Friday, November 22, 2024
ಸುದ್ದಿ

ಮಾಹಿತಿ ಹಕ್ಕು ಕಾಯ್ದೆ ನಾಗರಿಕರ ಪರವಾಗಿದೆ ; ಮಾಹಿತಿ ಹಕ್ಕು ಕಾರ್ಯಾಗಾರದಲ್ಲಿ – ನ್ಯಾಯವಾದಿ ಶ್ಯಾಮ್ ಪ್ರಸಾದ್ ಕೈಲಾರ್

ಪುತ್ತೂರು : ಪರಾತ್ಪರ ಗುರು ಡಾ ಜಯಂತ ಆಠವಲೆಯವರ 76 ನೇ ಜನ್ಮೋತ್ಸವದ ಪ್ರಯುಕ್ತ ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಪುತ್ತೂರಿನ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ‘ಮಾಹಿತಿ ಹಕ್ಕು ಕಾರ್ಯಾಗಾರ’ ಆಯೋಜಿಸಲಾಗಿತ್ತು.

ಕಾರ್ಯಾಗಾರದ ಉದ್ಘಾಟನೆಯನ್ನು ದೀಪಪ್ರಜ್ವಲನದೊಂದಿಗೆ ಮಾಡಲಾಯಿತು. ದೀಪಪ್ರಜ್ವಲನೆಯನ್ನು ಮುಖ್ಯ ಅತಿಥಿ ಇವರು ಮಾಡಿದರು. ಈ ವೇಳೆ ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕರಾದ ಶ್ರೀ. ಚಂದ್ರ ಮೊಗೇರ ಇವರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು


ಚಂದ್ರ ಮೊಗೇರ ಇವರು ಕಾರ್ಯಾಗಾರದ ಉದ್ದೇಶವನ್ನು ತಿಳಿಸುತ್ತಾ, ‘ಮಾಹಿತಿ ಹಕ್ಕು ಕಾಯ್ದೆ ಎಂಬ ಒಂದು ಕಾನೂನಿನ ಪ್ರಭಲವಾದ ಶಸ್ತ್ರವನ್ನು ನಾವು ಸಮಾಜ, ರಾಷ್ಟ್ರ ಹಾಗೂ ಧರ್ಮದ ಒಳಿತಿಗಾಗಿ ಉಪಯೋಗಿಸುವ ಅವಶ್ಯಕತೆ ಇದೆ. ಈ ಕಾನೂನನ್ನು ಪ್ರಭಾವಶಾಲಿಯಾಗಿ ಬಳಸುವ ಬಗ್ಗೆ ಜನಸಾಮಾನ್ಯರಿಗೆ ಮಾಹಿತಿ ನೀಡುವ ಉದ್ದೇಶದಿಂದ ಕಾರ್ಯಾಗಾರ ಆಯೋಜಿಸಲಾಗಿದೆ’. ಎಂದರು.
ನ್ಯಾಯವಾದಿಗಳಾದ ಶ್ರೀ. ಶ್ಯಾಮ್ ಪ್ರಸಾದ್ ಕೈಲಾರ್ ಇವರು ಮಾತನಾಡುತ್ತಾ, ‘ನಾಗರಿಕರ ಹಕ್ಕುಗಳ ಕುರಿತಾದ ಕಾನೂನು ಇದ್ದರೆ ಸಾಲದು ಆ ಕಾನೂನನ್ನು ಉಪಯೋಗಿಸುವ ಬಗ್ಗೆ ಮಾಹಿತಿ ಹೊಂದಿರಬೇಕು. ದೇಶದಲ್ಲಿರುವ ಎಲ್ಲಾ ಕಾನೂನುಗಳು ರಾಜಕಾರಣಿಗಳ, ಅಧಿಕಾರಿಗಳ ಪರ ಇದೆ. ಆದರೆ ಮಾಹಿತಿ ಹಕ್ಕು ಕಾಯ್ದೆ ಮಾತ್ರ ನಾಗರಿಕರ ಪರವಾಗಿದೆ ; ಆದ್ದರಿಂದ ಅದನ್ನು ಉಪಯೋಗಿಸಿಕೊಂಡು ಭ್ರಷ್ಟಾಚಾರ ನಿರ್ಮೂಲನೆ ಮಾಡಿ ಆ ಮೂಲಕ ಸುರಾಜ್ಯ ನಿರ್ಮಾಣ ಮಾಡಬಹುದಾಗಿದೆ’ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ತಾಲೂಕಿನ ದೇವಸ್ಥಾನಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ನಗರಸಭೆ, ಪುರಸಭೆಗಳಲ್ಲಿ ನಡೆಯುತ್ತಿರುವ ಅವ್ಯವಹಾರಗಳ ಬಗ್ಗೆ ‘ಮಾಹಿತಿ ಹಕ್ಕು ಕಾಯ್ದೆ’ ಯ ಮೂಲಕ ಕಾನೂನು ಹೋರಾಟ ಮಾಡುವುದೆಂದು ಉಪಸ್ಥಿತ ಧರ್ಮಪ್ರೇಮಿಗಳು ನಿರ್ಧರಿಸಿದರು.
ಕಾರ್ಯಕ್ರಮದಲ್ಲಿ ಅಂಬಿಕಾ ಸಮೂಹ ಸಂಸ್ಥೆಯ ಸಂಚಾಲಕರಾದ ಶ್ರೀ. ಸುಬ್ರಹ್ಮಣ್ಯ ನಟ್ಟೋಜ, ಶ್ರೀ. ದಿನೇಶ್ ಜೈನ್, ಶ್ರೀ. ಕೃಷ್ಣಪ್ರಸಾದ್ ಬೆಟ್ಟ, ಶ್ರೀ. ಹರಿಪ್ರಸಾದ್ ಶೆಟ್ಟಿ, ನವೀನ್ ಕುಲಾಲ್ ,ಶ್ರೀ. ಶರತ್ ಆಳ್ವ, ಮೊದಲಾದವರು ಉಪಸ್ಥಿತರಿದ್ದರು.