Recent Posts

Monday, January 20, 2025
ಬೆಂಗಳೂರುಸುದ್ದಿ

ಗರುಡ ಗಮನ ವೃಷಭ ವಾಹನ ಚಿತ್ರದಲ್ಲಿನ ಮಾದಪ್ಪನ ಹಾಡನ್ನು ತೆಗೆದು ಹಾಕಿ: ಸಾಲೂರುಶ್ರೀ – ಕಹಳೆ ನ್ಯೂಸ್

ಚಾಮರಾಜನಗರ: ಭಕ್ತರ ಆಕ್ರೋಶದಿಂದ ವಿವಾದಕ್ಕೆ ಕಾರಣವಾಗಿರುವ ಗರುಡ ಗಮನ ವೃಷಭ ವಾಹನ ಚಿತ್ರದ ಸೋಜಿಗದ ಸೂಜು ಮಲ್ಲಿಗೆ ಹಾಡಿನ ವಿರುದ್ಧ ಈಗ ಮಲೆ ಮಹದೇಶ್ವರ ಬೆಟ್ಟದಲ್ಲಿನ ಸಾಲೂರು ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಕಿಡಿಕಾರಿದ್ದು, ಚಿತ್ರದಲ್ಲಿನ ಮಾದಪ್ಪನ ಹಾಡನ್ನು ತೆಗೆದು ಹಾಕುವಂತೆ ಒತ್ತಾಯಿಸಿದ್ದಾರೆ.

Garuda Gamana Vrishabha Vahana

ಜಾಹೀರಾತು
ಜಾಹೀರಾತು
ಜಾಹೀರಾತು

ಚಾಮರಾಜನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶತಮಾನದ ಜಾನಪದವನ್ನು, ಸಂಸ್ಕೃತಿಕ ಮೌಲ್ಯವನ್ನು ಹಿಂಸೆಯ ಸಂಭ್ರಮಕ್ಕೆ ಬಳಸಿರುವುದು ಸರಿಯೇ?, ಸಿನಿಮಾದಲ್ಲಿ ಕೊಲೆಗಾರನು ನರ್ತಿಸುವಾಗ ಮಾದಪ್ಪನ ಹಾಡನ್ನು ಬಳಸಿರುವುದು ಎಷ್ಟು ಸರಿ? ಎಂದು ಕಿಡಿಕಾರಿದರು. ಇದನ್ನೂ ಓದಿ: ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಅನ್ಯಾಮತೀಯರ ವಾಹನ ಪಾರ್ಕಿಂಗ್; ಹಿಂ.ಜಾ.ವೇ ಮಾಹಿತಿ ಮೇರೆಗೆ ಪೊಲೀಸ್ ಇಲಾಖೆಯಿಂದ ತೆರವು

ಜಾಹೀರಾತು
ಜಾಹೀರಾತು
ಜಾಹೀರಾತು

ಮಲೆ ಮಹದೇಶ್ವರರು ಓರ್ವ ಪವಾಡ ಪುರುಷ. ಮಹದೇಶ್ವರರು ನೈಜ ವ್ಯಕ್ತಿಯಾಗಿದ್ದು ದೈವತ್ವವನ್ನು ಪಡೆದವರು. ಲಕ್ಷಾಂತರ ಭಕ್ತರನ್ನು ಹೊಂದಿದ್ದಾರೆ, ಅವರು ಸಕಲ ಜೀವಿಗಳಿಗೂ ಒಳ್ಳೇಯದನ್ನೇ ಬಯಸಿ ಅಲ್ಪರಿಗೆ ಜ್ಞಾನ ನೀಡುವಂತ ಮಹಾಮಹಿಮರ ಬಗ್ಗೆ ಇರುವ ಹಾಡನ್ನು ಕ್ರೌರ್ಯಕ್ಕೆ ಬಳಸಿರುವ ನಿರ್ದೇಶಕರನ್ನು ಮಹದೇಶ್ವರರೇ ಹರಸಬೇಕಿದೆ, ಮುಂದೆ ಈ ರೀತಿಯ ಚಿಂತನೆ ಬಾರದಿರಲಿ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಮೂರು ದಿನಗಳಿಂದ ಚಿತ್ರದಲ್ಲಿ ಬಳಸಿರುವ ಸೋಜಿಗದ ಸೂಜು ಮಲ್ಲಿಗೆ ಹಾಡಿನ ವಿರುದ್ಧ ಸಾಹಿತಿಗಳು, ಕಲಾವಿದರು ಹಾಗೂ ಭಕ್ತರು ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರುತ್ತಿದ್ದಾರೆ. ಈಗ, ಮಹದೇಶ್ವರ ಬೆಟ್ಟದ ಸಾಲೂರು ಮಠದ ಸ್ವಾಮೀಜಿಯೂ ಮಾತನಾಡಿರುವುದರಿಂದ ಭಕ್ತರ ಆಕ್ರೋಶಕ್ಕೆ ಬಲ ಬಂದಂತಾಗಿದೆ.