ಕೋಮು ಪ್ರಚೋದನಾಕಾರಿ ಹೇಳಿಕೆ ಆರೋಪ : ನಾಲಿಗೆ ಹರಿಬಿಟ್ಟ SDPI ಮತ್ತು CFI ಮುಖಂಡರಾದ ಮಹಮ್ಮದ್ ಜಾಬೀರ್ ಹಾಗೂ ಸಾವದ್ ವಿರುದ್ಧ ಪ್ರಕರಣ ದಾಖಲು..!! – ಕಹಳೆ ನ್ಯೂಸ್
ಪುತ್ತೂರು : ಕೋಮು ಪ್ರಚೋದನಕಾರಿ ಭಾಷಣ ಮಾಡುವ ಮೂಲಕ ಎಸ್‌ಡಿಪಿಐ ಹಾಗೂ ಪಿಎಫ್‌ಐ ಸಂಘಟನೆ ಇದೀಗ ಎಲ್ಲರ ಕೆಂಗಣ್ಣಿಗೆ ಕಾರಣವಾಗಿದ್ದು. ಈ ವಿಚಾರ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಇತ್ತೀಚಿನ ಕೆಲ ದಿನಗಳ ಹಿಂದೆ ಪುತ್ತೂರಿನ ಕೊಂಬೆಟ್ಟು ಸರಕಾರಿ ಕಾಲೇಜಿನಲ್ಲಿ ಹಿಂದೂ ಹಾಗೂ ಮುಸ್ಲಿಂ ವಿದ್ಯಾರ್ಥಿಗಳ ನಡುವೆ ನಡೆದ ಜಗಳಕ್ಕೆ ಸಂಬಂಧಿಸಿ, ಇಂದು ಎಸ್‌ಡಿಪಿಐ ಹಾಗೂ ಪಿಎಫ್‌ಐ ಸಂಘಟನೆ ಮುಸ್ಲಿಂ ವಿದ್ಯಾರ್ಥಿಗಳಿಗೆ ಕೋಮು ಪ್ರಚೋದನೆಗೆ ಉತ್ತೇಜಿಸುವ ರೀತಿಯಲ್ಲಿ ಭಾಷಣವನ್ನ ಮಾಡಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಪುಷ್ಪರಾಜ್ ಆಚಾರ್ಯ ಇವರು ಪೊಲೀಸರಿಗೆ ದೂರು ನೀಡಿದ್ದು, ಇವರ ದೂರಿನ ಮೇರೆಗೆ ಮಹಮ್ಮದ್ ಜಾಬೀರ್ ಮತ್ತು ಸವಾದ್ ಕಲ್ಲರ್ಪೆ ಹಾಗೂ ಇತರರ ವಿರುದ್ಧ ಕ್ರೈಂ ನಂಬರ್ 104/21 ರಂತೆ, ಐಪಿಸಿ ಸೆಕ್ಷನ್ 153(A),34 ರಂತೆ ಪ್ರಕರಣ ದಾಖಲಿಸಲಾಗಿದೆ.
ಠಾಣೆಯ ಮುಂದೆಯೇ ಮಾಧ್ಯಮದ ಕುರಿತು ಅವಹೇಳನ :
ವಸ್ತುನಿಷ್ಠ ವರದಿ ಪ್ರಕಟಿಸುವ ಮಾಧ್ಯಮದ ಕುರಿತು ಲಘವಾದ ಪದಗಳನ್ನು ಬಳಸಿ ಜಾಬೀರ್ ಮಾತನಾಡಿದ್ದು, ಇಲ್ಲಿ ನೆನಪಿಕೊಳ್ಳಬಹುದು.
ಸೈನಿಕರಿಗೂ ಅಪಮಾನ ಮಾಡಿದ್ದ ಇತಿಹಾಸ ಜಾಬೀರ್ ನದ್ದು,…!
ಈ ಹಿಂದೆ ಪುತ್ತೂರು ಬಸ್ ನಿಲ್ದಾಣದ ಬಳಿ ಭಾರತದ ಸೈನಿಕರ ಕುರಿತು ಅವಹೇಳನಕಾರಿ ಭಾಷಣಮಾಡಿದ ಕುಖ್ಯಾತಿ ಇದೇ SDPI ಮುಖಂಡನಿಗೆ ಸಲ್ಲುತ್ತದೆ.