Recent Posts

Sunday, January 19, 2025
ಸಿನಿಮಾ

‘ಎ.ಟಿ.ಎಮ್’ ಕಿರುಚಿತ್ರ ಡಿಸೆಂಬರ್ ೨೨ ರಂದು ರಿಲೀಸ್ – ಕರಾವಳಿ ಕರ್ನಾಟಕದ ಫೇಮಸ್  LOCALWOOD appನಲ್ಲಿ ಬಿಡುಗಡೆ – ಕಹಳೆ ನ್ಯೂಸ್

ಸಿನಿಪ್ರಿಯರನ್ನ ರಂಜಿಸಲು ಒಂದೊಳ್ಳೆ ಕಥೆ ಇರುವ ಎ.ಟಿ.ಎಮ್ ಕಿರುಚಿತ್ರ ಬಿಡುಗಡೆಗೆ ಸಿದ್ದವಾಗಿದೆ. ಯುವನಿರ್ದೇಶಕ ವರುಣ್ ಕುಮಾರ್ ಹೆಚ್ ಇವರ ನಿರ್ದೇಶನದಲ್ಲಿ, ತುಕಾರಾಂ ಬಾಯಾರು ಇವರ ನಿರ್ಮಾಣದಲ್ಲಿ ತಯಾರಾದ ಎ.ಟಿ.ಎಮ್ ಕಿರುಚಿತ್ರ ಇದೇ ಡಿಸೆಂಬರ್ 22ರಂದು ಕರಾವಳಿ ಕರ್ನಾಟಕದ ಜನಪ್ರಿಯ LOCALWOOD appನಲ್ಲಿ ಬಿಡುಗಡೆಗೊಳ್ಳಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಎ.ಟಿ.ಎಮ್ ಕಿರುಚಿತ್ರದ ಛಾಯಾಗ್ರಹಣ ಗೋಕುಲಕೃಷ್ಣನ್, ಸಂಗೀತ ನಿರ್ದೇಶನ ಜಯಕಾರ್ತಿ, ಸಹನಿರ್ದೇಶಕ ಶರತ್ ಕಿರಣ್ ಟಿ, ಸಹ ಛಾಯಾಗ್ರಹಣ ಸೂರಜ್ ಶೆಟ್ಟಿ, ವಿನಯ್ ಶೆಟ್ಟಿಗಾರ್, ನಿರ್ಮಾಣ ವಿಭಾಗ ಅನುಸುಲ್ ಶೆಟ್ಟಿ ತಿಂಬರ, ಆದಿತ್ಯ ಶೆಟ್ಟಿ ತಿಂಬರ, ಪೋಸ್ಟರ್ ಡಿಸೈನ್ ತಾರಾನಾಥ ಆಚಾರ್ಯ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ತಾರಾಗಣದಲ್ಲಿ ರಾಧಾಕೃಷ್ಣ ಕುಂಬ್ಳೆ, ಮೋಕ್ಷಿತ್ ಶೆಟ್ಟಿ, ವರ್ಷಾ ಸಿ ಮನೋಜ್, ಕಿರಣ್ ಆಚಾರ್ಯ, ಜ್ಯೋತಿಪ್ರಕಾಶ್ ಶೆಟ್ಟಿ, ಜಯರಾಮ ಆಚಾರ್ಯ ಹೊಸಂಗಡಿ, ವಿಜೇಶ್ ಬಿ ಕೆ ರೈ, ದಿವಾಕರ ಉಪ್ಪಳ, ಅರುಣ್ ಪ್ರಕಾಶ್ ರಾಜ್, ಸಂದೇಶ ಆಚಾರ್ಯ, ರಜನಿ ಚಂದ್ರಹಾಸ ಅಭಿನಯಿಸಿದ್ದಾರೆ.
ಯುವ ಪ್ರತಿಭೆಗಳ ಹಾಗೂ ಹಿರಿಯರ ಸಹಕಾರದೊಂದಿಗೆ ಮೂಡಿ ಬಂದಿರುವ ಎ.ಟಿ.ಎಮ್ ಕಿರುಚಿತ್ರವನ್ನ ಸಿನಿಪ್ರೇಮಿಗಳು LOCALWOOD app ಡೌನ್ಲೋಡ್ ಮಾಡಿಕೊಳ್ಳುವ ಮೂಲಕ ವೀಕ್ಷಿಸಬಹುದಾಗಿದೆ.