Recent Posts

Monday, January 20, 2025
ಬೆಳ್ತಂಗಡಿ

ಲಕ್ಷದೀಪೋತ್ಸವದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ – ಶ್ರೀ.ಡಿ. ಹರ್ಷೇಂದ್ರ ಕುಮಾರ್ ಹೆಗ್ಗಡೆಯವರಿಂದ ಶಿಬಿರದ ಉದ್ಘಾಟನೆ – ಕಹಳೆ ನ್ಯೂಸ್

ಶ್ರೀ ಕ್ಷೇತ್ರ ಧರ್ಮಸ್ಧಳದ ಮಂಜುನಾಥ ದೇವರ ಸನ್ನಧಿಯಲ್ಲಿ ಲಕ್ಷದೀಪೋತ್ಸವ ನಡೆಯುತ್ತಿದ್ದು. ಈ ಲಕ್ಷದೀಪೋತ್ಸವದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ತೆರೆಯಲಾಗಿದೆ. ಸಿನರ್ಜಿ ಇನ್ಸೂರೆನ್ಸ್ ಬ್ರೋಕರ್ಸ್ ಮುಂಬಯಿ, ಎಡಲ್‌ವೈಸ್ ಗಾಲಿಗರ್ ಇನ್ಸೂರೆನ್ಸ್ ಬ್ರೋಕರ್ಸ್ ಮುಂಬಯಿ ಇವರ ಸಹಕಾರದೊಂದಿಗೆ, ಶ್ರೀ ಕ್ಷೇತ್ರ ಧರ್ಮಸ್ಥಳದ ಮಹಾದ್ವಾರದ ಬಳಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ತೆರೆಯಲಾಗಿದ್ದು, ಇಂದು ಹರ್ಷೇಂದ್ರ ಹೆಗ್ಗಡೆಯರು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿದ್ರು.

ಜಾಹೀರಾತು
ಜಾಹೀರಾತು
ಜಾಹೀರಾತು

ಬಳಿಕ ಮಾತನಾಡಿದ ಹರ್ಷೇಂದ್ರ ಹೆಗ್ಗಡೆಯರು, ‘ಭಕ್ತಾದಿಗಳು, ಯಾತ್ರೆ ಮಾಡುವ ಸಂದರ್ಭದಲ್ಲಿ ಭಕ್ತಿಯೊಂದಿಗೆ ತಮ್ಮ ಆರೋಗ್ಯದ ಕಡೆಯೂ ಹೆಚ್ಚಿನ ಗಮನವನ್ನು ಕೊಡಬೇಕಾಗುತ್ತದೆ. ಈ ಉದ್ದೇಶದಿಂದ ಆರೋಗ್ಯ ಶಿಬಿರದ ಅವಶ್ಯಕತೆ ಹೊಂದಿದೆ. ಶ್ರೀಕ್ಷೇತ್ರ ಧರ್ಮಸ್ಥಳ ಸ್ವಚ್ಚತೆಗೆ ಆದ್ಯತೆಯನ್ನು ನೀಡಿದೆ. ಇಲ್ಲಿ ಬರುವ ಯಾತ್ರಾರ್ಥಿಗಳ ಆರೋಗ್ಯದ ಕಡೆಯೂ ಗಮನವನ್ನು ಹರಿಸಲಾಗುತ್ತದೆ. ಯಾವುದೇ ಸಂದರ್ಭದಲ್ಲಿ ಭಕ್ತರು ಅನಾರೋಗ್ಯ ತೊಂದರೆಗೊಳಗದಾಗ ಅವರಿಗೆ ಆರೋಗ್ಯ ಶಿಬಿರಗಳ ಮೂಲಕ ವಿಶೇಷ ಕಾಳಜಿಯನ್ನು ನೀಡಬೇಕೆಂಬ ಉದ್ದೇಶದಿಂದ ಆರೋಗ್ಯ ಶಿಬಿರ ನಡೆಸಲಾಗಿದೆ. ಎಂದು ಶ್ರೀ.ಡಿ. ಹರ್ಷೇಂದ್ರ ಕುಮಾರ್ ತಿಳಿಸಿದ್ದರು. ಧರ್ಮಸ್ಥಳ ಮುಖ್ಯದ್ವಾರದ ಎಡಭಾಗದಲ್ಲಿ ವ್ಯಾಕ್ಸಿನ್ ಮೇಳ – ಕೊರೋನಾ ಲಸಿಕೆ ಹಾಕಿಸಿಕೊಳ್ಳದವರಿಗೆ ಉಚಿತ ಲಸಿಕೆ

