನ್ಲೈನ್ ತರಗತಿಗಳು ಪ್ರಾರಂಭವಾಗಲಿದ್ದು, ಪ್ರತೀ 15 ದಿನಕ್ಕೊಮ್ಮೆ ಮಾದರಿ ಪ್ರಶ್ನೆಪತ್ರಿಕೆಯ ಮೇಲೆ ಪರೀಕ್ಷೆಗಳನ್ನು ನಡೆಸಲಾಗುತ್ತದೆ.

ಪ್ರತೀ ವಿಷಯಕ್ಕೆ 1 ಗಂಟೆಗಳ ಅವಧಿಯನ್ನು ಸೀಮಿತಗೊಳಿಸಿದ್ದು, ವಿದ್ಯಾರ್ಥಿಗಳು ಯಾವುದೇ ವಿಷಯದ ಬಗ್ಗೆ ತರಬೇತಿಯನ್ನು ಪಡೆದುಕೊಳ್ಲಲು ಅವಕಾಶ ನೀಡಲಾಗಿದೆ.

ಆಸಕ್ತರು ವಿದ್ಯಾಮಾತಾ ಅಕಾಡೆಮಿ,1 ನೇ ಮಹಡಿ, ಹಿಂದುಸ್ತಾನ್ ಕಾಂಪ್ಲೆಕ್ಸ್, ಎ. ಪಿ.ಎಂ.ಸಿ ರಸ್ತೆ, ಪುತ್ತೂರು. ಇಲ್ಲಿಗೆ ಖುದ್ದಾಗಿ ಭೇಟಿಕೊಟ್ಟು ಮಾಹಿತಿಯನ್ನು ಪಡೆಯಬಹುದು.ಇಲ್ಲವೇ 9620468869/9148935808 ಗೆ ಕರೆಮಾಡಿ ಮಾಹಿತಿಯನ್ನು ಪಡೆದುಕೊಳ್ಳಬಹುದು