Monday, January 20, 2025
ಬಂಟ್ವಾಳ

ಆಜಾದಿ ಕಾ ಅಮೃತ್ ಮಹೋತ್ಸವ ಮತ್ತು ಫಿಟ್ ಇಂಡಿಯಾ ಸಪ್ತಾಹದ ಸಮಾರೋಪ ಕಾರ್ಯಕ್ರಮ – ಕಹಳೆ ನ್ಯೂಸ್

ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕದಲ್ಲಿ ಆಜಾದಿ ಕಾ ಅಮೃತ್ ಮಹೋತ್ಸವ ಮತ್ತು ಫಿಟ್ ಇಂಡಿಯಾ ಸಪ್ತಾಹದ ಸಮಾರೋಪ ಕಾರ್ಯಕ್ರಮದ ಪ್ರತಿಜ್ಞೆ ವಿಧಿ ನಡೆಯಿತು.

ಕಾರ್ಯಕ್ರಮದಲ್ಲಿ ವಿದ್ಯಾಭಾರತಿ ಜಿಲ್ಲಾ ಶಾರೀರಿಕ್ ಪ್ರಮುಖ್, ಪದವಿ ಪೂರ್ವ ವಿಭಾಗದ ದೈಹಿಕ ನಿರ್ದೇಶಕರಾದ ಶ್ರೀ ಕರುಣಾಕರ ಶ್ರೀಮಾನ್ ಮಾತನಾಡುತ್ತಾ ಸರಿಯಾದ ಆಹಾರ ಕ್ರಮವನ್ನು ನಾವು ಅವಲಂಬಿಸಬೇಕು, ಉತ್ತಮ ಆರೋಗ್ಯವನ್ನು ಹೊಂದಬೇಕು ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಪದವಿ ವಿಭಾಗದ ದೈಹಿಕ ಶಿಕ್ಷಕ ಶ್ರೀ ವಿಘ್ನೇಶ್ ಶ್ರೀಮಾನ್, ಪ್ರಾಥಮಿಕ ಶಾಲೆಯ ಸಹಶಿಕ್ಷಕಿ ಶ್ರೀಮತಿ ರಾಜೇಶ್ವರಿ ಮಾತಾಜಿ ಹಾಗೂ ದೈಹಿಕ ಶಿಕ್ಷಕಿ ಕುಮಾರಿ ದಕ್ಷಾ ಮಾತಾಜಿ, ರಾಷ್ಟ್ರ ಸೇವಿಕಾ ಹೊಯ್ಸಳ ಪ್ರಾಂತ ಶಾರೀರಿಕ್ ಪ್ರಮುಖ್ ಕುಮಾರಿ ಶಿಲ್ಪಾ ಮಾತಾಜಿ, ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರು ಶ್ರೀಮತಿ ಶಾಂಭಾವಿ ಮಾತಾಜಿಯವರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರೌಢ ಶಾಲೆಯ ದೈಹಿಕ ಶಿಕ್ಷಕಿಯಾದ ಭಾಗ್ಯಶ್ರೀ ಮಾತಾಜಿಯವರು ಫಿಟ್ ಇಂಡಿಯಾ ಸಪ್ತಾಹ ಕಾರ್ಯಕ್ರಮದ ವರದಿಯನ್ನು ಮಂಡಿಸಿದರು. ವಿದ್ಯಾರ್ಥಿಗಳಾದ ಶ್ರೀಲಕ್ಷ್ಮೀ ಸ್ವಾಗತಿಸಿ, ವಾಸವಿ ನಿರೂಪಿಸಿ, ಆಶಿಕಾ ವಂದಿಸಿದರು.