ಜಾಹೀರಾತು
ಜಾಹೀರಾತು
ಜಾಹೀರಾತು

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ದೀಪೋತ್ಸವದ ಸಂದರ್ಭದಲ್ಲಿ ಬರುವ ಯಾತ್ರಾತ್ರಿಗಳಿಗೆ ಆರೋಗ್ಯ ತಪಾಸಣೆ, ಕೋರೊನಾ ಜಾಗೃತಿ ಮಾಹಿತಿ, ಮುಂತಾದ ಕಾರ್ಯಕ್ರಮ ನಡೆಸಲಾಗುತ್ತಿದೆ. ಆರೋಗ್ಯ ಶಿಬಿರಕ್ಕೆ ವೈದ್ಯಾಧಿಕಾರಿಗಳ, ಸಹಾಯಕರ ಸೂಕ್ತ ವ್ಯವಸ್ಥೆಯನ್ನು ಹೆಲ್ತ್ ಇಂಡಿಯಾ ಕಂಪೆನಿ ಮುಂಬಯಿ ಇವರು ಒದಗಿಸಿಕೊಡುತ್ತಿದ್ದಾರೆ.

ಕಾರ್ಯಕ್ರಮದಲ್ಲಿ ಶ್ರೀ ಶ್ರೇಯಸ್‌ ಕುಮಾರ್ ಹಾಜರಿದ್ದು ಶುಭಹಾರೈಸಿ ಶಿಬಿರದ ಯಶಸ್ವಿಗೆ ಮಾರ್ಗದರ್ಶನ ನೀಡಿದ್ದರು. ಈ ಉದ್ಟಾಟನಾ ಕಾರ್ಯಕ್ರಮದಲ್ಲಿ ಶ್ರೀ. ಬಿ.ಸಿ ಅಲೆಕ್ಸ್ ಉಪಧ್ಯಾಕ್ಷರು ಹೆಲ್ತ್ ಇಂಡಿಯಾ ಟಿ.ಪಿ.ಎ, ಶ್ರೀ ಕವಲ್‌ಜೀತ್ ಗುಪ್ತ ವ್ಯವಸ್ಥಾಪಕ ನಿರ್ದೇಶಕರು, ಹೆಲ್ತ್ ಇಂಡಿಯಾ ಟಿ.ಪಿ.ಎ, ಶ್ರೀಮತಿ ಶ್ರೀ ಲತಾ ಎಡಲ್‌ವೈಸ್ ಉಪಾಧ್ಯಕ್ಷರು ಮತ್ತು ಟಿ.ಪಿ.ಎ ಹೆಲ್ತ್ ಇಂಡಿಯಾದ ಪ್ರಾದೇಶಿಕ ಮುಖ್ಯಸ್ಥರು ಶ್ರೀ ವಿಶ್ವನಾಥ್, ಶ್ರೀವಿಜಯ್ ಪ್ರಬಂಧಕರು, ಶ್ರೀ ಉಮನಾಥ್ ಕಾಮತ್ ಎಡಲ್‌ವೈಸ್ ಕಂಪೆನಿ ಮುಂಬಯಿ, ಶ್ರೀ ಕುಶಾಲಪ್ಪ, ಶ್ರೀಮತಿ ತೇಜಸ್ವಿನಿ ಹಾಜರಿದ್ದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕರು ಶ್ರೀ ಬಿ.ಜಯರಾಮ ನೆಲ್ಲಿತ್ತಾಯ, ಯೋಜನಾಧಿಕಾರಿ ಶ್ರೀ ಧರ್ಣಪ್ಪ ಮೂಲ್ಯ ಮತ್ತು ಪ್ರಬಂಧಕರು ಶ್ರೀಉದಯರವರು ಉಪಸ್ಥಿತರಿದ್ದು, ಕಾರ್ಯಕ್ರಮ ನಿರ್ವಹಣೆ ಮಾಡಿದರು.