Sunday, January 19, 2025
ಕ್ರೈಮ್ದಕ್ಷಿಣ ಕನ್ನಡಸುದ್ದಿ

ಮಂಗಳೂರಿನಲ್ಲಿ ಮಾರಕಾಸ್ತ್ರ ಝಳಪಿಸಿ ದನ ಕಳವು ಮಾಡಿದ್ದ ಮೊಹಮದ್ ಸಲೀಂ ಆಂಡ್ ಗ್ಯಾಂಗ್ ಅಂದರ್ – ಕಹಳೆ ನ್ಯೂಸ್

ಮಂಗಳೂರು, ಡಿ 04 : ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಂಗ್ರಕೂಳೂರಿನ ಗೋಲ್ಡ್ ಫಿಂಚ್ ಮುಂಭಾಗದಲ್ಲಿ ಶುಕ್ರವಾರ ಮುಂಜಾನೆ 4.30ಕ್ಕೆ ಮಾರಕಾಸ್ತ್ರಗಳನ್ನು ಝಳಪಿಸಿ 3 ದನಗಳನ್ನು ಕದ್ದೊಯ್ದಿದ್ದ ಮೂವರು ದನ ಕಳ್ಳರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.


ಉಮೇಶ್ ಮಲರಾಯಸಾನ ಮತ್ತು ಉದಯ ಶೆಟ್ಟಿ ಎಂಬವರ ಮೇಯಲು ಬಿಟ್ಟ ದನದಗಳು ಆರೋಪಿಗಳು ಕದ್ದೊಯ್ದಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಳವು ಮಾಡಲು ಬಳಸಿದ ಕಪ್ಪು ಬಣ್ಣದ ಸ್ಕೋರ್ಪಿಯೋ ವಾಹನ ಕೆಎ 19 ಎಂಎ 5706 ಸಹಿತ ಆರೋಪಿಗಳಾದ ಮೊಹಮದ್ ಸಲೀಂ (32) , ಮೊಹಮದ್ ತಂಜಿಲ್ ((25) ಮೊಹಮದ್ ಇಕ್ಬಾಲ್ (23)ಎನ್ನುವವರನ್ನು ಬಂಧಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆ ಕಾರ್ಯ ಡಿಸಿಪಿ ಗಳಾದ ಹರಿರಾಮ್ ಶಂಕರ್, ದಿನೇಶ್ ಕುಮಾರ್ ಮಾರ್ಗದರ್ಶನ, ಎಸಿಪಿ ಮಹೇಶ್ ಕುಮಾರ್ ಸಲಹೆಯಲ್ಲಿ ಮೂಡಬಿದಿರೆ ಮತ್ತು ಬಜ್ಪೆ ಠಾಣಾ ಸಿಬ್ಬಂದಿಗಳ ಸಹಕಾರದೊಂದಿಗೆ ನಡೆಸಲಾಗಿದೆ.