Sunday, January 19, 2025
ಸುದ್ದಿ

ಸಿಎಂ ಸಿದ್ದರಾಮಯ್ಯ ದೊಡ್ಡ ಸುಳ್ಳ !

ಬೆಂಗಳೂರು (ಅ.03): ರಾಜ್ಯ ಕಂಡ ಅತೀ ಹೆಚ್ಚು ಸುಳ್ಳು ಹೇಳುವ ಸಿಎಂ ಎಂದರೆ ಅದು ಸಿದ್ದರಾಮಯ್ಯ ಎಂದು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್​ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇನ್ವೆಸ್ಟ್ ಕರ್ನಾಟಕ, ಕೈಗಾರಿಕೆ ಹಾಗೂ ನೀರಾವರಿ ಇಲಾಖೆಗಳ ಬಗ್ಗೆ ಸಿಎಂ ಜನರಿಗೆ ಸುಳ್ಳು ಮಾಹಿತಿ ನೀಡಿದ್ದಾರೆ. ಇನ್ವೆಸ್ಟ್ ಕರ್ನಾಟಕದಲ್ಲಿ ಒಡಬಂಡಿಕೆ ಆಗಿದ್ದು 2,45,584 ಕೋಟಿ. ಆದರೆ ಇದುವರೆಗೆ ಹೂಡಿಕೆ ಆಗಿರೋದು ಕೇವಲ 11,158 ಕೋಟಿ ರೂಪಾಯಿ ಮಾತ್ರ ಅಂತ ಶೆಟ್ಟರ್ ವಿವರ ನೀಡಿದರು. ಇನ್ನು ನೀರಾವರಿ ಇಲಾಖೆಯಿಂದ ಆರು ಪುಟಗಳ ಜಾಹೀರಾತು ನೀಡಿ ಅದರ ತುಂಬ ಸುಳ್ಳು ವಿವರಗಳ ನೀಡಿದ್ದಾರೆ. ಇದಕ್ಕೆ ಒಂದು ನಿದರ್ಶನ ನೀಡೋದಾದರೆ ಕೊಪ್ಪಳ ಏತ ನೀರಾವರಿ ಯೋಜನೆ ಜಾರಿಯಾಗದಿರುವ ಹಿನ್ನಲೆಯಲ್ಲಿ ಅಲ್ಲಿನ ಸ್ಥಳೀಯರು ನಡೆಸಿದ ಪ್ರತಿಭಟನೆಯಲ್ಲಿ ನಾನು ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಭಾಗವಹಿಸಿ ಒತ್ತಾಯಿಸಿದ್ದೆವು. ಅದಾದ 2 ದಿನಗಳ ನಂತರ ಸಿಎಂ ಆ ಯೋಜನೆ ಜಾರಿಗೆ 2 ಸಾವಿರ ಕೋಟಿ ಘೋಷಿಸಿದ್ದರು. ಆದರೆ ಜಾಹೀರಾತಿನಲ್ಲಿ ಸುಳ್ಳು ಮಾಹಿತಿ ನೀಡಿದ್ದಾರೆ ಅಂತ ಆಪಾದಿಸಿದರು.
ಸಚಿವ ಎಂ.ಬಿ. ಪಾಟೀಲ್ ಹಾಗೂ ಹೆಚ್​.ಕೆ. ಪಾಟೀಲರನ್ನು ಷೋಮ್ಯಾನ್ಸ್ ಅಂತ ಟೀಕಿಸಿದರು. ಇದೇ ವೇಳೆ ಪ್ರಕಾಶ್​ ರೈ ವಿರುದ್ಧ ಟೀಕಿಸಿದ ಶೆಟ್ಟರ್​​, ಗೌರಿ ಹತ್ಯೆಯ ಹಿನ್ನಲೆಯಲ್ಲಿ ಮೋದಿ ವಿರುದ್ಧ ಟೀಕಿಸುವ ಪ್ರಕಾಶ್​ ರೈಗೆ ಕಾನೂನು ಸುವ್ಯವಸ್ಥೆ ರಾಜ್ಯದ ವ್ಯಾಪ್ತಿಗೆ ಬರುತ್ತದೆ ಎಂಬುದು ತಿಳಿದಿಲ್ಲವೇ? ಅವರಿಗೆ ತಲೆ ಇಲ್ಲವೇ ಅಂತ ವಾಗ್ದಾಳಿ ನಡೆಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು