Recent Posts

Sunday, September 22, 2024
ಅಂತಾರಾಷ್ಟ್ರೀಯಬೆಂಗಳೂರುರಾಜ್ಯಸುದ್ದಿ

 ಓಮಿಕ್ರಾನ್‌ ಪೀಡಿತ ದಕ್ಷಿಣ ಆಫ್ರಿಕಾದಿಂದ ಕರ್ನಾಟಕಕ್ಕೆ ಆಗಮಿಸಿ ನಾಪತ್ತೆಯಾಗಿದ್ದ 10 ಮಂದಿಯಲ್ಲಿ 9 ಪ್ರಯಾಣಿಕರು ಪತ್ತೆ – ಕಹಳೆ ನ್ಯೂಸ್

ಬೆಂಗಳೂರು: ಓಮಿಕ್ರಾನ್‌ ಪೀಡಿತ ದೇಶ ದಕ್ಷಿಣ ಆಫ್ರಿಕಾದಿಂದ ಕರ್ನಾಟಕಕ್ಕೆ ಆಗಮಿಸಿದ್ದ 10 ಪ್ರಯಾಣಿಕರ ಪೈಕಿ ಇಂದು 9 ಮಂದಿ ಪತ್ತೆಯಾಗಿದ್ದಾರೆ ಎಂದು ಸರ್ಕಾರ ತಿಳಿಸಿದೆ.

ದಕ್ಷಿಣ ಆಫ್ರಿಕಾದಿಂದ ಬಂದಿದ್ದ 66 ವರ್ಷ ವಯಸ್ಸಿನ ವ್ಯಕ್ತಿಗೆ ಓಮಿಕ್ರಾನ್‌ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಅದೇ ವಿಮಾನದಲ್ಲಿ 57 ಪ್ರಯಾಣಿಕರು ಬೆಂಗಳೂರಿಗೆ ಆಗಮಿಸಿದ್ದರು. ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಲಾಗಿತ್ತು. ಹಲವರ ಆರ್‌ಟಿ-ಪಿಸಿಆರ್‌ ಪರೀಕ್ಷೆಯ ವರದಿ ನೆಗೆಟಿವ್‌ ಬಂದಿದೆ. ಉಳಿದ 10 ಮಂದಿ ಕಾಣೆಯಾಗಿದ್ದರು. ಅವರು ಏರ್‌ಪೋರ್ಟ್‌ನಲ್ಲಿ ನೀಡಿದ್ದ ವಿಳಾಸ ಪತ್ತೆಯಾಗಿಲ್ಲ. ಅವರ ಫೋನ್‌ಗಳಿಗೆ ಕರೆ ಮಾಡಿದರೆ ಸ್ವಿಚ್ಡ್‌ ಆಫ್‌ ಬರುತ್ತಿದೆ ಎಂದು ಸಚಿವರು ಹೇಳಿದ್ದರು. ಇದನ್ನೂ ಓದಿ: ಮದುವೆ ಗೃಹಪ್ರವೇಶ ಸಮಾರಂಭಗಳಲ್ಲಿ 500 ಜನರಿಗೆ ಮಾತ್ರ ಅವಕಾಶ..! ಶಾಲಾ ಕಾಲೇಜುಗಳಲ್ಲಿಗೂ ಕಠಿಣ ನಿಯಮ – ಸಚಿವ ಆರ್. ಅಶೋಕ್

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು

ನಾಪತ್ತೆಯಾಗಿರುವ ಎಲ್ಲಾ 10 ಜನರನ್ನು ಪತ್ತೆಹಚ್ಚಬೇಕು. ಅವರನ್ನು ಪರೀಕ್ಷೆಗೆ ಒಳಪಡಿಸಬೇಕು. ಅವರ ವರದಿ ಬರುವವರೆಗೆ ಪ್ರಯಾಣಿಕರು ವಿಮಾನ ನಿಲ್ದಾಣದಿಂದ ಹೊರಬರಲು ಅನುಮತಿಸುವುದಿಲ್ಲ ಎಂದು ಕರ್ನಾಟಕ ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದರು. ಇದನ್ನೂ ಓದಿ:  ಅಯ್ಯೋ…! ಮನೆಯಂಗಳಕ್ಕೆ ಬಂತು ಚಿರತೆ..!!

kempegowda airport bengaluru

ಈ ವೇಳೆ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿದ್ದು, 9 ಮಂದಿ ಪತ್ತೆಯಾಗಿದ್ದಾರೆ. ಮತ್ತೊಬ್ಬನ ಪತ್ತೆಗೆ ಕಾರ್ಯಾಚರಣೆ ಮುಂದುವರಿದಿದೆ.