ಇಂದು ಧರ್ಮಸ್ಥಳ ಲಕ್ಷ ದೀಪೋತ್ಸವಕ್ಕೆ ರಾಜ್ಯಪಾಲರು ಭೇಟಿ ; ಡಾ. ಡಿ ವೀರೇಂದ್ರ ಹೆಗ್ಗಡೆಯವರ ಭೇಟಿ ಬಳಿಕ ಸರ್ವಧರ್ಮ ಸಮ್ಮೇಳನದ ಉದ್ಘಾಟನೆ – ಕಹಳೆ ನ್ಯೂಸ್
ಮಂಗಳೂರು, ಡಿ 02 : ಘನತೆವೆತ್ತ ರಾಜ್ಯಪಾಲರಾದ ಥಾವರ್ ಚಂದ್ ಗೆಹಲೋಟ್ ಅವರು ಇದೇ ಡಿ.2 ರಿಂದ 5ರ ವರೆಗೆ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಪ್ರವಾಸ ಕೈಗೊಂಡಿದ್ದಾರೆ.
2021ರ ಡಿಸೆಂಬರ್ 2ರ ಗುರುವಾರ ಬೆಂಗಳೂರಿನಿಂದ ವಿಮಾನದ ಮೂಲಕ ಹೊರಟು ಬೆಳಿಗ್ಗೆ 10.50ಕ್ಕೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವರು. ಅಲ್ಲಿಂದ ಅವರು 12.30ಕ್ಕೆ ಧರ್ಮಸ್ಥಳಕ್ಕೆ ತೆರಳಿ, 12.45ಕ್ಕೆ ಸನ್ನಿಧಿ ಗೆಸ್ಟ್ ಹೌಸ್‌ಗೆ ಆಗಮಿಸುವರು. 12.47ಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ವಿರೇಂದ್ರ ಹೆಗ್ಗಡೆಯವರ ಬೀಡು ನಿವಾಸಕ್ಕೆ ಭೇಟಿ ನೀಡುವರು. 1.17ಕ್ಕೆ ದೇವಸ್ಥಾನಕ್ಕೆ ಭೇಟಿ ನೀಡುವರು. 1.42ಕ್ಕೆ ಅನ್ನಪೂರ್ಣ ಊಟದ ಹಾಲ್‌ಗೆ ಆಗಮಿಸುವರು. 2.02ಕ್ಕೆ ಸನ್ನಿಧಿ ಗೆಸ್ಟ್ ಹೌಸ್‌ಗೆ ಆಗಮಿಸುವರು. 3.18ಕ್ಕೆ ಮಂಜೂಷಾ ಮೂಸಿಯಂಗೆ ಭೇಟಿ ನೀಡುವರು. ಸಂಜೆ 4.03ಕ್ಕೆ ಕಾರ್ ಮೂಸಿಯಂಗೆ ಆಗಮಿಸುವರು. ಸಂಜೆ 5.05ಕ್ಕೆ ಲಕ್ಷ ದೀಪೋತ್ಸವದ ಸಂದರ್ಭದಲ್ಲಿ ಆಯೋಜಿಸಲಾಗಿರುವ ಸರ್ವಧರ್ಮ ಸಮ್ಮೇಳನವನ್ನು ಉದ್ಘಾಟಿಸುವರು. ಸಂಜೆ 6.15ಕ್ಕೆ ಧರ್ಮಸ್ಥಳದಿಂದ ಹೊರಟು 7.45ಕ್ಕೆ ಉಡುಪಿಯ ಸಕ್ಯೂರ್ಟ್ ಹೌಸ್‌ಗೆ ಆಗಮಿಸಿ, ವಾಸ್ತವ್ಯ ಮಾಡಲಿದ್ದಾರೆ.
ಡಿ.3 ರಂದು ಬೆಳಗ್ಗೆ 8.05 ಕ್ಕೆ ಶ್ರೀ ಕೃಷ್ಣ ಮಠಕ್ಕೆ ಭೇಟಿ, 9.45 ಕ್ಕೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ , ಅನಂತರ , ಮುರುಡೇಶ್ವರಕ್ಕೆ ತೆರಳಲಿದ್ದಾರೆ