Recent Posts

Sunday, January 19, 2025
ಕ್ರೈಮ್ದಕ್ಷಿಣ ಕನ್ನಡಸುದ್ದಿ

ಶಾಲೆಗೆ ತೆರಳುತ್ತಿದ್ದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿ ಜಿಹಾದಿ ಅಬ್ದುಲ್ ರಾಶಿಕ್ ಹೆಡೆಮುರಿಕಟ್ಟಿದ ಪೋಲೀಸರು – ಕಹಳೆ ನ್ಯೂಸ್

ಮಂಗಳೂರು : ಶಾಲೆಗೆ ತೆರಳುತ್ತಿದ್ದ ಅಪ್ರಾಪ್ತ ಬಾಲಕಿಗೆ ಆಲಂಕಾರುಗುಡ್ಡೆ ಬಳಿ ಲೈಂಗಿಕ ಕಿರುಕುಳ ನೀಡಿದ ಆರೋಪಿಯನ್ನು ನಗರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.



ಬಂಧಿತ ಆರೋಪಿಯನ್ನು ಕೆ.ಸಿರೋಡು ನಿವಾಸಿ ಅಬ್ದುಲ್ ರಾಶಿಕ್ ಎಂದು ಗುರುತಿಸಲಾಗಿದೆ. ರಾಶಿಕ್ ಉಚ್ಚಿಲದಲ್ಲಿ ಮತ್ತೊಬ್ಬ ಅಪ್ರಾಪ್ತ ಬಾಲಕಿಗೂ ಕಿರುಕುಳ ನೀಡಿದ ಆರೋಪವನ್ನೂ ಹೊಂದಿದ್ದು ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿವೆ. ಇದೇ ರೀತಿಯ ಹೆಚ್ಚಿನ ಅಪರಾಧಗಳಲ್ಲಿ ಭಾಗಿಯಾಗಿರುವ ಬಗ್ಗೆ ತಿಳಿಯಲು ಸಿಸಿಬಿ ಅಧಿಕಾರಿಗಳು ರಾಶಿಕ್ ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇಂತಹ ಹಲವು ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ಸಿಸಿಬಿ ಪೊಲೀಸರು ರಾಶಿಕ್ ನನ್ನು ವಿಚಾರಣೆಗೊಳಪಡಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಡಿಸೆಂಬರ್ 1 ರ ಬುಧವಾರ ಬೆಳಗ್ಗೆ ತಲಪಾಡಿಯ ಆಲಂಕಾರುಗುಡ್ಡೆ ಪ್ರದೇಶದಲ್ಲಿ ಶಾಲೆಗೆ ತೆರಳುತ್ತಿದ್ದಾಗ ಸ್ಕೂಟರ್ ನಲ್ಲಿ ಬಂದಿದ್ದ ಈತ ಆಕೆಯ ಕೈ ಹಿಡಿದು ಎಳೆದಾಡಿ ಲೈಂಗಿಕ ಕಿರುಕುಳ ನೀಡಿದ್ದು ಬಾಲಕಿ ಕಿರುಚಾಡುತ್ತಿದ್ದಂತೆ ಆರೋಪಿ ರಾಶಿಕ್ ಪರಾರಿಯಾಗಿದ್ದ.