ಪುತ್ತೂರು: ವಿವೇಕಾನಂದ ಇನ್ಸಿಟ್ಯೂಟ್ ಆಫ್ ಸಿಎ ಸ್ಟಡೀಸ್ (ವಿಕಾಸ್), ವಿವೇಕಾನಂದ ಪದವಿಪೂರ್ವ ಮತ್ತು ಪದವಿ ಕಾಲೇಜಿನ ವಾಣಿಜ್ಯ ಸಂಘದ ವತಿಯಿಂದ ಸಿಎ ಆಕಾಂಕ್ಷಿ ವಿದ್ಯಾರ್ಥಿಗಳಿಗೆ ಆಯೋಜಿಸಲಾದ ಮಾಹಿತಿ ಕಾರ್ಯಗಾರವನ್ನು ಉದ್ದೇಶಿಸಿ ಮಾತನಾಡಿದ, ವಿವೇಕಾನಂದ ಪದವಿ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ. ರವಿಕಲಾ ಸ್ಪರ್ಧಾತ್ಮಕ ಜೀವನದಲ್ಲಿ ವಾಸ್ತವ ಬದುಕಿಗೆ ಪೂರಕವಾಗಿರುವ ಸಂವಹನ ಕೌಶಲ ಮತ್ತು ಪ್ರಾಯೋಗಿಕ ಜ್ಞಾನವನ್ನು ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವದಲ್ಲಿ ರೂಢಿಸಿಕೊಳ್ಳಬೇಕಾದ ಅಗತ್ಯವಿದೆ. ನಿರಂತರ ಪರಿಶ್ರಮದಿಂದ ಮಾತ್ರ ಸಿಎ ಯಂತಹ ವೃತ್ತಿಪರ ಕೋರ್ಸುಗಳಲ್ಲಿ ಯಶಸ್ಸು ಸಾಧಿಸಲು ಸಾಧ್ಯ.
ಸಿಎ ಯಂತಹ ವೃತ್ತಿಪರ ಕೋರ್ಸುಗಳು ಸಾಕಷ್ಟು ವೆಚ್ಚವಿಲ್ಲದ ಹಾಗೂ ಸುಲಭವಾದ ಕೋರ್ಸ್. ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಕೈಗೆಟಕುವ ಕೋರ್ಸ್ ಕೂಡ ಆಗಿದೆ. ಹಿಂದೆ ಸಿ ಎ ಮಾಡಲು ಹಲವರಿಗೆ ಆಸಕ್ತಿ ಇತ್ತಾದರೂ ಮಾಹಿತಿ ಕೊರತೆಯಿಂದ ಅದು ಸಾಧ್ಯವಾಗಿರಲಿಲ್ಲ. ಆದರೆ ಇಂದು ಇದರ ಮಾಹಿತಿ ಮತ್ತು ತರಬೇತಿ ನಮ್ಮ ಕಾಲೇಜಿನಲ್ಲಿ ದೊರೆಯುತ್ತಿದ್ದು ಖುಷಿಯ ವಿಚಾರ. ವಿದ್ಯಾರ್ಥಿಗಳು ಕಾಲೇಜು ಹಂತದಲ್ಲಿ ಸಿಕ್ಕಿದ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ತಮ್ಮ ಪ್ರತಿಭೆಯನ್ನು ತಾವೇ ಬೆಳೆಸಬೇಕು. ಶ್ರದ್ಧೆಯಿಂದ ಕೆಲಸ ಮಾಡಿದಾಗ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ವಿವೇಕಾನಂದ ಇನ್ಸ್ಟಿಟ್ಯೂಟ್ ಫಾರ್ ಸಿ ಎ ಸ್ಟಡೀಸ್‍ನ ಸಂಯೋಜಕಿ ಲಕ್ಷ್ಮಿ ಭಟ್ ಸಿ ಎ ಯಲ್ಲಿಯ ವಿವಿಧ ಹಂತಗಳು ಮತ್ತು ವಿವಿಧ ವಿಷಯಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಸತ್ತು ಹೋದ ಅಂದುಕೊಂಡ ವ್ಯಕ್ತಿ ಬೆಳ್ಳಂ ಬೆಳ್ಳಗ್ಗೆ ಪ್ರತ್ಯೆಕ್ಷ..! – ತುಮಕೂರು ಜಿಲ್ಲೆಯ ಜನರಿಗೆ ಶಾಕ್ ಕೊಟ್ಟ ನಾಗ ರಾಜಪ್ಪ- ಸತ್ತವರು ಯಾರು…? ಊರೊಳಗೆ ಕಾಲಿಟ್ಟವರು ಯಾರು..?
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ವಿವೇಕಾನಂದ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಮಹೇಶ್ ನಿಟಿಲಾಪುರ ಮಾತನಾಡಿ ವಿವೇಕಾನಂದ ವಿದ್ಯಾವರ್ಧಕ ಸಂಘವು ರಾಜ್ಯದಾದ್ಯಂತ ಹಲವು ವಿದ್ಯಾಸಂಸ್ಥೆ ನಡೆಸುತ್ತಿದ್ದು ವಿದ್ಯಾರ್ಥಿಗಳಿಗೆ ಹಲವು ಅವಕಾಶಗಳನ್ನು ಒದಗಿಸುತ್ತಿದೆ. ಹಾಗೆಯೇ ವಿಕಾಸ್ ಎನ್ನುವ ಸಿ ಎ ತರಬೇತಿ ಸಂಸ್ಥೆಯನ್ನು ಸ್ಥಾಪಿಸಿದೆ. ಇಂದಿನ ಜಿಎಸ್‍ಟಿ ಯುಗದಲ್ಲಿ ಸಿ.ಎ ಕೋರ್ಸುಗಳಿಗೆ ಬಹು ಬೇಡಿಕೆಯಿದೆ ಮಾತ್ರವಲ್ಲದೆ ಜೀವನವನ್ನು ನಂದನಗೊಳಿಸಲು ಉಜ್ವಲ ಅವಕಾಶವಿದೆ. ಕೊರೊನಾದ ಕಾಲಘಟ್ಟದಲ್ಲಿ ಇದರ ಮಹತ್ವ ಇನ್ನೂ ಹೆಚ್ಚಿದ್ದು ವಿದ್ಯಾರ್ಥಿಗಳು ಇದರ ಉಪಯೋಗ ಪಡೆಯಬೇಕು ಎಂದರು.
ಕಾರ್ಯಕ್ರಮದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಉಷಾ ಎಂ ಉಪಸ್ಥಿತರಿದ್ದರು. ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ದೇವಿಕಾ ಮತ್ತು ದೀಕ್ಷಾ ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಹಾಡಿದರು. ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಭಾಗ್ಯಶ್ರೀ ಕಾರ್ಯಕ್ರಮವನ್ನು ನಿರೂಪಿಸಿದರು. ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ದಿವ್ಯಾ ಕೆ ಸ್ವಾಗತಿಸಿ ವಿವೇಕಾನಂದ ಸ್ನಾತಕೋತ್ತರ ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರತೀಕ್ ರೈ ವಂದಿಸಿದರು