Recent Posts

Sunday, September 22, 2024
ಉಡುಪಿಸುದ್ದಿ

ಉಡುಪಿ : ಶಾಲಾ ವಿದ್ಯಾರ್ಥಿಗಳ ಜೊತೆ ನಿಂತು ನಾಡಗೀತೆಗೆ ಗೌರವ ಸಲ್ಲಿಸಿದ ಹಸು- ಕಹಳೆ ನ್ಯೂಸ್

ಉಡುಪಿ : ರಾಷ್ಟ್ರಗೀತೆ, ನಾಡಗೀತೆಗೆ ಗೌರವ ಕೊಡಬೇಕು ಎಂಬುದು ನಿಯಮ. ಬುದ್ಧಿ ತಿಳಿದ ಮನುಷ್ಯರೇ ಕೆಲವೊಮ್ಮೆ ನಿಯಮ ಉಲ್ಲಂಘನೆ ಮಾಡಿ ಉಡಾಫೆ ತೋರಿಸುತ್ತಾರೆ. ಆದರೆ ಉಡುಪಿಯ ಶಾಲಾ ವಿದ್ಯಾರ್ಥಿಗಳು ನಾಡಗೀತೆ ಹಾಡುತ್ತಿದ್ದಂತೆ ನಾಡಗೀತೆ ಕೇಳಿದ ತಕ್ಷಣ ನಿಯಮ ಗೊತ್ತಿಲ್ಲದ ಹಸುವೊಂದು ಕೊಂಚವೂ ಅಲುಗಾಡದೆ ನಿಂತು ಗೌರವ ಸಲ್ಲಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಉಡುಪಿ ಜಿಲ್ಲೆ ಕುಂದಾಪುರ ತಾಲೂಕು ಬೈಂದೂರು ವಲಯದ ಮಾವಿನಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ದೃಶ್ಯ ಕಂಡುಬಂದಿದ್ದು, ಶಾಲಾ ವಿದ್ಯಾರ್ಥಿಗಳು ಮುಂಜಾನೆ ಪ್ರಾರ್ಥನೆ ಮಾಡುವ ಸಂದರ್ಭದಲ್ಲಿ ಹಸು ಶಾಲಾ ಆವರಣದೊಳಗೆ ಬಂದಿದೆ. ವಿದ್ಯಾರ್ಥಿಗಳು ಸಾಮೂಹಿಕವಾಗಿ ನಾಡಗೀತೆ ಹಾಡುವಾಗ ಶಿಸ್ತಿನಲ್ಲಿ ಹಸು ಒಂದೇ ಕಡೆ ನಿಂತಿದೆ.

ಜಾಹೀರಾತು

ಅದರಲ್ಲಿಯೂ ವಿಶೇಷವೆಂದರೆ ನಾಡಗೀತೆ ಮುಗಿಯುವವರೆಗೂ ಕದಲದೆ ನಿಂತಲ್ಲೆ ನಿಂತಿದ್ದು, ತದನಂತರ ಹುಲ್ಲು ಅರಸುತ್ತಾ ಹೋಗಿದೆ. ನಾಡಗೀತೆಗೆ ಹಸು ಪ್ರತಿಕ್ರಿಯಿಸಿದ ಈ ವಿಶೇಷ ದೃಶ್ಯವನ್ನು ಶಿಕ್ಷಕರೊಬ್ಬರು ಸೆರೆ ಹಿಡಿದಿದ್ದಾರೆ.